ವೇದಿಕೆ ಮೇಲೆ ಹಾಡುತ್ತಿದ್ದ ಜಾನಪದ ಗಾಯಕಿಗೆ ಗುಂಡೇಟು!

ಬಿಹಾರ: ಬಿಹಾರದ ಜಾನಪದ ಗಾಯಕಿ ನಿಶಾ ಉಪಾಧ್ಯಾಯ ಅವರು ಸರನ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದಾಗ ವೇದಿಕೆ ಮೇಲೆ ಗುಂಡೇಟು ತಗುಲಿ ಗಾಯಗೊಂಡಿದ್ದಾರೆ. ಗಾಯಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರನ್‌ನಲ್ಲಿ, ಭೋಜ್‌ಪುರಿ ಗಾಯಕಿ ನಿಶಾ ಉಪಾಧ್ಯಾಯ ಅವರು ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಸಂಭ್ರಮಾಚರಣೆಯ ಗುಂಡಿನ ದಾಳಿಯಲ್ಲಿ ಬುಲೆಟ್ ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸೇಡೂರ್ ಗ್ರಾಮದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಗಾಯಕಿ ನಿಶಾ ಉಪಾಧ್ಯಾಯ ಸಂಗೀತ ಕಾರ್ಯಕ್ರಮ ನೀಡುತ್ತಿರುವ ವೇಳೆ ಅಗಂತುಕನೊಬ್ಬ ಗುಂಡು ಹಾರಿಸಿದ್ದು, ಎಡಗಾಲಿಗೆ ಗುಂಡು ತಗುಲಿದೆ. ಯಾವುದೇ ಗಂಭೀರ ಗಾಯಗಳಾಗಿಲ್ಲ. ಬದಲಿಗೆ ಗಾಯಕಿಯ ಎಡಗಾಲಿನ ತೊಡೆಯ ಭಾಗಕ್ಕೆ ಸಣ್ಣ ಗಾಯವಷ್ಟೆ ಆಗಿದೆ. ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆ ನಡೆದ ತಕ್ಷಣ ಗಾಯಕಿಯ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಸದ್ಯ ಅವರ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದು ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಪುತ್ರಿಯ ಬಗ್ಗೆ ಸ್ಪಷ್ಟನೆ ನೀಡದ್ದರಿಂದ ಗಾಬರಿಯಲ್ಲಿದ್ದಾರೆ. ಯಾರೋ ಕಿಡಿಗೇಡಿಗಳು ಹಾಡು ಕೇಳುವ ಜೋಶ್​ನಲ್ಲಿ ಈ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಗುಂಡು ಹಾರಿಸಿದವರು ಅಲ್ಲಿಂದ ಪರಾರಿಯಾಗಿದ್ದು ಪೊಲೀಸರು ಅವರಿಗಾಗಿ ಶೋಧನೆ ನಡೆಸಿದ್ದಾರೆ.

ಗಾಯಕಿ ನಿಶಾ ಉಪಾಧ್ಯಾಯ, ಬಿಹಾರದ ಸರಾನಾ ಜಿಲ್ಲೆಯ ಗೌರ್ ಬಸಂತ್ ಗ್ರಾಮದವರಾಗಿದ್ದಾರೆ. ಬಿಹಾರದ ಜನಪ್ರಿಯ ಭೋಜ್​ಪುರಿ ಗಾಯಕರಲ್ಲಿ ನಿಶಾ ಸಹ ಒಬ್ಬರಾಗಿದ್ದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ, ಹೋಳಿ ಇನ್ನಿತರೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಅನುಮಾನಾಸ್ಪದ ವ್ಯಕ್ತಿಗಳ ಯಾರೆಲ್ಲ ಓಡಾಡಿದ್ದರೆ, ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಸಂಘಟನೆಗಳು ಒತ್ತಾಯಿಸುತ್ತಿವೆ.

Donate Janashakthi Media

Leave a Reply

Your email address will not be published. Required fields are marked *