ಕಿತ್ತೂರು ಉತ್ಸವ : ಮೆರವಣಿಗೆಗೆ ಚಾಲನೆ ನೀಡಿದ ಸಚಿವರಾದ ಸತೀಶ ಜಾರಕಿಹೊಳಿ& ಲಕ್ಷ್ಮೀ ಹೆಬ್ಬಾಳಕರ

ಚನ್ನಮ್ಮನ ಕಿತ್ತೂರು: ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಅವರು ಕಿತ್ತೂರು ಉತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಜಾನಪದ ಕಲಾವಾಹಿನಿ ಮೆರವಣಿಗೆಗೆ ಚಾಲನೆ ನೀಡಿದರು. ಕಿತ್ತೂರು ಉತ್ಸವ 

ಇದನ್ನೂ ಓದಿ : ಪೋಷಕರನ್ನು ಸರ್ಕಾರಿ ನೌಕರರು ನಿರ್ಲಕ್ಷಿಸಿದರೆ ಶೇ.10-15 ರಷ್ಟು ವೇತನ ಕಟ್

ರಾಣಿ ಚನ್ನಮ್ಮ ವೃತ್ತದಲ್ಲಿ ಇರುವ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಆಸಿಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿ.ಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಡಾ.ಭೀಮಾಶಂಕರ ಗುಳೇದ ಇತರರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ, ಕಿತ್ತೂರಿಗೆ ಆಗಮಿಸಿದ ವೀರಜ್ಯೋತಿಯನ್ನು ಇದೇವೇಳೆ ಗಣ್ಯರು ಬರಮಾಡಿಕೊಂಡರು.

ಮಳೆ ಮಧ್ಯೆಯೂ ಮೆರವಣಿಗೆ ಆರಂಭಗೊಂಡಿದ್ದು, ರಾಜ್ಯದ ವಿವಿಧೆಡೆಯ ಕಲಾತಂಡಗಳು ನಾನಾ ಕಲಾ ಪ್ರಕಾರ ಪ್ರದರ್ಶಿಸುತ್ತಿವೆ.

ಇದನ್ನೂ ನೋಡಿ : CITU ಬೆಂಗಳೂರು ದಕ್ಷಿಣ 14 ನೇ ಜಿಲ್ಲಾ ಸಮ್ಮೇಳನ | ಮೆರವಣಿಗೆ ಮತ್ತು ಬಹಿರ��ಗ ಸಭೆ

Donate Janashakthi Media

Leave a Reply

Your email address will not be published. Required fields are marked *