ಬೆಂಗಳೂರು| ಮಾಜಿ ಶಾಸಕ ಎಲ್​. ಆರ್​. ಶಿವರಾಮೇಗೌಡ ಮತ್ತೆ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಇಂದು ಭಾನುವಾರ ಮಾಜಿ ಸಂಸದ, ಮಾಜಿ ಶಾಸಕ ಎಲ್​.ಆರ್​.ಶಿವರಾಮೇಗೌಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಮತ್ತು ಪುತ್ರ ಮಂಜೇಗೌಡ, ಬ್ರಿಜೇಶ್ ಕಾಳಪ್ಪ ಮತ್ತು ಎಲ್.ಎಸ್.ಚೇತನ್ ಗೌಡ ಕಾಂಗ್ರೆಸ್ ಸೇರ್ಪಡೆಯಾದರು. ಬೆಂಗಳೂರು

ಎಲ್.ಆರ್. ಶಿವರಾಮೇಗೌಡ ಬೆಂಬಲಿಗರೂ ಕೂಡ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್​ ಸೇರಿದ್ದಾರೆ.

ಎಲ್​ಆರ್​ ಶಿವರಾಮೇಗೌಡ ಇತ್ತೀಚಿಗೆ ಬಿಜೆಪಿ ಸೇರಿದ್ದರು. ಇದೀಗ ಮರಳಿ ಕಾಂಗ್ರೆಸ್​ ಪಕ್ಷ ಸೇರಿಕೊಂಡಿದ್ದಾರೆ. ಕಾಂಗ್ರೆಸ್​ ತೊರೆದು ಆಮ್​ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದ ಬ್ರಿಜೇಶ್​ ಕಾಳಪ್ಪ ಕೂಡ ಮರಳಿ ಮಾತೃ ಪಕ್ಷಕ್ಕೆ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ: ಕಾರವಾರ| ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆ ಸೇತುವೆಯ 1 ಭಾಗ ಕುಸಿತ

ಎಲ್​ ಆರ್ ಶಿವರಾಮೇಗೌಡ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದು ಎಲ್​ ಆರ್​ ಶಿವರಾಮೇಗೌಡ ಕಾಂಗ್ರೆಸ್​ ಸೇರ್ಪಡೆ ಬಹುತೇಕ ಖಚಿತ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದವು.

ಮಾಜಿ ಸಂಸದ ಜಿ. ಮಾದೇಗೌಡ ಅವರ ಬಗ್ಗೆ ಹಗುರ ಮಾತನಾಡಿ ಜೆಡಿಎಸ್​ನಿಂದ ಉಚ್ಚಾಟನೆಗೊಂಡಿದ್ದ ಎಲ್​ಆರ್ ಶಿವರಾಮೇಗೌಡ ಅವರು 2023ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಬಿಜೆಪಿಗೆ ರಾಜಿನಾಮೆ ನೀಡಿ ಮತ್ತೆ ಕಾಂಗ್ರೆಸ್​ ಸೇರಿದ್ದಾರೆ.

ಇದನ್ನೂ ನೋಡಿ: Union Budget 2025-2026 Budget neglected women- they are the worst sufferers – Mariam Dhawale

Donate Janashakthi Media

Leave a Reply

Your email address will not be published. Required fields are marked *