ಅಸ್ಸಾಂ ಮಾಜಿ ಗೃಹ ಸಚಿವರ ಪುತ್ರಿ ಆತ್ಮಹತ್ಯೆ

ಗುವಾಹಟಿ: ನಗರದಲ್ಲಿ ಮಾರ್ಚ್‌ 30 ಭಾನುವಾರದಂದು, ಅಸ್ಸಾಂ ಮಾಜಿ ಗೃಹ ಸಚಿವರ ಪುತ್ರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅಸ್ಸಾಂ

ಮಾಜಿ ಗೃಹ ಸಚಿವ ದಿ.ಭಾರಿಗು ಕುಮಾರ್ ಫುಕನ್ ಮಗಳು ಉಪಾಸನಾ ಫುಕನ್ (28) ಆತ್ಮಹತ್ಯೆಗೆ ಶರಣಾದವರು. ಮನೆಯ ಎರಡನೇ ಮಹಡಿಯಿಂದ ಜಿಗಿದು ಉಪಾಸನಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ವೃದ್ಧೆಯ ಮೇಲೆ ಅತ್ಯಾಚಾರ: ವಿಚಾರಣೆಯ12ನೇ ದಿನಕ್ಕೆ ಕೋರ್ಟ್ ತೀರ್ಪು

ಗಂಭೀರ ಸ್ಥಿತಿಯಲ್ಲಿದ್ದ ಉಪಾಸನಾ ಅವರನ್ನು ತಕ್ಷಣ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

ಉಪಾಸನಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆ ಪ್ರಕಾರ ಅವರು ದೀರ್ಘ ಕಾಲದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಈ ಹಿಂದೆಯೂ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ನೋಡಿ: ವಚನಾನುಭವ 24| ನಿಮ್ಮ ತೊತ್ತು ಸೇವೆಯೇ ಸಾಕು | ಗಜೇಶ ಮಸಣಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *