ಚಾಮರಾಜನಗರ: ಬಿಸಿಲಿನ ಝಳದಿಂದ ತತ್ತರಿಸಿದ್ದ ಜನರಿಗೆ ದಿಢೀರನೆ ಸುರಿದ ವರ್ಷದ ಮೊದಲ ವರ್ಷಧಾರೆ ತಂಪು ನೀಡಿದೆ.
ಚಾಮರಾಜನಗರ ಜಿಲ್ಲಾ ಕೇಂದ್ರ, ಚಾಮರಾಜನಗರ ತಾಲೂಕಿನ ಕೊತ್ತಲವಾಡಿ, ವೆಂಕಟಯ್ಯನ ಛತ್ರ , ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷದ ಮೊದಲ ಮಳೆ ಸುರಿಯಿತು.
ಇದನ್ನು ಓದಿ :-ಬೆಂಗಳೂರು| ಸಾರಿಗೆ ನಿಗಮಗಳಿಗೆ ₹5,200 ಕೋಟಿ ನಷ್ಟ – ರಾಮಲಿಂಗಾರೆಡ್ಡಿ
ಮಲೆ ಮಹದೇಶ್ವರ ಬೆಟ್ಟಕ್ಕೆ ವರುಣನ ಕೃಪೆಯಿಂದ ಇಡೀ ಬೆಟ್ಟಕ್ಕೆ ವರುಣ ದೇವ ಜಲಾಭಿಷೇಕ ಮಾಡಿದಂತೆ ಭಾಸವಾಯಿತು.ಬಿಸಿಲ ಬೇಗೆಯಿಂದ ತತ್ತರಿಸಿದ್ದ ಗಡಿಜಿಲ್ಲೆ ಜನರಿಗೆ ವರ್ಷದ ಮೊದಲ ಮಳೆ ಸಿಂಚನ ಸಂಭ್ರಮ ನೀಡಿದ್ದು ದಿಢೀರನೆ ಸುರಿದ ಮಳೆ ಪರಿಣಾಮ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ಪರದಾಡಿದರು.
ಗುಡುಗು- ಸಿಡಿಲಿನ ಆರ್ಭಟದೊಂದಿಗೆ ಮಳೆರಾಯ ಧರೆಗಿಳಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ದಿಢೀರ್ ಮಳೆ ಸುರಿದ ಪರಿಣಾಮ ಚಾಮರಾಜನಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರು. ಅರ್ಧ ತಾಸಿಗೂ ಅಧಿಕ ಸಮಯ ಪೂರ್ವ ಮುಂಗಾರು ಮಳೆ ಸುರಿದಿದೆ.