ಬೀದರ್: ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೇವನ್ನು ಮಹೇಶ್ ಚಿಂತಾಮಣಿ ಎಂಬವರು ಜೆಸಿಬಿ ಮೂಲಕ ನಾಶ ಮಾಡಿದ್ದಾರೆ ಎಂದು ತಾಲೂಕಿನ ಅನದೂರವಾಡಿ ಗ್ರಾಮದಲ್ಲಿನ ರೈತ ಮಹಿಳೆ ಕಮಲಮ್ಮ ಎಂಬುವರು ಮಹೇಶ್ ಚಿಂತಾಮಣಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ತಾಲೂಕಿನ ಅನದೂರವಾಡಿ ಗ್ರಾಮದಲ್ಲಿನ ರೈತ ಮಹಿಳೆ ಕಮಲಮ್ಮ ಎಂಬುವರು ತಮ್ಮ ಒಂದು ಎಕರ ಜಮೀನಿನಲ್ಲಿ ಬೆಳೆದಿದ್ದ ಮೇವನ್ನು ಮಹೇಶ್ ಚಿಂತಾಮಣಿ ಎಂಬವರು ಜೆಸಿಬಿ ಮೂಲಕ ನಾಶ ಮಾಡಿದ್ದಾರೆ. ಮಹೇಶ ಚಿಂತಾಮಣಿ ನಾಗಪ್ಪ ಎಂಬುವರಿಂದ 1982ರಲ್ಲಿ 5 ಎಕರೆ 20 ಗುಂಟೆ ಜಮೀನು ಖರೀಧಿಸಿದ್ದರು. ಮಹೇಶ್ ಚಿಂತಾಮಣಿ ಈ ಜಮೀನಿನಲ್ಲಿ 1982 ರಿಂದಲೂ ಯಾವುದ ಕೃಷಿ ಚಟುವಟಿಕೆ ಮಾಡಿರಲಿಲ್ಲ.
ಇದನ್ನೂ ಓದಿ: 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ: ಐಎಂಡಿ
ಇದೀಗ, ಮಹೇಶ್ ಚಿಂತಾಮಣಿ ನಮ್ಮ ಜಮೀನಿನಲ್ಲಿ ನೀವು ಮೇವು ಬೆಳದಿದ್ದೀರಿ ಅಂತ ರೈತ ಮಹಿಳೆ ಕಮಲಮ್ಮ ಅವರ ಹೊಲದಲ್ಲಿನ ಮೇವು ನಾಶ ಮಾಡಿದ್ದಾರೆ. ಮಹೇಶ್ ಚಿಂತಾಮಣಿ ವಿರುದ್ಧ ರೈತ ಮಹಿಳೆ ಕಮಲಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹೇಶ್ ಚಿಂತಾಮಣಿ ಬಡ ರೈತರ ಜಮೀನು ಕಸಿದುಕೊಳ್ಳುವ ಹುನ್ನಾರ ನಡೆಸಿದ್ದಾರ. ಹೀಗಾಗಿ ಏಕಾಏಕಿ ಬಂದು ಬೆಳೆ ನಾಶ ಮಾಡಿ ಜಮೀನು ಕಬ್ಬಾ ಮಾಡಿಕೊಂಡಿದ್ದಾರೆ ಎಂದು ರೈತ ಮಹಿಳೆ ಕಮಲಮ್ಮ ಆರೋಪಿಸಿದ್ದಾರ.
ಇದನ್ನೂ ನೋಡಿ: #AIIEA| Seminar On IRDA Regulations and it’s Impact On LIC – Amanulla khan