ಇದೇ ಮೊದಲ ಬಾರಿಗೆ ವಾಯುಪಡೆಯ ಕ್ಷಿಪಣಿ ದಳ ಮುನ್ನಡೆಸಲು ಮಹಿಳಾ ಸಾರಥಿಯಾಗಿ ಶಾಲಿಜಾ ಧಾಮಿ ನೇಮಕ

ನವದೆಹಲಿ : ವಾಯುಪಡೆಯ ಕ್ಷಿಪಣಿಗಳ ಘಟಕದ ಕಮಾಂಡಿಂಗ್‌ ಆಫೀಸರ್‌ ಆಗಿ ಗ್ರೂಪ್‌ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ನೇಮಕ ಮಾಡಲಾಗಿದೆ.

ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಶಾಲಿಜಾ ಅವರು ಪಾತ್ರರಾಗಿದ್ದಾರೆ. ಇವರು 2003ರಲ್ಲಿ ಹೆಲಿಕಾಪ್ಟರ್‌ ಪೈಲಟ್‌ ಆಗಿ ಸೇವೆಗೆ ಸೇರಿದ್ದರು ಎಂದು ವಾಯುಪಡೆ ಮಾಹಿತಿ  ನೀಡಿದೆ. ಶಾಲಿಜಾ ಧಾಮಿ ಅವರು ಕ್ಷಿಪಣಿ ಸ್ಕ್ವಾಡ್ರನ್‌ನ ನೇತೃತ್ವವನ್ನು ಶಾಲಿಜಾ ವಹಿಸಿಕೊಳ್ಳಲಿದ್ದಾರೆ. 2003ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನಿಯೋಜನೆಗೊಂಡಿದ್ದ ಧಾಮಿ ಅವರು 2,800 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಸೇನೆಯು ವೈದ್ಯಕೀಯ ವಿಭಾಗದಾಚೆಗೂ ಕಮಾಂಡ್ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳನ್ನು ನಿಯೋಜನೆ ಮಾಡುವ ಪ್ರಕ್ರಿಯೆಯನ್ನು ಈ ತಿಂಗಳಾರಂಭದಿಂದ ಪ್ರಾರಂಭ ಮಾಡಿದೆ. ಪಶ್ಚಿಮ ವಲಯದಲ್ಲಿ ಹೆಲಿಕಾಪ್ಟರ್ ಘಟಕದ ಫ್ಲೈಟ್ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಎರಡು ಬಾರಿ ಶ್ಲಾಘನೆಗೆ ಒಳಗಾಗಿದ್ದಾರೆ.

ಭಾರತೀಯ ವಾಯುಪಡೆ : ಭಾರತೀಯ ವಾಯುಪಡೆಯು ಪ್ರಪಂಚದಲ್ಲೇ ಅತೀ ದೊಡ್ಡದಾದ ಸೇನೆಗಳಲ್ಲಿ ಒಂದಾಗಿದೆ. ಭಾರತೀಯ ವಾಯುಪಡೆಯು ಅಕ್ಟೋಬರ್  08-1932 ರಲ್ಲಿ ಸ್ಥಾಪನೆಯಾಯಿತು. ಯುದ್ಧ ವಿಮಾನ ಪೈಲಟ್‌ ಏರ್‌ ಚೀಫ್‌ ಮಾರ್ಷಲ್‌ ವಿವೇಕ್‌ ರಾಮ್‌ ಚೌಧರಿ ಅವರು ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *