ಕಂಪನಿಕೃಷಿ ಹಾಗು ಗುತ್ತಿಗೆ ಬೇಸಾಯಕ್ಕಾಗಿ ಕರ್ನಾಟಕ
ಬಲವಂತದ ಭೂ ಸ್ವಾಧೀನವು ಜಾಗತೀಕರಣ, ಉದಾರೀಕರಣ ಹಾಗು ಖಾಸಗೀಕರಣ ನೀತಿಗಳ ಮತ್ತು ಒಪ್ಪಂದಗಳ ಭಾಗವಾಗಿದೆ. ಈ ನೀತಿಗಳನ್ನು ಹಾಗು ಒಪ್ಪಂದಗಳನ್ನು ಒಪ್ಪಿಕೊಂಡು 1994 ರಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಅಥವಾ ಕೇಂದ್ರ ಸರಕಾರ ಸಹಿ ಹಾಕಿತು ಮತ್ತು ವಿರೋಧ ಪಕ್ಷವಾದ ಬಿಜೆಪಿ ಬೆಂಬಲಿಸಿತು. ಎಡ ಪಕ್ಷಗಳು ಮುಖ್ಯವಾಗಿ ಸಿಪಿಐಎಂ ದೇಶದ ನೈಜ ಅಭಿವೃದ್ಧಿಗೆ ಪೂರಕವಾಗಿ ಚೌಕಾಸಿ ಮಾಡದೇನೆ ಒಪ್ಪಿಕೊಳ್ಳುವುದನ್ನು ವಿರೋದಿಸಿತ್ತು. ಕರ್ನಾಟಕ
ಯು. ಬಸವರಾಜ್
ಇದರ ಭಾಗವಾಗಿಯೇ ದೇಶದಲ್ಲಿ ಚರ್ಚೆಯೊಂದನ್ನು ಹರಿಬಿಡಲಾಗಿತ್ತು. ಭಾರತದಂತಹ ಮೂರನೆ ಜಗತ್ತಿನ ದೇಶಗಳು ಹಿಂದುಳಿಯಲು ಆ ದೇಶಗಳ ಕೃಷಿಯಲ್ಲಿ ಶೇ 60 ಹಾಗು ಅದಕ್ಕಿಂತಲೂ ಹೆಚ್ಚು ಜನ ತೊಡಗಿರುವುದೇ ಕಾರಣವೆಂಬ ವಾದವನ್ನು ಮುನ್ನೆಲೆಗೆ ತರಲಾಗಿತ್ತು.
ಅಮೇರಿಕಾ, ಇಂಗ್ಲೆಂಡ್ ಮುಂತಾದ ಮುಂದುವರೆದ ದೇಶಗಳಲ್ಲಿ ಕೃಷಿಯಲ್ಲಿ ತೊಡಗಿದವರು ಶೇ 3 ರಷ್ಟಕ್ಕ್ಕೆ ಮಿತಿಗೊಳಪಟ್ಟಿರುವುದು ಆ ದೇಶಗಳ ಮುಂದುವರಿಯುವಿಕೆಗೆ ಕಾರಣವೆಂದು ವ್ಯಾಪಕವಾಗಿ ಪ್ರಚುರಿಸಲಾಯಿತು.
ಮುಂದುವರೆದು, ಭಾರತದಲ್ಲಿ ಶೇ 60 ಕ್ಕೂ ಹೆಚ್ಚು ಜನತೆ ತೊಡಗಿದ ಕೃಷಿ ರಂಗದ ಕೊಡುಗೆ ದೇಶದ ಜಿಡಿಪಿಗೆ ( ಒಟ್ಟು ಆಂತರಿಕ ಉತ್ಪನ್ನ) ಕೇವಲ ಶೇ 18 ಮಾತ್ರವೆ ಆಗಿದೆಯೆಂದು ಹಿಯ್ಯಾಳಿಸಲಾಯ್ತು.
ಇದನ್ನೂ ಓದಿ: ಆನ್ ಲೈನ್ ಗೇಮ್ ನಲ್ಲಿ 18 ಲಕ್ಷ ರೂ ಕಳೆದುಕೊಂಡ ಯುವಕ ಆತ್ಮಹತ್ಯೆ
ನೋಡಿ , ಉಳಿದ ಶೇ 30 ಕ್ಕಿಂತ ಹೆಚ್ಚು ಜನರ ಜಿಡಿಪಿಯ ಕೊಡುಗೆ ಶೇ 80 ಕ್ಕಿಂತ ಹೆಚ್ಚಿದೆ ಎಂಬುದನ್ನು ಹೇಳಲಾಯಿತು. ಇಲ್ಲಿ ಕೇವಲ ದೊಡ್ಡ ಪ್ರಮಾಣದ 2-3 ಹಾಗು 5-10 ಎಕರೆ ಯ ತುಂಡು ಬೇಸಾಯಗಾರರು ಹಾಗು ಅತಿ ಹೆಚ್ಚು ಜನರು ಕೃಷಿಯನ್ನು ಆಧರಿಸಿರುವುದೇ ಕಾರಣವೆಂದು ಹೇಳಲಾಯಿತು. ದೇಶದ ಅಭಿವೃದ್ಧಿಗಾಗಿ ಕೃಷಿಯನ್ನು ಕಂಪನಿ ಬೇಸಾಯವಾಗಿ ಪರಿವರ್ತಿಸುವುದರ ಕಡೆ ಗಮನ ಹರಿಸಲಾಯಿತು. ಮುಂದುವರೆದ ದೇಶಗಳ ಮಾದರಿಯಲ್ಲಿ, ಇಲ್ಲಿನ ತುಂಡು ಬೇಸಾಯ ತಡೆದು ಲಕ್ಷಾಂತರ ಅಥವಾ ದಶ ಸಾವಿರ ಎಕರೆ ಜಮೀನನ್ನು ಹೊಂದಿದ ಕಂಪನಿ ಬೇಸಾಯಕ್ಕೆ ಅಡಿ ಇಡಲಾಯಿತು.
ಈ ಕಾರಣದಿಂದ, ಒಂದು ಕಡೆ ರೈತರು ತಾವಾಗಿಯೇ ಬಲವಂತವಾಗಿ ಜಮೀನು ಬಿಟ್ಟು ತೆರಳುವಂತಹ ಕ್ರೂರ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ, ಕೃಷಿ ಹೂಡಿಕೆಗಳಾದ ಬೀಜ, ರಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೃಷಿ ಸಾಧನೋಪಕರಣಗಳ ಮೇಲಿನ ಸಹಾಯಧನಗಳನ್ನು ನಿಲ್ಲಿಸಿ ಅವುಗಳ ಬೆಲೆಗಳ ಮೇಲಿನ ನಿಯಂತ್ರಣಗಳನ್ನು ತಗೆದು ಹಾಕಲಾಯಿತು ! ಸಾರ್ವಜನಿಕ ಸಾಲ ಸೌಲಭ್ಯವನ್ನು ತುಂಡು ಬೇಸಾಯಕ್ಕೆ ತೀವ್ರವಾಗಿ ಕಡಿತಮಾಡಿತಲ್ಲದೆ ಲಭ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಿಸಲಾಯಿತು.

ಅದೇ ರೀತಿ, ಬೆಲೆಗಳನ್ನು ಏರಿಳಿತ ಮಾಡುವ ಲೂಟಿಕೋರತನದ ಮೂಲಕ, ಅಗ್ಗದರದ ಕೃಷಿ ಉತ್ಪನ್ನಗಳನ್ನು ವ್ಯಾಪಕವಾಗಿ ಆಮದು ಮಾಡುವ ಮೂಲಕ ಇಲ್ಲಿನ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯೂ ಸಿಗದಂತೆ ಕ್ರಮವಹಿಸಲಾಗುತ್ತದೆ. ಹೀಗೆ, ಉತ್ಪಾದನಾ ವೆಚ್ಚ ಹೇರಳವಾಗಿ ಹೆಚ್ಚಿಸಿ, ಉತ್ಪನ್ನಗಳ ಬೆಲೆ ಕುಗ್ಗಿಸಿ, ರೈತರ ಹೆಗಲ ಮೇಲೆ ಸಾಲದ ಹೊರೆ ಹೆಚ್ಚಿಸಿ ಭೂಮಿ ಮಾರಿಕೊಳ್ಳುವಂತೆ ಭಾರತ ಹಾಗು ಕರ್ನಾಟಕದ ಸರಕಾರಗಳು ಕ್ರಮವಹಿಸುತ್ತಿವೆ.
ಈ ರೀತಿ, ಸಾಲಬಾಧಿತ ರೈತರು ಜಮೀನು ಮಾರಾಟ ಮಾಡಲು ಮತ್ತು ಕೃಷಿಕರಲ್ಲದವರ ಕೈಗೆ ಜಮೀನು ಸಾವಿರಾರು ಎಕರೆಗಟ್ಟಲೆ ವರ್ಗಾವಣೆ ಹೊಂದಲು ಮತ್ತು ಆ ಮೂಲಕ ಗುತ್ತಿಗೆ ಹಾಗು ಕಂಪನಿಕೃಷಿಗೆ ಅವಕಾಶ ನೀಡಲು, ಉಪ ಕಸುಬಾದ ಹೈನುಗಾರಿಕೆ, ಕೋಳಿ, ಕುರಿ ಸಾಕಾಣೆ ಕಿತ್ತುಕೊಳ್ಳಲು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020 ಹಾಗು ಏಪಿಎಂಸಿ ತಿದ್ದುಪಡಿ ಕಾಯ್ದೆ – 2020 ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಲಾಗುತ್ತಿದೆ.
13 ತಿಂಗಳ ಕಾಲ ಸಂಯುಕ್ತ ಕಿಸಾನ್ ಮೋರ್ಚಾ ದೆಹಲಿ ಸುತ್ತ ಸಂಘಟಿಸಿದ ಲಕ್ಷಾಂತರ ರೈತ ಕುಟುಂಬಗಳ ಬೃಹತ್ ಐತಿಹಾಸಿಕ ಪ್ರತಿರೋಧಕ್ಕೆ ಮಣಿದು ಶ್ರೀ ನರೇಂದ್ರ ಮೋದಿಯವರು ವಾಪಾಸು ಪಡೆದ ಈ ಕಾಯ್ದೆಗಳನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇನ್ನೂ ಉಳಿಸಿಕೊಂಡಿದೆ.
ಇದುವರೆಗೆ ಕೃಷಿಕರು ಮತ್ತು ಕೃಷಿ ಕೂಲಿಕಾರರು ಮಾತ್ರವೇ ಕೃಷಿ ಭೂಮಿಯನ್ನು ಖರೀದಿಸುವ ಅವಕಾಶವನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ ನೀಡಿತ್ತು. ಆದರೆ ಈ ಹೊಸ ತಿದ್ದುಪಡಿ ಕಾಯ್ದೆಯ ಜಾರಿಯು ಕೃಷಿಕರಲ್ಲದ ಯಾರು ಬೇಕಾದರು ಜಮೀನನ್ನು ಖರೀದಿಸಿ ಯಾತಕ್ಕೆ ಬೇಕಾದರೂ ಅವಕಾಶ ನೀಡಲಾಗಿದೆ. ಹೀಗಾಗಿ ಮತ್ತು ಭೂಮಾಲಕ ಬಂಡವಾಳದಾರರ ಮತ್ತು ವ್ಯಾಪಾರಿಗಳು, ರಾಜಕಾರಣಿಗಳು, ವೈದ್ಯರು, ದೊಡ್ಡ ದೊಡ್ಡ ಗುತ್ತಿಗೆದಾರರು, ವಕೀಲರು ಮುಂತಾದ
ಕೃಷಿಕರಲ್ಲದವರ ಕೈನಲ್ಲಿ ಕ್ರೋಢೀಕೃತ ಗೊಂಡಿದೆ.
ಇದೂ ಸೇರಿ, ಬೀಳು ಭೂಮಿ ಅಭಿವೃದ್ಧಿ ಹೆಸರಿನಲ್ಲಿ ದೇಶದ ಕೋಟ್ಯಾಂತರ ಎಕರೆ ಜಮೀನನ್ನು ಗುತ್ತಿಗೆ ( ಕಂಪನಿ) ಬೇಸಾಯಕ್ಕೆ ತೆರೆಯಲಾಗುತ್ತಿದೆ. ಕರ್ನಾಟಕದಲ್ಲಿ ಇಂತಹ ರೈತರು ಬಂಡವಾಳವಿಲ್ಲದೆ ಬೀಳು ಬಿಡಲಾದ ಜಮೀನು 50 ಲಕ್ಷ ಎಕರೆ ಯೆಂದು ಗುರುತಿಸಲಾಗಿದೆ. ಹೀಗೆ ಕಂಪನಿ ಹಾಗು ಕಾರ್ಪೋರೇಟ್ ಕೃಷಿಗೆ ಬಲವಂತವಾಗಿ ರೈತರನ್ನು ಒಕ್ಕಲೆಬ್ಬಿಸಿ ಲಕ್ಷಾಂತರ ಎಕರೆ ಜಮೀನನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ.
ಇದನ್ನೂ ನೋಡಿ: LIVE | ನಾಡ ಉಳಿಸಿ ಸಮಾವೇಶ | ಬಲವಂತದ ಭೂ ಸ್ವಾಧೀನದ ವಿರುದ್ಧ ಅನ್ನದಾತರ ಧರಣಿ
