ಕನಕಗಿರಿ : ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಫ್‌ಐನ ಪ್ರಥಮ ತಾಲೂಕ ಸಮ್ಮೇಳನವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಲಾಯಿತು. ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಕನಿಷ್ಠ 30ರಷ್ಟು ಅನುದಾನ ಕೊಡಬೇಕು ಎಂದು ಆಗ್ರಹಿಸಲಾಯಿತು. ಶೈಕ್ಷಣಿಕ
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಎಸ್ಎಫ್ಎಸ್ ಸಂಘಟನೆಯ ರಾಜ್ಯಾಧ್ಯಕ್ಷರಾದ ಅಮರೇಶ್ ಕಡಗದ್, ʼಸರ್ಕಾರಿ ಶಾಲಾ-ಕಾಲೇಜು, ಹಾಸ್ಟೆಲ್ ಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ. 371 ಜೆ ಸಮರ್ಪಕವಾಗಿ ಜಾರಿಗೆ ಮಾಡಬೇಕು. ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ವಿಶೇಷ ಮೀಸಲಾತಿ ಅನುದಾನದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪಿಡಿಒ,ಪಿ ಎಸ್ ಐ,ಕೆ ಎ ಎಸ್,ಐ ಎ ಎಸ್,ಬ್ಯಾಂಕಿಂಗ್ ಇನ್ನಿತರೆ ಪರೀಕ್ಷೆಗಳಿಗೆ ಈ ಭಾಗದ ನಿರುದ್ಯೋಗ ವಿದ್ಯಾರ್ಥಿಗಳಿಗೆ ಪದವಿ ಸ್ನಾತಕೋತರ ಮುಗಿಸಿದಂತ ಹಲವಾರು ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಕೊಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಬೇಕು .
ಇದನ್ನು ಓದಿ : ಪೋಕ್ಸೊ ಪ್ರಕರಣಗಳ ವಿಳಂಬವು ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ದುಃಖದ ಪ್ರತಿಬಿಂಬವಾಗಿದೆ; ಕರ್ನಾಟಕ ಹೈಕೋರ್ಟ್
ಕನಕಗಿರಿ ತಾಲೂಕ ಕೇಂದ್ರವಾಗಿದ್ದು ಅತಿ ಹೆಚ್ಚು ಗ್ರಾಮೀಣ ಭಾಗದ ಮಕ್ಕಳು ಶಾಲಾ ಕಾಲೇಜುಗಳಿಗೆ ಬರುತ್ತಿದ್ದಾರೆ. ಇಲ್ಲಿ ಪ್ರಮುಖವಾಗಿ ಸಾರಿಗೆ ಅನಾನುಕೂಲ ಇದ್ದು ಸಾರಿಗೆ ಅನುಕೂಲತೆಗಾಗಿ ಬಸ್ ಡಿಪೋ ಮಂಜೂರು ಮಾಡಬೇಕು. ಈ ಭಾಗಕ್ಕೆ ಬಾಲಕರ ಹಾಗೂ ಬಾಲಕಿಯರ ಕಾಲೇಜ್ ಹಾಸ್ಟೆಲ್ ಮಂಜೂರು ಮಾಡಬೇಕು. ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಕನಿಷ್ಠ 30ರಷ್ಟು ಅನುದಾನ ಕೊಡಬೇಕುʼ ಎಂದುಹೇಳಿದರು.
ನಂತರ ತಾಲ್ಲೂಕು ಅಧ್ಯಕ್ಷ ಗ್ಯಾನೇಶ್ ಕಡಗದ ಮಾತನಾಡಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರ್ಕಾರ ಆಹಾರ ಭತ್ಯೆ ಹೆಚ್ಚಳ ಮಾಡಬೇಕು. ಜೈಲಿನಲ್ಲಿರುವ ಕೈದಿಗೆ ಒಂದು ದಿನಕ್ಕೆ ನೂರಾರು ರೂಪಾಯಿ ಖರ್ಚು ಮಾಡುವ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿ ಮಾತ್ರ ಒಂದು ದಿನಕ್ಕೆ 56 ರೂಪಾಯಿ ಖರ್ಚು ಮಾಡುತ್ತಿದೆ, ಇದು ಇಂದಿನ ಬೆಲೆ ಏರಿಕೆ ಸಾಲದು ಆದ್ದರಿಂದ ಕೂಡಲೇ ಸರ್ಕಾರ ಎತ್ತತ್ತಿಕೊಂಡುಕೊಂಡು ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯ ಹೆಚ್ಚಳ ಮಾಡಬೇಕೆಂದು ಅಗ್ರಹಿಸಿದರು.
ಕಾರ್ಯದರ್ಶಿ ಶಿವಕುಮಾರ ಮಾತನಾಡಿ ಕನಕಗಿರಿ ನಗರದಲ್ಲಿ ಪ್ರತ್ಯೇಕವಾದ ಮಹಿಳಾ ಕಾಲೇಜು ಆರಂಭವಾಗಬೇಕು, ಆ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಕೂಲಿಕಾರರ ಸಂಘದ ಕಾರ್ಯದರ್ಶಿ ಹುಸೇನಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಮ್ಯಾಗಡೆ , ಪರಶುರಾಮ್. ನಾಗರಾಜ್. ಬಾಲಾಜಿ ಚಳ್ಳಾರಿ . ಶರೀಫ್ ಹನುಮೇಶ್.ಕನಕಾಚಲ. ಶಿವು ಕನಕಗಿರಿ. ರಮೇಶ ಕಿತ್ತೂರ್. ಮಾರುತಿ. ಅಕ್ಬರ್ ನೇತ್ರಾವತಿ. ಪದ್ಮಾವತಿ. ಹೊಸಕೇರಪ್ಪ ಇದ್ದರು.
ಇದನ್ನು ನೋಡಿ : ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣ ಮಾಡಿದ್ರೆ ನಿಮ್ಮ ಸರ್ಕಾರ ಉಳಿಯಲ್ಲ – ಕಾಂಗ್ರೆಸ್ ಗೆ ಎಚ್ಚರಿಸಿದ ಸಿಪಿಐಎಂ ನಾಯಕ