ಬೆಂಗಳೂರು: ಡ್ರಿಂಕ್ ಆಯಂಡ್ ಡ್ರೈವ್ ಪ್ರಕರಣಗಳು ದಾಖಲಾಗುವುದು ಸಾಮಾನ್ಯ. ಆದರೆ ನಗರದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಡ್ರಿಂಕ್ ಆಯಂಡ್ ಡ್ರೈವ್ ಪತ್ತೆ ಹಚ್ಚುವ ಯಂತ್ರದಲ್ಲೇ ಲೋಪ ಕಂಡುಬಂದಿದ್ದು, ಓರ್ವ ಚಾಲಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಜಯ್ ಕುಮಾರ್ ಕಶ್ಯಪ್ ಎಂಬುವವರು ಕಾರು ಚಾಲನೆ ಮಾಡುವಾಗ ಟ್ರಾಫಿಕ್ ಪೊಲೀಸರು ತಡೆದಿದ್ದರು. ಮದ್ಯಪಾನ ಮಾಡದಿದ್ದರೂ ಮಷಿನ್ ನಲ್ಲಿ ಎರಡು ಬಾರಿ ನೆಗೆಟಿವ್ ತೋರಿಸಿ 3ನೇ ಬಾರಿ ಪಾಸಿಟಿವ್ ತೋರಿಸಿದೆ. ತಾನು ಕುಡಿದಿಲ್ಲವೆಂದು ಹೇಳಿದರೂ ಒಪ್ಪದ ಪೊಲೀಸರು ಅವರ ಕಾರು ಸೀಜ್ ಮಾಡಿ 10 ಸಾವಿರ ರೂ. ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಗುಣಮಟ್ಟದ ಆಹಾರ ವಿತರಿಸುವಂತೆ ಹಾಗೂ ವಾರ್ಡನ್ ಬದಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ
ಬಳಿಕ ಅಜಯ್ ಕುಮಾರ್ ಕಶ್ಯಪ್ ಅವರು ತಾವೇ ಖಾಸಗಿ ಲ್ಯಾಬ್ನಲ್ಲಿ ಟೆಸ್ಟ್ ಮಾಡಿಸಿದ್ದು ಆಗಲೂ ನೆಗೆಟಿವ್ ಬಂದಿದೆ. ಹೀಗಾಗಿ ಡ್ರಿಂಕ್ ಆಯಂಡ್ ಡ್ರೈವ್ ಪತ್ತೆ ಮಷಿನ್ ನಲ್ಲೇ ಲೋಪವಿದೆ ಎಂದು ಆರೋಪಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಸರ್ಕಾರ ಮತ್ತು ಟ್ರಾಫಿಕ್ ಪೊಲೀಸರಿಗೆ ನೋಟಿಸ್
ಇಂದು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಯಂತ್ರದಲ್ಲೇ ಲೋಪವಿದ್ದಾಗ ಕುಡಿತದ ಆರೋಪ ಒಪ್ಪಲಾಗುವುದಿಲ್ಲ. ಹೀಗಾಗಿ ಈ ಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ನ್ಯಾ.ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ಜೊತೆಗೆ ಸರ್ಕಾರ ಮತ್ತು ಟ್ರಾಫಿಕ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ನೋಡಿ: ಧರ್ಮಸ್ಥಳ | ದೂರುದಾರರಿಗೆ ರಕ್ಷಣೆ – ಸಾಕ್ಷಿ ರಕ್ಷಣಾ ಸ್ಕೀಮ್ ಏನು ಹೇಳುತ್ತದೆ?Janashakthi Media
