ಸಂವಿಧಾನದ ರಕ್ಷಣೆಗೆ ಇಂಡಿಯಾ ಮೈತ್ರಿಕೂಟ ರಚನೆ: ಚುನಾವಣಾಬಾಂಡ್‌ ಬಗ್ಗೆ ಮಾತನಾಡುವಾಗ ಮೋದಿಯ ಕೈ ನಡುಗುತ್ತಿದ್ದವು- ರಾಹುಲ್‌ ಗಾಂಧಿ

ಮಂಡ್ಯ : ಸಂಘಪರಿವಾರ ಮತ್ತು ಬಿಜೆಪಿ ಲೋಕತಂತ್ರ ಸಂವಿಧಾನವನ್ನು ನಾಶಮಾಡಲು ಹೊರಟಿದೆ. ಈ ಚುನಾವಣೆ ಸಂವಿಧಾನವನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟ ರಚಿಸಲಾಗಿದೆ. ಕೇವಲ 20-25 ಜನರ ಕೋಟ್ಯಾಂತರ ಶ್ರೀಮಂತರಿಗಾಗಿ ಬಿಜೆಪಿ ಸರ್ಕಾರವನ್ನು ನಡೆಸುತಿದೆ.ಆಧರೆ ನಾವು ಅಧಿಕಾರಕ್ಕೆ ಬಂದಲ್ಲಿ ಸಾಮಾನ್ಯರ, ಬಡವರ, ರೈತರ ಅಭಿವೃದ್ಧಿಯನ್ನು ಮಾಡಲಿದ್ದೇವೆ ಎಂದು ಎಐಸಿಸಿ ನಾಯಕರೂ ಆಗಿರುವ ವೈನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. ರಾಹುಲ್‌ ಗಾಂಧಿ

ಮಂಡ್ಯದಲ್ಲಿ ನಡೆದ ಕಾಂಗ್ರೆಸ್‌ ಬೃಹತ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ ನೀಡಿದಂತಹ ಸಂದರ್ಶನವೊಂದರಲ್ಲಿ ಎಲೆಕ್ಟ್ರೋರಲ್‌ ಬಾಂಡ್‌ಗಳ ವಿಚಾರವನ್ನು ಮಾತಾಡಿದಾಗ ಅದರ ಸಮಾಜಾಯಿಷಿ ನೀಡಲು ಮುಂದಾದರು. ಆ ಸಂದರ್ಶನ ಗೂಗಲ್ನಲ್ಲಿ ಸಿಗುತ್ತದೆ. ನೀವೆಲ್ಲಾ ಅದನ್ನು ನೋಡಿದರೆ, ಚುನಾವಣಾ ಬಾಂಡ್‌ ಮಾತನಾಡುವಾಗಾ ಮೋದಿಯ ಕೈ ನಡುಗುತ್ತಿದ್ದವು. ಚುನಾವಣಾ ಬಾಂಡ್‌ ಮೂಲಕ ಸ್ವಚ್ಚತೆ ಬರುತ್ತದೆ ಎಂದಿದ್ದರು. ಯಾರಿಂದ ಪಡೆದುಕೊಂಡರು?ಎಲ್ಲಿಗೆ ಹೋಯಿತು?ಈ ಬಾಂಡ್‌ ಎನ್ನುವುದನ್ನು ಮುಚ್ಚಿಟ್ಟರು. ವಿಶ್ವದಲ್ಲಿಯೇ ದೊಡ್ಡ ಹಗರಣ ಈ “ಚುನಾವಣಾ ಬಾಂಡ್‌ ಹಗರಣ”.

ಬಹಿರಂಗವಾಗಿ ಚುನಾವಣಾ ಬಾಂಡ್‌ ಬಗ್ಗೆ ಹೇಳಬೇಕೆಂದು ಸುಪ್ರೀಂಕೋರ್ಟ್‌ ಹೇಳಿದೆ. ಕೆಲವು ಕಂಪೆನಿಗಳಿಗೆ ಕೆಲಸ ನೀಡಿ, ಎಲೆಕ್ಷನ್‌ ಬಾಂಡ್‌ ಪಡೆದಿದ್ದಾರೆ. ಕೆಲವು ಕಂಪೆನಿಗಳ ಮೇಲೆ ಸಿಬಿಐ,ಈಡಿ, ಐಟಿ ದಾಳಿ ನಡೆಸಿ ಚುನಾವಣಾ ಬಾಂಡ್‌ಗಳನ್ನು ಪಡೆದಿದ್ದಾರೆ. ಇದು ಸ್ಪಷ್ಟವಾಗಿ ಸತ್ಯವಾಗಿದೆ. ನಮ್ಮ ಮಧ್ಯೆ ಇರುವ ಗೂಂಡಾಗಳನ್ನು ಬಿಟ್ಟು ಹಣ ಪಡೆಯುವುದು, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಗಂಭೀರವಾದ ಹಗಣ ಎಲೆಕ್ಟ್ರೋರಲ್‌ ಬಾಂಡ್‌, ಈ ಬಗ್ಗೆ ಸಮಜಾಯಿಷಿ ನೀಡುವಾಗ ಮೋದಿಯ ಕೈ ನಡುಗುತ್ತಿದ್ದವು ಎಂದರು.

ಬಡವರ,ಸಾಮಾನ್ಯ ಜನರ, ರೈತರ ಮಾಧ್ಯಮಗಳು ಈಗ ಇಲ್ಲ. ಒಂದುಕಡೆ ಬಿಜೆಪಿ ಇನ್ನೊಂದು ಕಡೆ ಬಿ-ಟೀಮ್‌ ಇದೆ. ಕೇವಲ ಇದು ಬಿಜೆಪಿಯ ಬೀ-ಟೀಮ್‌ ಅಲ್ಲ, 24 ಗಂಟೆ ಪರಸ್ಪರ ಸಹಕರಿಸುವ ಪಾರ್ಟನರ್‌ ಆಗಿದ್ದಾರೆ. ಭಾರೀ ಬಹುಮತದಿಂದ ಮಂಡ್ಯ ಸೇರಿದಂತೆ ರಾಜ್ಯದ ಎಲ್ಲಾ ಕಾಂಗ್ರೆಸ್‌ ಅನ್ನು ಬೆಂಬಲಿಸಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ. ಪಕ್ಷದ ಸಿಪಾಯಿಗಳಂತೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ನಮ್ಮ ಸರ್ಕಾರ ಭರವಸೆಗಳನ್ನು ನೀಡಿದಂತೆ ಐದಕ್ಕೆ ಐದು ಗ್ಯಾರೆಂಟಿಗಳನ್ನು ಜನರಿಗೆ ತಲುಪಿಸಿದೆ.1 ಕೋಟಿ ಮಹಿಳೆಯರಿಗಿಂತ ಹೆಚ್ಚಿನ ಮಹಿಳೆಯರಿಗೆ 2 ಸಾವಿರ ರೂಪಾಯಿ ನೀಡುತ್ತಿರುವುದರಿಂದ ಸಾಕಷ್ಟು ಬದಲಾವಣೆಯಾಗಿದೆ. 240000 ಸಾವಿರ ರೂಆಯಿ ಪ್ರತಿ ವರ್ಷ ಅವರ ಖಾತೆಗೆ ಜಮಾ ಆಗುತ್ತಿದೆ. 1.5 ಕುಟುಂಬಗಳಿಗೆ 200 ಯುನಿಟ್‌ ಉಚಿತ ವಿದ್ಯುತ್‌, ಅನ್ನಭಾಗ್ಯದಡಿ 1 ಕೋಟಿಗೂ ಹೆಚ್ಚಿನ ಕುಟುಂಬಗಳಿಗೆ ಅಕ್ಕಿ ಸೇರುತ್ತಿದೆ. ಯುವನಿಧಿಯೋಜನೆಯಡಿ ಪದವೀಧರರಿಗೆ 1.5 ಲಕ್ಷ ಜನರಿಗೆ ಸಹಾಯವಾಗಿದೆ. ಕರ್ನಾಟಕದ ರಾಜ್ಯದ ಉದ್ದಕ್ಕೂ ಸರ್ಕಾರದ ಬಸ್‌ಗಳಲ್ಲಿ ಪ್ರಯಾಣಿಸುತ್ತಿದೆ. ಲೋಕಸಭಾಚುನಾವಣೆ ಸಂದರ್ಭದಲ್ಲಿ ಎಐಸಿಸಿ ಐದು ಗ್ಯಾರೆಂಟಿಗಳನ್ನು ಜಾರಿಮಾಡಿದೆ ಎಂದು ರಾಹುಲ್‌ ಗಾಂಧಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಯೋಜನೆಗಳ ಉಪಯೋಗಗಳನ್ನು ವಿವರಿಸಿದರು.

ಇದನ್ನು ಓದಿ : ಕೃಷಿ ಬಿಕ್ಕಟ್ಟಿಗೆ ಕಾರಣವಾದ ರೈತ ವಿರೊಧಿ ಮೋದಿ, ಬಿಜೆಪಿ ಮತ್ತು ಮಿತ್ರ ಪಕ್ಷ ಜೆಡಿಎಸ್ ಸೋಲಿಸಿ

ಬಿಜೆಪಿ ಇರುವ ಕಡೆಗಳಲೆಲ್ಲಾ ರೈತರ ಸಂಕಷ್ಟವಿದೆ. ಕರ್ನಾಟಕದಲ್ಲಿಯೂ ರೈತರ ಸಮಸ್ಯೆಗಳನ್ನು ಬಿಜೆಪಿ ಆಲಿಸಿಲ್ಲ. ರೈತರು ನ್ಯಾಯ ಬೇಡುತ್ತಿದ್ದಾರೆ.ರೈತರು ಯಾರಿಗೂ ಕೈ ಚಾಚುತ್ತಿಲ್ಲ. 4 ಸಾವಿರ ಕಿ.ಮೀ ವರೆಗೆ ಭಾರತ್‌ ಜೋಡೋ ಯಾತ್ರೆಯಡಿ ಪಾದಯಾತ್ರೆ ಇಡೀ ದೇಶದಲ್ಲಿ ರಾಜ್ಯದ ರೈತರ ಜೊತೆ ಮಾತನಾಡಿದ್ದೇನೆ. ಪ್ರತಿ ರೈತನಿಗೆ ತಾನು ಬೆಳೆದ ಬೆಳೆಗೆ ಮಾರುಕಟ್ಟೆಗೆ ತಕ್ಕ ಬೆಲೆ ಅಗತ್ಯವಾಗಿದೆ. ಕೋಟ್ಯಾಂತರ 25 16 ಲಕ್ಷ ಕೋಟಿ ರೂಪಾಯಿ ಸಿರಿವಂತರ ಸಾಲಮನ್ನಾ ಆಗಿದೆ. ಆದರೆ, ರೈತರ ಸಾಲ ಮನ್ನಾ ಏಕೆ ಆಗಿಲ್ಲ. 24 ವರ್ಷದ ಮನರೇಗಾ ಹಣ ಶ್ರೀಮಂತರ ಸಾಲಮನ್ನಾ ಮಾಡಲು ಹೋಗಿದೆ. ರೈತರಿಂದ ಹಣ ತೆಗೆದುಕೊಂಡು ಅತಿವೃಷ್ಠಿ ಅನಾವೃಷ್ಠಿಯಾದಾಗ ಭೀಮಾಯೋಜನೆಯ ಪರಿಹಾರ ಕೊಡುತ್ತಿಲ್ಲ.

ಕಾಂಗ್ರೆಸ್‌ ಪಕ್ಷ ರೈತರಿಗಾಗಿ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕೆ ಬಂದಲ್ಲಿ, ನ್ಯಾಯಬದ್ಧ ಕನಿಷ್ಠ ಬೆಂಬಲ ಬೆಲೆ, ರಾಷ್ಟ್ರೀಯ ಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ, 30 ದಿನಗಳಲ್ಲಿ ಭೀಮಾಯೋಜನೆಯ ಹಣ ರೈತರಿಗೆ ಮುಟ್ಟಿಸುತ್ತೇವೆ. ಮಹಳೆಯರು ಈ ರಾಷ್ಟ್ರದ ಸೇವಕರಾಗಿ ಮುಂದಿನ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಾರೆ. ಪುರುಷರು 8 ಗಂಟೆ ಕೆಲಸ ಮಾಡಿದರೆ, ಮಹಿಳೆಯರು ಅಧಕ್ಕಿಂತ ಹೆಚ್ಚುಗಂಟೆ ಕೆಲಸ ಮಾಡುತ್ತಾರೆ. ಕಾಂಗ್ರೆಸ್‌ ಸರ್ಕಾರ ಇಂಡಿಯಾಘಟ್‌ ಬಂಧನ್‌ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಒಂದು ವರ್ಷಕ್ಕೆ ಒಂದು ಲಕ್ಷ 24 ಸಾವಿರ ರೂಪಾಯಿ ನೀಡಲಿದ್ದೇವೆ. 8500 ರೂ ಮಹಿಳೆಯರ ಖಾತೆಗೆ ನೇರವಾಗಿ ಪ್ರತಿ ತಿಂಗಳು ಕರ್ನಾಟಕದ ಮಹಿಳೆಯರಿಗೆ ಶಕ್ತಿಯೋಜನೆಯ ಹಣದ ಜೊತೆ ಕೊಡುವುದಾಗಿ ರಾಹುಲ್‌ ಗಾಂಧಿ ಎಐಸಿಸಿ ಪ್ರಣಾಳಿಕೆಯ ಅಂಶಗಳನ್ನು ಸ್ಪಷ್ಟವಾಗಿ ವಿವರಿಸಿದರು.

ಬಡ ಕುಟುಂಬದ ಮಹಿಳೆಗೆ ಯಾವುದೇ ಕಾರಣಕ್ಕೂ ತಪ್ಪಿಸದೇ ಹಾಕುತ್ತೇವೆ. ಕೋಟ್ಯಾಂತರ ಜನರ ಜೀವನ ಬದಲಾವಣೆಯಾಗಲಿದೆ. ಇದು ಕ್ರಾಂತಿಕಾರಕ ಬದಲಾವಣೆ. ಕನಸುಮನಸಿನಲ್ಲಿ ಇಂತಹ ಅಭಿವೃದ್ಧಿ ಕೆಲಸವನ್ನು ಯಾರೂ ಸಹ ಊಹಿಸಿರಲಿಲ್ಲ. ʼಪೆಹಲಿನೌಕರಿ ಪಕ್ಕಿʼ . ಪದವೀ ಮಾಡಿದ ಕೂಡಲೇ ಮೊದಲ ಕೆಲಸವನ್ನು ಕೊಡುವ ಕೆಲಸ ಕಾಂಗ್ರೆಸ್‌ ಮಾಡಲಿದೆ. ಡಿಪ್ಲೋಮಾ, ಯುನಿವರ್ಸಿಟಿ ಪದವೀಧರರಿಗೆ ಮುಂದಿನ ಭವಿಷ್ಯಕ್ಕಾಗಿ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ಬಂದಲ್ಲಿ ಮಾಡಲಿದೆ.

ಶ್ರೀಮಂತರ ಮಕ್ಕಳು, ಸರ್ಕಾರಿ ಕೆಲಸ, ಕಂಪೆನಿಗಳಲ್ಲಿ ಶಿಫಾರಸ್ಸಿನ ಮೂಲಕ ಕೆಲಸ ಅಪ್ರೆಂಟಿಷಿಸನ್‌ ಮಾಡುತ್ತಾರೆ.ಕಡುಬಡವ ನಿರುದ್ಯೋಗ ಪದವೀಧರರಿಗೆ ಒಂದು ವರ್ಷದ ಅಪ್ರೆಂಟಿಷನ್‌ ಕಾಂಗ್ರೆಸ್‌ ನೀಡಿ ಪ್ರತಿತಿಂಗಳು 8.5 ಸಾವಿರ ರೂಪಾಯಿ ನೀಡಲಿದೆ. ಬೆಸ್ಟ್‌ ಕ್ವಾಲಿಟಿಯ ಟ್ರೈನಿಂಗ್‌ ಸಿಗಲಿದೆ. ಉತ್ತಮ ತರಬೇತಿ ಹೊಂದಿದ ಯುವಕರು ಸಿಗುತ್ತಾರೆ. ನಿಮ್ಮ ನೌಕರಿ ಪಕ್ಕಿ ಆಗಲಿದೆ. ತರಬೇತಿ ಸಂದರ್ಭಧಲ್ಲಿ ಉತ್ತಮವಾಗಿ ಕೆಲಸ ಮಾಡಿದಲ್ಲಿ,ಅವರಿಗೆ ಅಪ್ರಿಂಟೇಷನ್‌ ಟ್ರೈನಿಂಗ್‌ ಯುವಕಯುವತಿಯರಿಗೆ ವಿಶ್ವದಲ್ಲಿಯೇ ಮೊದಲ ಬಾರಿಗೆ ನೌಕರಿ ಪಕ್ಕಾ ಆಗಿ ನೀಡಲಿದ್ದೇವೆ. ಹಿಂದೂಸ್ತಾನದಲ್ಲಿ ನರೇಗಾದಡಿ 400ರೂ.ಪ್ರತಿ ದಿನ ಕೂಲಿ.

ಮನರೇಗಾ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತಾರವಾಗಲಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಭಾವನೆ ದುಪ್ಪಟ್ಟು ಮಾಡಲಿದ್ದೇವೆ. ಪಬ್ಲಿಕ್‌ ಸೆಕ್ಟರ್‌, ಸರ್ಕಾರ ಮಟ್ಟದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಗುತ್ತಿಗೆ ಆಧಾರದ ಕೆಲಸವನ್ನು ಸರ್ಕಾರಿ ಮತ್ತು ಅರೆಸರ್ಕಾರಿ ಮಟ್ಟದಲ್ಲಿ ಪರ್ಮನೆಂಟ್‌ ಮಾಡಲಿದೆ. ಸರ್ಕಾರ ಮತ್ತು ಅರೆಸರ್ಕಾರಿ ನೌಕರಿಯಲ್ಲಿ ಗುತ್ತಿಗೆಯನ್ನು ತೆಗೆದು ಅವರ ಜಾಬ್‌ ಸೆಕ್ಯೂರಿಟಿ ಆಗಲಿದೆ. ರೆಸ್ಪೆಕ್ಟ್‌ ಜಾಬ್‌ ಸೆಕ್ಯುರಿಟಿ ಯುವಕರಿಗೆ ನೀಡಲಿದ್ದೇವೆ ಎಂದು ರಾಹುಲ್‌ ಗಾಂಧಿ ಒತ್ತಿ ಹೇಳಿದರು.

ಇದನ್ನು ನೋಡಿ : ಬಿಜೆಪಿಯನ್ನು ಸೋಲಿಸುವುದು ದೇಶಪ್ರೇಮದ ಕೆಲಸ – ಯು. ಬಸವರಾಜ

Donate Janashakthi Media

Leave a Reply

Your email address will not be published. Required fields are marked *