ತುಮಕೂರು| ಚಿತ್ರತಂಡದ ಮೇಲೆ ಅರಣ್ಯಾಧಿಕಾರಿಗಳ ದಾಳಿ

ತುಮಕೂರು: ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆ ನೀಡಿದದ್ದೂ, ಅಷ್ಟರಲ್ಲೇ ಅರಣ್ಯಾಧಿಕಾರಿಗಳ ದಾಳಿ ಚಿತ್ರತಂಡದ ಮೇಲೆ ನಡೆದಿದೆ. ತುಮಕೂರು

ನಾಮ ಚಿಲುಮೆಯ ಬಳಿ ಚಿತ್ರೀಕರಣ ನಡೆಸುತ್ತಿದ್ದ “ರಾಣಾ” ಚಿತ್ರತಂಡದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅನುಮತಿ ಇಲ್ಲದೇ ಚಿತ್ರೀಕರಣ ನಡೆಸಿದ್ದಕ್ಕಾಗಿ ಕೇಸು ಜಡಿದಿದ್ದಾರೆ.

ಇದನ್ನೂ ಓದಿ: IPS ಅಧಿಕಾರಿಗಳ ಕಿತ್ತಾಟ: ವರ್ತಿಕಾ ವರ್ಗಾವಣೆ ಬೆನ್ನಲ್ಲೇ ರೂಪಾ ಮೌದ್ಗಿಲ್ ಎತ್ತಂಗಡಿ

ನಟಿ ರಕ್ಷಿತಾ ಪ್ರೇಮ್‌ ಸೋದರನಾಗಿರುವ ರಾಣಾ (ಅಭಿಷೇಕ್‌) ನಟನೆಯ ಸಿನಿಮಾಗೆ ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ನಿರ್ದೇಶನದ ಹೊಣೆ ಹೊತ್ತಿದ್ದರು. ತರುಣ್‌ ಸುಧೀರ್‌ ಕ್ರಿಯೇಟಿವ್‌ ಹೆಸರಿನಲ್ಲಿ ಅನುಮತಿಗೂ ಸಹ ಮನವಿ ಸಲ್ಲಿಸಲಾಗಿತ್ತು.

ಆದರೆ ಅನುಮತಿ ಸಿಗದಿದ್ದರೂ ಚಿತ್ರೀಕರಣ ನಡೆಸುತ್ತಿರುವ ಆರೋಪದ ಮೇಲೆ ತುಮಕೂರಿನ ಎಸಿಎಫ್‌ ಪವಿತ್ರಾ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಚಿತ್ರೀಕರಣದಲಿ ಸುಮಾರು ಮಂದಿ ಭಾಗಿಯಾಗಿದ್ದು, ಅಲ್ಲಿದ್ದ ಕ್ಯಾರವಾನ್‌ , ಕ್ಯಾಮೆರಾ ಲೈಟ್‌ , ಅಡುಗೆ ಸಾಮಾಗ್ರಿಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ನೋಡಿ: ಶ್ರಮಜೀವಿಗಳ ಹೋರಾಟ | ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ |CITU

Donate Janashakthi Media

Leave a Reply

Your email address will not be published. Required fields are marked *