ಜೆಡಿಯು ಮಾಜಿ ನಾಯಕ ಅಜಯ್ ಅಲೋಕ್ ಬಿಜೆಪಿ ಸೇರ್ಪಡೆ

 ನವದೆಹಲಿ: ಜೆಡಿಯು ಮಾಜಿ ನಾಯಕ ಅಜಯ್ ಅಲೋಕ್ ಅವರು ಶುಕ್ರವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಅಜಯ್ ಅಲೋಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಅಶ್ವಿನಿ ವೈಷ್ಣವ್ ಅವರು, ಅಲೋಕ್ ಅವರ ಒಬ್ಬ ತೀಕ್ಷ್ಣವಾದ ವಿಶ್ಲೇಷಕ ಎಂದು ಶ್ಲಾಘಿಸಿದರು. ಕೇಸರಿ ಪಕ್ಷ ಸೇರಿದ ನಂತರ ಮಾತನಾಡಿದ ಅಲೋಕ್, ಬಿಜೆಪಿಗೆ ಸೇರುವುದು ಒಂದು ಕುಟುಂಬಕ್ಕೆ ಸೇರಿದಂತೆ. ಮೋದಿ ಮಿಷನ್ಗೆ ತಮ್ಮ ಕೊಡುಗೆ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರ್ಪಡೆ

ಜೆಡಿಯು ಸರ್ವೋಚ್ಚ ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗಿನ ವೈಮನಸ್ಸಿನ ನಂತರ ಪಕ್ಷದ ತೊರೆದ ಮಾಜಿ ಅಧ್ಯಕ್ಷ ಆರ್ ಸಿ ಪಿ ಸಿಂಗ್ ಅವರ ನಿಕಟವರ್ತಿಯಾಗಿದ್ದರಿಂದ ಅಲೋಕ್ ಅವರನ್ನು ಕಳೆದ ವರ್ಷ ಜೆಡಿಯುನಿಂದ ಹೊರಹಾಕಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *