ಕೊಪ್ಪಳ : ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ ಮಡಿ ಜಡ್ಜ್ ಸಹಿಯನ್ನೇ ನಕಲು ಮಾಡುತ್ತಿದ್ದ ಆರೋಪಿಯ ವಿರುದ್ದ FIR ದಾಖಲಿಸಲಾಗಿದೆ.
ಸಿದ್ದಲಿಂಗಯ್ಯ ಹಿರೇಮಠ ವಿರುದ್ಧ ವಂಚನೆ ಆರೋಪ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರೋಸೆಸ್ ಸರ್ವರ್, ಜವಾನ ಹುದ್ದೆ ಖಾಲಿ ಇದೆ ಎಂದು ಜನರಿಗೆ ನಂಬಿಸುತ್ತಿದ್ದ. ಅಲ್ಲದೇ ಉದ್ಯೋಗ ಕೊಡಿಸುತ್ತೇನೆ ಎಂದು ಪ್ರತಿಯೊಬ್ಬರ ಬಳಿ 7 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ನಿವಾಸಿ ಅಬ್ದುಲ್ ರಜಾಕ್ ದೂರು ಆಧರಿಸಿ ಈತನ ವಿರುದ್ಧ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಪೊಲೀಸ್ ಠಾಣೆಯಲ್ಲಿ 2024, ಜುಲೈ 31ರಂದು ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ನಕಲಿ ವೈದ್ಯ ಹಾಗೂ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಮೆಡಿಕಲ್ ಶಾಪ್ ಬಂದ್; 1 ಲಕ್ಷ ರೂ. ದಂಡ
ತನಗೆ ನ್ಯಾಯಾಧೀಶರು ಪರಿಚಯವಿದ್ದಾರೆ ಎಂದು ಅಭ್ಯರ್ಥಿಗಳನ್ನು ನಂಬಿಸಿ ವಂಚಿಸಿದ್ದಾನೆ. ತಮ್ಮ ಚಿಕ್ಕಪ್ಪನ ಪುತ್ರ ಜಾವೀದ್ಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆರೋಪಿ 7 ಲಕ್ಷ ರೂ. ಪಡೆದಿದ್ದಾನೆ. ತನ್ನ ಪರಿಚಿತ ರಘು ಬಿ.ಎಸ್., ಆರುಣ್, ಪ್ರತಾಪ್ ಕೆ.. ಯೋಗಾನಂದ, ಶಾಂತಕುಮಾರ್ ಸಿ., ಮನು ಎಸ್. ಸೇರಿ ಇತರರಿಗೆ ಕೊರ್ಟ್ನಲ್ಲಿ ಪ್ರೋಸೆಸ್ ಸರ್ವರ್ ಕೆಲಸ ಕೊಡಿಸುವುದಾಗಿ ಹೇಳಿ ಆರೋಪಿ ಒಟ್ಟು 49 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಆರೋಪಿ ಹಣ ಪಡೆದವರಿಗೆ ನಕಲಿ ನೇಮಕಾತಿ ಪತ್ರ ಕೊಟ್ಟಿದ್ದಾನೆ. ಅಲ್ಲದೇ ನೇಮಕಾತಿ ಪತ್ರದಲ್ಲಿ ನ್ಯಾಯಮೂರ್ತಿಗಳ ಸಹಿಯನ್ನು ನಕಲಿ ಮಾಡಿದ್ದಾನೆ. ರಾಜ್ಯದ ಹಲವೆಡೆ ಇಂತಹ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ತನಿಖೆ ಮುಂದುವರಿದಿದೆ. ಈ ವಂಚನೆ ಜಾಲದಲ್ಲಿ ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಯ ಯುವಕರು ಸಿಲುಕಿ, ಹಣ ಕಳೆದುಕೊಂಡಿರುವ ವಿಚಾರ ಗಮನಕ್ಕೆ ಬಂದಿಲ್ಲ. ಯಾರಿಗಾದರೂ ಅನ್ಯಾಯ ಆಗಿದ್ದು, ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಕೊಪ್ಪಳ ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ ತಿಳಿಸಿದ್ದಾರೆ.
ಇದನ್ನು ನೋಡಿ : GST ಕುರಿತು ಪ್ರಶ್ನೆ ಕೇಳಿದ ಉದ್ಯಮಿ; ಕ್ಷಮೆ ಕೇಳಿಸಿದರೇ ನಿರ್ಮಲಾ ಸೀತಾರಾಮನ್?Janashakthi Media