ಹರಪನಹಳ್ಳಿ: ಒಂದೇ ಕೊಠಡಿಯಲ್ಲಿ ಐದು ತರಗತಿ ನಡೆಸುವ ಇಬ್ಬರು ಶಿಕ್ಷಕರು, ಶಿಥಿಲ ಕಟ್ಟಡ, ಬಿರುಕು ಬಿಟ್ಟ ಚಾವಣಿ, ಜಿಟಿ ಜಿಟಿ ಮಳೆಗೆ ಹನಿಯುವ ನೀರು, ಅನುದಾನ ಬಂದರೂ ನಿರ್ಮಾಣವಾಗದ ಹೊಸ ಕಟ್ಟಡ. ಇದು ಹರಪನಹಳ್ಳಿ ತಾಲ್ಲೂಕಿನ ವಿ.ಬಸಾಪುರ ತಾಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
ಈ ತಾಲ್ಲೂಕಿನ ನಿಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ವಡೇರ ಬಸಾಪುರ ತಾಂಡದಲ್ಲಿ (ವಿ.ಬಸಾಪುರ ತಾಂಡ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಿಸಿ 38 ವರ್ಷಗಳಾಗಿದೆ. ಇರುವ ಎರಡು ಕೊಠಡಿಯಲ್ಲಿ ಒಂದರಲ್ಲಿ ಅಡುಗೆ ಮಾಡಿದರೆ, ಮತ್ತೊಂದರಲ್ಲಿ 1ರಿಂದ 5ನೇ ತರಗತಿಗೆ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ತರಗತಿ ಕೊಠಡಿಯು ಶಿಥಿಲಗೊಂಡಿದ್ದು, ಆಗೊಮ್ಮೆ, ಈಗೊಮ್ಮೆ ಚಾವಣಿಯ ಸಿಮೆಂಟ್ ತುಣುಕು ಮುರಿದು ಬೀಳುತ್ತಿರುವ ಪರಿಣಾಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೀವಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಮುಖ್ಯಶಿಕ್ಷಕರ ಕೋಣೆಯೂ ಇದೇ ಆಗಿದ್ದು, ನಲಿಕಲಿ ಸಾಮಗ್ರಿ, ಪಠ್ಯೇತರ ವಸ್ತು ಸಂಗ್ರಹಿಸಿಟ್ಟಿದ್ದಾರೆ. ಶುದ್ಧ ಕುಡಿಯುವ ನೀರಿನ ಯಂತ್ರಕ್ಕೆ ಜಾಗ ಸಿಗದಿರುವುದಕ್ಕೆ ಅಂಗನವಾಡಿಯಲ್ಲಿ ಇಟ್ಟಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಒತ್ತಡದ ದುಡಿಮೆ ಅನಾರೋಗ್ಯ ಹೆಚ್ಚಳ: ಸುರೇಶ್ ಕಲ್ಲಾಗರ
1 ರಿಂದ 3ನೇ ತರಗತಿವರೆಗೆ 23 ವಿದ್ಯಾರ್ಥಿಗಳಿದ್ದು, ನಲಿಕಲಿ ಪಾಠ ಕಲಿಸುತ್ತಾರೆ. ಕೋಣೆಯ ಮತ್ತೊಂದು ಭಾಗದಲ್ಲಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೊಬ್ಬ ಶಿಕ್ಷಕರು ತರಗತಿ ನಡೆಸುತ್ತಾರೆ. ಕೆಲವೊಮ್ಮೆ 5ನೇ ತರಗತಿ ವಿದ್ಯಾರ್ಥಿಗಳನ್ನು ಖಾಲಿಯಿರುವ ಮನೆಗೆ ಕರೆದೊಯ್ದು, ಅಲ್ಲಿ ಪಾಠ ಹೇಳುವ ಸ್ಥಿತಿಯಿದೆ. ಮಳೆ ಸುರಿಯಲು ಆರಂಭಿಸಿದರೆ, ವಿದ್ಯಾರ್ಥಿಗಳನ್ನು ಮನೆಗೆ ಕಳಿಸುವುದು ಅನಿವಾರ್ಯ. ಪ್ರತ್ಯೇಕವಿರುವ ಶೌಚಾಲಯ ಕಟ್ಟಡದಲ್ಲಿ ಶಾಲೆ ಕಟ್ಟಡ ನಿರ್ಮಾಣದ ಸಾಮಾನು ಇಟ್ಟಿರುವ ಕಾರಣ ಮೂತ್ರ ವಿಸರ್ಜನೆ ಸಮಸ್ಯೆ ಹೇಳತೀರದು.
ಅನುದಾನ ಬಂದರೂ ಸಾಧ್ಯವಾಗದ ಕಟ್ಟಡ ನಿರ್ಮಾಣ:
ಕಳೆದ ಸಾಲಿನಲ್ಲಿ ‘ವಿವೇಕ’ ಯೋಜನೆಯಡಿ ಮತ್ತು ಸಂಸದರ ಅನುದಾನದಡಿ ತಲಾ ಒಂದು ಕೊಠಡಿ ನಿರ್ಮಿಸಲು ಮುಂಜೂರಾತಿ ದೊರೆತಿತ್ತು. ಗುತ್ತಿಗೆದಾರರು ಕಟ್ಟಡ ನಿರ್ಮಿಸಲು ಸಾಮಗ್ರಿಗಳನ್ನು ಶಾಲಾವರಣಕ್ಕೆ ತಂದು ಹಾಕಿದ್ದರು. ಆದರೆ ಜಾಗದ ಮಾಲೀಕರು ಕಟ್ಟಡ ನಿರ್ಮಾಣ ಮಾಡದಂತೆ ಸೂಚಿಸಿದ್ದರಿಂದ ನಿರ್ಮಾಣ ನಡೆದಿಲ್ಲ.
ಹಿಂದೆ ದಾನ ಮಾಡಿರುವ ಸರ್ಕಾರಿ ಶಾಲೆಯಿರುವ ಜಾಗ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಪಹಣಿಯಿರುವ ಕಾರಣ, ನೂತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡುತ್ತಿಲ್ಲ ಎನ್ನುತ್ತವೆ ಶಾಲಾ ಶಿಕ್ಷಣ ಇಲಾಖೆ ಮೂಲಗಳು. ಜಾಗದ ಮಾಲೀಕರ ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಪ್ರತಿಕ್ರಿಯಿಸಿದರು.
ಹರಪನಹಳ್ಳಿ ತಾಲ್ಲೂಕು ವಿ.ಬಸಾಪುರ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಏಕೈಕ ಕೊಠಡಿಕೊಟ್ರೇಶ್ ಮುಖ್ಯಶಿಕ್ಷಕಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 36 ವಿದ್ಯಾರ್ಥಿಗಳಿದ್ದು ಇಬ್ಬರು ಶಿಕ್ಷಕರಿದ್ದೇವೆ. ಕಟ್ಟಡದ ಸಮಸ್ಯೆ ಬಿಟ್ಟರೆ ಬೇರೆ ಯಾವುದೇ ತೊಂದರೆಯಿಲ್ಲ ಯು.ಬಸವರಾಜಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಹರಪನಹಳ್ಳಿತಾಲ್ಲೂಕಿನ 87 ಶಾಲೆಗಳ ಪೈಕಿ 196 ಕೊಠಡಿ ಶಿಥಿಲಗೊಂಡಿವೆ. ಕೆಕೆಆರ್‌ಡಿಬಿ ಯೋಜನೆಯಡಿ 44 ಕೊಠಡಿಗಳ ಚಾವಣಿ ಕಾಮಗಾರಿ ಪ್ರಗತಿಯಲ್ಲಿವೆ.
ಇದನ್ನೂ ನೋಡಿ: ಭ್ರಷ್ಟಾಚಾರ ಹುಟ್ಟಹಾಕಿದ್ದೆ ಬಿಜೆಪಿ , ಭ್ರಷ್ಟರನ್ನು ಮಟ್ಟಹಾಕಿದ್ದರೆ ಈ ಹಗರಣ ನಡೆಯುತ್ತಿರಲಿಲ್ಲJanashakthi Media