ಸಮಗ್ರ, ಸಮೃದ್ಧ, ಸೌಹಾರ್ದ ಕರ್ನಾಟಕಕ್ಕಾಗಿ ಡಿಸೆಂಬರ್ 29 ರಿಂದ ಸಿಪಿಐ(ಎಂ) 24 ನೇ ರಾಜ್ಯಸಮ್ಮೇಳನ

ತುಮಕೂರು: ಸಮಗ್ರ, ಸಮೃದ್ಧ, ಸೌಹಾರ್ದ ಕರ್ನಾಟಕಕ್ಕಾಗಿ ಡಿಸೆಂಬರ್ 29 ರಿಂದ 31 ರವರೆಗೆ ತುಮಕೂರಿನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ 24 ನೇ ರಾಜ್ಯ ಸಮ್ಮೇಳನ ಇಂದಿನಿಂದ ಮೂರು ದಿನಗಳ ಕಾಲ ಕಲ್ಪತರು ನಾಡು ತುಮಕೂರಿನಲ್ಲಿ ಆರಂಭಗೊಳ್ಳಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜಿಲ್ಲಾ ಸಮ್ಮೇಳನಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುನ್ನೂರಕ್ಕೂ ಹೆಚ್ಚು ಪ್ರತಿನಿಧಿ ಹಾಗೂ ವೀಕ್ಷಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಎನ್.ಕೆ ಸುಬ್ರಮಣ್ಯ ತಿಳಿಸಿದ್ದಾರೆ. ಸಮಗ್ರ

ಮೆರವಣಿಗೆಗೆ ಚಾಲನೆ: ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಬಿ.ವಿ.ರಾಘವಲು, ಸಮ್ಮೆಳನ ಅಂಗವಾಗಿ ಡಿಸೆಂಬರ್ 29 ರಂದು ಬೆಳೆಗ್ಗೆ 11 ಕ್ಕೆ ಸ್ವಾತಂತ್ರ್ಯ ಚೌಕದಲ್ಲಿ ಮೆರವಣಿಗೆಗೆ ಚಾಲನೆ ನೀಡುವರು ಈ ಸಂದರ್ಭದಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರಾದ ಕೆ.ಎನ್ ಉಮೇಶ್‌, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ನೀಲಾ, ತುಮಕೂರಿನ ಚಿಂತಕರಾದ ಸಿ.ಯತಿರಾಜು ಹಾಗೂ ಬಾ.ಹ. ರಮಾಕುಮಾರಿ ಸೇರಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು,ರಾಜ್ಯ ಸಮಿತಿ ಸದಸ್ಯರು ಹಾಗೂ ರಾಜ್ಯ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳು ಉಪಸ್ಥಿತರಿರುವರು. ಸಮಗ್ರ

ಇದನ್ನೂ ಓದಿ: ಟೋಪಿ ಧರಿಸಿ ಶಾಲೆಗೆ ಬಂದಿದ್ದಕ್ಕೆ 6ನೇ ತರಗತಿ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ

ಬಹಿರಂಗ ಸಭೆ:

ಮಧ್ಯಾನ್ಹ 12 ಗಂಟೆಗೆ ಟೌನ ಹಾಲ್‌ ಮುಂಭಾದಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಹಿರಂಗಸಭೆಯಲ್ಲಿ ಕೇರಳದ ಮಾಜಿ ಶಿಕ್ಷಣ ಸಚಿವರು ಮತ್ತು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದ್ಯರಾದ ಎಂ.ಎ.ಬೇಬಿ, ಮಾಜಿ ಸಂಸದರು ಹಾಗೂ ಸಿಪಿಐ(ಎಂ) ಪೊಲಿಟ್ ಬ್ಯೂರೋ ಎ.ವಿಜಯರಾಘವನ್, ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಸಿ ಬಯ್ಯಾರೆಡ್ಡಿ,ಎಸ್.ವರಲಕ್ಷ್ಮೀ, ಎಸ್.ಮೀನಾಕ್ಷೀ ಸುಂದರಂ ಹಾಗೂ ಸ್ವಾಗತ ಸಮಿಮಿತಿ ಅಧ್ಯಕ್ಷರು ಹಾಗೂ ಚಿಂತಕರಾದ ಪ್ರೊ: ಕೆ.ದೊರೆರಾಜು, ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್.ರೇವಣ್ಣ ಭಾಗವಹಿಸಲಿದ್ದು ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಕಾರ್ಯದರ್ಶಿ ಯು.ಬಸವರಾಜ ವಹಿಸಲಿದ್ದಾರೆ.

ಜಿಲ್ಲಾ ಕಾರ್ಯದರ್ಶಿ ಎನ್.ಕೆ ಸುಬ್ರಮಣ ಸ್ವಾಗತಿಸಿದರೆ, ಪ್ರಸ್ತಾವಿಕ ಮಾತುಗಳನ್ನು ಸೈಯದ್‌ ಮುಜೀಬ್‌ ಆಡಲಿದ್ದಾರೆ ವಂದನಾರ್ಪಣೆಯನ್ನು ಬಿ ಉಮೇಶ್‌ ಮಾಡಲಿದ್ದಾರೆ.

ಸಮಗ್ರ, ಸಮೃದ್ಧ, ಸೌಹಾರ್ದ ಕರ್ನಾಟಕ ಹಾಗೂ ದುಡಿಯುವ ಪ್ರಶ್ನೆಗಳ ಬಗ್ಗೆ ಚರ್ಚೆ

ಮೂರು ದಿನಗಳ ಈ ಸಮ್ಮೇಳನದ ಪ್ರತಿನಿಧಿ ಅಧಿವೇಶನವು ಮದ್ಯಾನ್ಹ 4.30 ಕ್ಕೆ ರಿಂಗ್‌ ರಸ್ತೆಯಲ್ಲಿರುವ ಸ್ಟಾರ್‌ ಕನ್ವೇಷನ್‌ ಹಾಲ್‌ ನಲ್ಲಿ ಹಿರಿಯ ಸಂಗಾತಿ ಜಿ.ಎನ್.ನಾಗರಾಜ್‌ ಅವರು ಧ್ವಜಾರೋಹಣ ನೇರವೇರಿಸುವ ಮೂಲಕ ಆರಂಭಗೊಳ್ಳಲಿದೆ. ಪ್ರತಿನಿಧಿ ಅಧಿವೇಶನದ ಉದ್ಘಾಟನೆಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಎ.ವಿಜಯರಾಘವನ್, ನೆರವೇರಿಸುವವರು.

ಮೂರು ದಿನಗಳ ಈ ಸಮ್ಮೇಳನವು ಕೇಂದ್ರ ಮತ್ತು‌ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದಾಗಿ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಒಟ್ಟಾರೆ ದುಡಿಯುವ ಜನಸಮುದಾಯ ಎದುರಿಸುತ್ತಿರುವ ಸಂಕಷ್ಟಗಳು ಈ ಜನವಿರೋಧಿ ನೀತಿಗಳಿಗೆ ಪ್ರಭಲ ಪ್ರತಿರೋಧವನ್ನು ಒಡ್ಡಲು ಜನಸಮುದಾಯವನ್ನು ಸಂಘಟಿಸುವ ಕುರಿತು ಮತ್ತು ಬಂಡವಾಳಶಾಹಿ ನೀತಿಗಳನ್ನು ಜಾರಿಗೆ ತರುತ್ತಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನೀತಿಗಳಿಗೆ ಪರ್ಯಾಯವಾಗಿ ದುಡಿಯುವ ವರ್ಗದ ನೀತಿಗಳಿಗಾಗಿ ಪರ್ಯಾಯ ರಾಜಕೀಯ ಆಂದೋಲನವನ್ನು ರೂಪಿಸಲು ಗಂಭೀರವಾಗಿ ಚರ್ಚಿಸಲಾಗುವುದು.

ಸಿಪಿಐ(ಎಂ) 24 ನೇ ಮಹಾಧಿವೇಶನ 2025 ಏಪ್ರಿಲ್‌‌ ನಲ್ಲಿ ತಮಿಳನಾಡಿನ ಮಧುರೈಯಲ್ಲಿ ನಡೆಯಲಿದೆ. ಅದರ ಪೂರ್ವದಲ್ಲಿ  ಕರ್ನಾಟಕ ರಾಜ್ಯ ಸಮ್ಮೇಳವನ್ನು ತುಮಕೂರಿನಲ್ಲಿ ಸಂಘಟಿಸಲಾಗಿದೆ.

ಇದನ್ನೂ ನೋಡಿ: ‘ಪುರುಷರ ಸಾವಿನ ಸುತ್ತ’ – 498A ಏನು – ಎತ್ತ? Janashakthi Media

Donate Janashakthi Media

Leave a Reply

Your email address will not be published. Required fields are marked *