ಸಂವಿಧಾನ ಚೌಕಟ್ಟಿನಲ್ಲಿ ಎಲ್ಲಾ ಸಮುದಾಯಗಳಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಬೇಕು ಆಹಾರ ಸಚಿವ:- ಕೆಹೆಚ್.ಮುನಿಯಪ್ಪ

ಇಂದು ಮಾನ್ಯ ಆಹಾರ ಸಚಿವ ಕೆಹೆಚ್.ಮುನಿಯಪ್ಪ ರವರ ನಿವಾಸಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರವರು ಸೌಜನ್ಯಯುತವಾಗಿ ಬೇಟಿ ನೀಡಿದರು.

ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರವರ ಕುಟುಂಬಕ್ಕೆ 20 ವರ್ಷಗಳ ಸಂಭಂದವಿದ್ದು ಮಾನ್ಯ ಸಚಿವರು ಇಂದು ಅವರ ಕ್ಷೇತ್ರದ ಕೆಲಸದ ವಿಚಾರವಾಗಿ ಭೇಟಿ ನೀಡಿದರು.

ಇದನ್ನೂ ಓದಿ:-ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸರ್ಕಾರದಿಂದ ಜನಸಾಮಾನ್ಯರ ಆದಾಯ ಲೂಟಿ- ಎಚ್ ಆರ್ ನವೀನ್ ಕುಮಾರ್

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧಪಕ್ಷದ ನಾಯಕರಾದ ರಾಹುಲ್‌ ಗಾಂಧಿರವರ ಪರವಾಗಿ ಇಡಿ ಚಾರ್ಜ್ ಶೀಟ್ ಸಲ್ಲಿಸಿದ್ದು ನಮ್ಮ ಪಕ್ಷ ಕಾನೂನು ಪ್ರಕಾರ ಹೋರಾಟವನ್ನು ನಡೆಸಲಿದ್ದೇವೆ ಕೇಂದ್ರ ಸರ್ಕಾರ ಹಾಗೂ ಬೆಜೆಪಿ ಪಕ್ಷದ ನಾಯಕರು ನಮ್ಮ ನಾಯಕರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ವರೆಸಿ ಅವರ ತೇಜೊವದೆ ಮಾಡಲು ಹೊರಟಿದ್ದು ನಾವು ಈ ಕುರಿತು ಹೋರಾಟ ನಡೆಸಲಿದ್ದೇವೆ.ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ.ಸಿಬಿಐ,ಆಧಾಯ ತೆರಿಗೆ ಇವುಗಳಿಂದ ನಮ್ಮ ಪಕ್ಷದ ನಾಯಕರಿಗೆ ಕಿರುಕುಳ ನೀಡುವುದು ಸಹಜವಾಗಿದೆ.

ಬಿಜೆಪಿಯ ಕೇಂದ್ರ ನಾಯಕರ ಮೇಲೆ ಯಾರೆ ಮಾತನಾಡಿದರು ಹಾಗೂ ಬಲಿಷ್ಠ ಪಕ್ಷ ಸಂಘಟನೆ ಮಾಡುವ ನಾಯಕರನ್ನು ಟಾರ್ಗೆಟ್ ಮಾಡಿ ಅವರನ್ನು ಪಕ್ಷಕ್ಕೆ ಸೆಳೆಯುವುದು ಇಲ್ಲವಾದರೆ ಅವರ ವಿರುದ್ದ ತನಿಖಾ ಸಂಸ್ಥೆಗಳ ಮೂಲಕ ಕ್ರಮತೆಗೆದುಕೊಳ್ಳುವುದು ಸಹಜವಾಗಿದೆ ಎಂದರು.ಸಂವಿಧಾನ ಚೌಕಟ್ಟಿನಲ್ಲಿ ನಾವು ಕಾನೂನಿಗೆ ಗೌರವ ಕೊಡಬೇಕು ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಾವು ದೊಡ್ಡಮಟ್ಟದಲ್ಲಿ ಹೋರಾಟ ಮಾಡಲು ನಿರ್ದಾರ ಮಾಡುತ್ತೇವೆ .

ಜಾತಿ ಗಣತಿ ವಿಚಾರವಾಗಿ ನಾಳೆ ನಡೆಯಲಿರುವ ಸಚಿವಸಂಪುಟಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ.

ಇದನ್ನೂ ಓದಿ:-ಈ 35 ಔಷಧ ಉತ್ಪಾದನೆ ನಿಲ್ಲಿಸುವಂತೆ ಕೇಂದ್ರ ಸೂಚನೆ

ಸಂವಿಧಾನ ಚೌಕಟ್ಟಿನಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಎಲ್ಲಾ ಧರ್ಮಗಳಿಗೆ ಸಮಾನವಾದ ಅವಕಾಶಗಳಿದ್ದು ‌ಅದರಂತೆಯೆ ಜಾತಿಗಣತಿ ನಡೆಸಿದ್ದು ಸಚಿವ ಸಂಪುಟ ಸಭೆಯಲ್ಲಿ ಇದರಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದರು.

ಮುಖ್ಯಮಂತ್ರಿಗಳ ಬದಲಾವಣೆಯ ವಿಚಾರವಾಗಿ ಮಾತನಾಡಿ ಈಗ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೆ ಇದ್ದು ಅವರೇ ಮುಂದುವರೆಯಲಿದ್ದಾರೆ ಯಾವುದೇ ಬದಲಾವಣೆಗಳಿಲ್ಲ ಅದು ನಮ್ಮ ಎಐಸಿಸಿ ನಾಯರು ನೋಡುತ್ತಾರೆ ಪರಿಶಿಷ್ಟ ಜಾತಿಯ ಮುಖ್ಯಮಂತ್ರಿ ವಿಚಾರ ಈಗ ಅಪ್ರಸ್ತುತ ಎಂದರು.

Donate Janashakthi Media

Leave a Reply

Your email address will not be published. Required fields are marked *