ಗೃಹ ಲಕ್ಷ್ಮೀ ನೋಂದಣಿಗೆ: 500 ಮಹಿಳೆಯರಿಗೆ ಒಬ್ಬ ಪ್ರಜಾಪ್ರತಿನಿಧಿ ನೇಮಕ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮೊಬೈಲ್‌ ಮೂಲಕ ಅರ್ಜಿ ಸಲ್ಲಿಸಲು ನೆರವು ನೀಡುವುದಕ್ಕಾಗಿ ಪ್ರತಿ 500 ಮಹಿಳೆಯರಿಗೆ ಒಬ್ಬ ಪ್ರಜಾಪ್ರತಿನಿಧಿಯನ್ನು ಅವಕಾಶ ಕಲ್ಪಿಸಿ ಮಂಗಳವಾರ ಮಾರ್ಗಸೂಚಿ ಹೊರಡಿಸಿದೆ.

ಸ್ವಯಂ ಸೇವಕರ ರೂಪದಲ್ಲಿ ಕಾರ್ಯನಿರ್ವಹಿಸಲು ಒಂದು ತಿಂಗಳ ಅವಧಿಗೆ ಸೀಮಿತವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರತಿ 500 ಜನಸಂಖ್ಯೆಗೆ ಹೆಚ್ಚುವರಿಯಾಗಿ ಒಬ್ಬರನ್ನು ನೇಮಿಸಲು ಅವಕಾಶವಿದೆ.

ಒಂದು ಸಾವಿರ ಅಥವಾ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮಗಳಿಗೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಿಸಿಕೊಳ್ಳಬೇಕು. ಅವರಲ್ಲಿ ಒಬ್ಬರ ಮಹಿಳೆ ಕಡ್ಡಾಯವಾಗಿರಬೇಕು. ನಂತರ ಮಾರ್ಗಸೂಚಿಯಲ್ಲಿ ಪ್ರಜಾಪ್ರತಿನಿಧಿಗಳ ಆಯ್ಕೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ. ಜೂನ್‌ 16ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪ್ರಜಾಪ್ರತಿನಿಧಿಗಳನ್ನು ನೇಮಿಸಲು ಒಪ್ಪಿಗೆ ನೀಡಲಾಗಿದೆ.

Donate Janashakthi Media

One thought on “ಗೃಹ ಲಕ್ಷ್ಮೀ ನೋಂದಣಿಗೆ: 500 ಮಹಿಳೆಯರಿಗೆ ಒಬ್ಬ ಪ್ರಜಾಪ್ರತಿನಿಧಿ ನೇಮಕ

Leave a Reply

Your email address will not be published. Required fields are marked *