5 ಹುಲಿಗಳ ಸಾವು: ಆರೋಪಿಗಳನ್ನು 3 ದಿನ ವಶಕ್ಕೆ ಪಡೆದುಕೊಂಡ ಅರಣ್ಯ ಇಲಾಖೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ 5 ಹುಲಿಗಳನ್ನು ವಿಷ ಹಾಕಿ ಕೊಂದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 3 ಆರೋಪಿಗಳನ್ನು ಜೂನ್‌ 30 ಸೋಮವಾರದಂದು ಅರಣ್ಯ ಇಲಾಖೆ ಅಧಿಕಾರಿಗಳು ಹನೂರಿನ ಸಿವಿಲ್ ಮತ್ತು JMFC ಕೋರ್ಟಿಗೆ ಹಾಜರುಪಡಿಸಿದ್ದರು.

ಮೂವರು ಆರೋಪಿಗಳನ್ನು ಕೋನಪ್ಪ ಮಾದುರಾಜು ಹಾಗು ನಾಗರಾಜು ಎಂದು ಗುರುತಿಸಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮೂವರನ್ನು ಹೆಚ್ಚಿನ ವಿಚಾರಣೆಗೆ ಮೂರು ದಿನ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ ಸರಣಿ ಸಾವುಗಳು: 40 ದಿನಗಳಲ್ಲಿ 21 ಮಂದಿ ಮೃತ

ಚಾಮರಾಜನಗರ ಜಿಲ್ಲೆಯ ಹನೂರಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

ಇದನ್ನೂ ನೋಡಿ: ಅಶ್ರಫ್ ಗುಂಪು ಹತ್ಯೆ : PUCL, APCR, AILAJ ಸತ್ಯಶೋಧನಾ ವರದಿಯಲ್ಲಿ ಆಘಾತಕಾರಿ ಅಂಶಗಳು Janashakthi Media

Donate Janashakthi Media

Leave a Reply

Your email address will not be published. Required fields are marked *