6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಮುಂದಾದ ಕೇಂದ್ರ ಸರಕಾರ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟ್ರೀಯ ನಗದೀಕರಣ ಯೋಜನೆ'(ಎನ್‌ಎಂಪಿ) ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿ 2022ರ ಹಣಕಾಸು ವರ್ಷದಿಂದ 2025 ರ ಹಣಕಾಸು ವರ್ಷದವರೆ ಮುಂದಿನ ನಾಲ್ಕು ವರ್ಷಗಳಲ್ಲಿ ಮೂಲಸೌಕರ್ಯ ಆಸ್ತಿಗಳನ್ನು ಮಾರಾಟ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರವು ಸೋಮವಾರ ರಾಷ್ಟ್ರೀಯ ಹಣಗಳಿಕೆಯ ( National Monetisation pipeline (NMPಎನ್‌ಎಂಪಿ) ಮಾರ್ಗಕ್ಕೆ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಹಾಗೂ ಶೀಘ್ರದಲ್ಲೆ ಆರಂಭಿಸುವುದಾಗಿ ಸೋಮವಾರ ಹೇಳಿದೆ. ಹಣಗಳಿಕೆ ಅಥವಾ ಸರ್ಕಾರಿ ಆಸ್ತಿ ಮಾರಾಟ (monetisation plan) ಯೋಜನೆಯನ್ನು  ಹಾಕಿಕೊಂಡಿದೆ. 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು. ಈ ಪಟ್ಟಿಯಲ್ಲಿ ಪ್ರಮುಖವಾಗಿ ರಸ್ತೆಗಳು, ರೈಲ್ವೆ ಹಾಗೂ ವಿದ್ಯುತ್ ಗ್ರಿಡ್‌ಗಳೂ ಸೇರಿವೆ. ಆದರೆ ಭೂಮಿ ಮಾರಾಟ ಈ ಪಟ್ಟಿಯಲ್ಲಿ ಸೇರಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ಹೊಸ ಮೂಲಸೌಕರ್ಯ ಸೃಷ್ಟಿಗೆ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸುವ ಅಥವಾ ಟ್ಯಾಪ್​ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಸರ್ಕಾರ ಮಾಲಿಕತ್ವ ಹೊಂದಿರುವ ಆಸ್ತಿಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ ಎಂದು ನೀತಿ ಆಯೋಗದ ಸಿಇಒ ಹೇಳಿದರು. ಈ ಯೋಜನೆಯಡಿ, 15 ರೈಲ್ವೇ ಕ್ರೀಡಾಂಗಣಗಳು, 25 ವಿಮಾನ ನಿಲ್ದಾಣಗಳು, 160 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳನ್ನು ಮಾರಾಟ ಮಾಡುವ ಮೂಲಕ ಸರ್ಕಾರವು ಹಣ ಗಳಿಕೆ ಮಾಡಲು ಯೋಜನೆ ರೂಪಿಸಿದೆ ಎಂದು ಕಾಂತ್​ ಹೇಳಿದರು. ರಾಷ್ಟ್ರೀಯ ಆಸ್ತಿಗಳ ಮಾರಾಟ ಪ್ರಕ್ರಿಯೆ ಒಂದು ಮಟ್ಟದ ಯಶಸ್ಸನ್ನು ತಲುಪಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳಲ್ಲಿ ಉತ್ತಮ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಖಾಸಗಿ ವಲಯವನ್ನು ತರುವುದು ಬಹಳ ಮುಖ್ಯ ಎಂದು ಕಾಂತ್‌ ತಿಳಿಸಿದ್ದಾರೆ.  ಯಾವ ಯಾವ ವಲಯದಿಂದ ಗರಿಷ್ಠ ಹಣ ಪಡೆಯಬಹುದು ಎಂಬ ಅಂದಾಜನ್ನು ಕೇಂದ್ರ ಸರಕಾರ ಈ ಕೆಳಗಿನಮತೆ ವಿವರಿಸಿದೆ.

ರಸ್ತೆ ವಲಯದಿಂದ ಗರಿಷ್ಠ ಹಣಗಳಿಕೆ :  NHAI ಯ 1.6 ಲಕ್ಷ ಕೋಟಿ ಮೌಲ್ಯದ ರಾಷ್ಟ್ರೀಯ ಹೆದ್ದಾರಿಗಳನ್ನು ಗುರುತಿಸಲಾಗಿರುವ ರಸ್ತೆ ವಲಯದಿಂದ FY25 ರ ಮೂಲಕ ಗರಿಷ್ಠ ಹಣಗಳಿಕೆಯನ್ನು ನಿರೀಕ್ಷಿಸಲಾಗಿದೆ.

ರೈಲ್ವೇಸ್ : ರಸ್ತೆ ವಲಯವು ರೈಲ್ವೇ ವಲಯವನ್ನು ಅನುಸರಿಸುತ್ತದೆ, ಅಲ್ಲಿ ಸುಮಾರು 400 ನಿಲ್ದಾಣಗಳು, ಸುಮಾರು 150 ರೈಲುಗಳು, ಮತ್ತು ಕೆಲವು ಟ್ರ್ಯಾಕ್‌ಗಳು ಮತ್ತು ಇತರೆ ಕೆಲಸಗಳನ್ನು 1.5 ಲಕ್ಷ ಕೋಟಿ ಮೌಲ್ಯದ ಆಸ್ತಿ ಎಂದು ಗುರುತಿಸಲಾಗಿದೆ.

ವಿದ್ಯುತ್ ವಲಯ :  ವಿದ್ಯುತ್ ವಲಯವು ಪವರ್ ಗ್ರಿಡ್‌ನಿಂದ ಸುಮಾರು 67,000 ಕೋಟಿ ಮೌಲ್ಯದ ಪ್ರಸರಣ ಮಾರ್ಗಗಳನ್ನು NHPC, NTPC ಮತ್ತು Neyveli Lignite ನಿಂದ 32,000 ಕೋಟಿ ರೂಪಾಯಿ ಮೌಲ್ಯದ ಜಲ, ಸೌರ ಮತ್ತು ವಾಯು ಯೋಜನೆಗಳನ್ನು  ಗುರುತಿಸಲಾಗಿದೆ.

ಒಟ್ಟಾರೆಯಾಗಿ ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೇಗಳು, ವಿದ್ಯುತ್, ಪೈಪ್‌ಲೈನ್‌ಗಳು ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಹಡಗು ಬಂದರುಗಳು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗಣಿಗಾರಿಕೆ, ಕಲ್ಲಿದ್ದಲು ಮತ್ತು ವಸತಿ ಮತ್ತು ನಗರ ವ್ಯವಹಾರಗಳು ರಾಷ್ಟ್ರೀಯ ಹಣಗಳಿಸುವಿಕೆ ಪೈಪ್ ಲೈನ್ ಸಚಿವಾಲಯಗಳನ್ನು ಒಳಗೊಂಡಿದೆ.

ವಲಯವಾರು ಆಸ್ತಿ ನಗದೀಕರಣ 

ವಲಯ ಆಸ್ತಿ ಮೌಲ್ಯ
ರಸ್ತೆ ₹ 1.60 ಲಕ್ಷ ಕೋಟಿ
ರೈಲ್ವೆ ₹ 1.52 ಲಕ್ಷ ಕೋಟಿ
ವಿದ್ಯುತ್ ವಿತರಣೆ ₹ 45,200 ಕೋಟಿ
ವಿದ್ಯುತ್ ಉತ್ಪಾದನೆ ₹ 39,832 ಕೋಟಿ
ನೈಸರ್ಗಿಕ ಅನಿಲ ಸಾಗಣೆ ಮಾರ್ಗ ₹ 24,462 ಕೋಟಿ
ದೂರಸಂಪರ್ಕ ₹ 35,100 ಕೋಟಿ
ಗೋದಾಮು ₹ 28,900 ಕೋಟಿ
ಗಣಿಗಾರಿಕೆ ₹ 28,747 ಕೋಟಿ
ವಿಮಾನಯಾನ ₹ 20,782 ಕೋಟಿ
ಬಂದರು   ₹ 12,828 ಕೋಟಿ
ಕ್ರೀಡಾಂಗಣ ₹ 11,450 ಕೋಟಿ
ನಗರ ರಿಯಲ್ ಎಸ್ಟೇಟ್ ₹ 15,000 ಕೋಟಿ
ಇತರ ₹ 22,504 ಕೋಟಿ

 

ಅಂದಾಜು 6 ಲಕ್ಷ ಕೋಟಿ ರೂ
ಹೋರಾಟಕ್ಕೆ ಸಿಪಿಐಎಂ ಕರೆ :  ಒಕ್ಕೂಟ ಸರಕಾರದ ಈ ನಡೆಗೆ ವಿರೋಧ ಪಕ್ಷಗಳು ಆಕ್ಷೇಪವನ್ನು ವ್ಯಕ್ತಪಡಿಸಿದ್ದು ದೇಶವನ್ನು ಮಾರಲು ಹೊರಟಿದೆ ಎಂದು ಆರೋಪಿಸಿವೆ. ಎನ್‌ಎಂಪಿ ಗೆ ಸಿಪಿಐ(ಎಂ) ವಿರೋಧ ವ್ಯಕ್ತಪಡಿಸಿದ್ದು,  “ಸರಕಾರದ ಈ ಯೋಜನೆಯಿಂದ ಭಾರತದ ಮಾರಾಟ ಖಚಿತವಾಗಿದೆ.  ದೇಶದ ಪ್ರಮುಖ ಕ್ಷೇತ್ರಗಳಲ್ಲಿರುವ ವಿವಿಧ ಉದ್ಯಮಗಳನ್ನು ಸರ್ಕಾರ ಭೋಗ್ಯಕ್ಕೆ ನೀಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನು ಇದು ತೆರೆದಿಡುತ್ತಿದೆ.  ರಾಷ್ಟ್ರೀಯ ಆಸ್ತಿ ಮತ್ತು ಜನರ ಸಂಪತ್ತಿನ ಲೂಟಿಗೆ ಕೇಂದ್ರ ಸರಕಾರ ಮುಂದಾಗಿರುವುದನ್ನು ತೋರಿಸುತ್ತದೆ” ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ  ಸೀತಾರಾಮ್‌ ಯೆಚೂರಿ ಆರೋಪಿಸಿದ್ದಾರೆ.  ಮುಂದುವರೆದು ಹೇಳಿರುವ ಅವರು,  ಕೇಂದ್ರ ಸರ್ಕಾರವನ್ನೂ ಇದೇ ರೀತಿ ಭೋಗ್ಯಕ್ಕೆ ತೆರೆದಿಡುವ ದಿನಗಳು ಬಹಳ ದೂರವಿಲ್ಲ! ಸಂಸತ್ ಭವನ ಮತ್ತು ಎಲ್ಲಾ ರಾಜ್ಯಗಳ ವಿಧಾನ ಸಭಾ ಕಟ್ಟಡಗಳನ್ನು ಬಾಡಿಗೆ ಆಧಾರದಲ್ಲಿ ತೆರೆದಿಟ್ಟರೆ ಯಾರೂ ಅಚ್ಚರಿಪಡಬೇಕಿಲ್ಲ! ಈ ರೀತಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಮೋದಿ ಸರ್ಕಾರದ ವಿರುದ್ಧ ರಾಜಿಯಿಲ್ಲದ ಹೋರಾಟ ಮಾಡಬೇಕೆಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಕರೆ ನೀಡಿದೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *