ಚಂಡೀಗಢ: ಹಿರಿಯ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ

ಚಂಡೀಗಢ: ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಹಿರಿಯ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶ ದ್ವಾರದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಸ್ಥಳದಲ್ಲಿದ್ದ ಜನರು ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರ ಎಂದು ‘ಪಿಟಿಐ’ ವರದಿ ಮಾಡಿದೆ. ಚಂಡೀಗಢ

ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಸುಖ್‌ಬೀರ್ ಸಿಂಗ್ ಬಾದಲ್ ಅವರು ಸ್ವರ್ಣ ಮಂದಿರದ ಮುಂಭಾಗದಲ್ಲಿ ಸೇವಾದಾರನಾಗಿ (ಸೇವಕ) ಮಂಗಳವಾರ ಕರ್ತವ್ಯ ನೆರವೇರಿಸಿದ್ದರು. ಸೇವಾದಾರನ ಸಮವಸ್ತ್ರ ಧರಿಸಿದ್ದ ಸುಖ್‌ಬೀ‌ ಅವರು, ಕೈಯಲ್ಲಿ ಈಟಿ ಹಿಡಿದು ಸ್ವರ್ಣಮಂದಿರದ ಕಾವಲು ಕಾಯ್ದರು. ಕಾಲಿನ ಮೂಳೆ ಮುರಿದಿರುವ ಕಾರಣ, ಗಾಲಿ ಕುರ್ಚಿಯ ಮೇಲೆಯೇ ಕುಳಿತು ಶಿಕ್ಷ ಪೂರೈಸಿದ್ದರು.

ಇದನ್ನೂ ಓದಿ : ಹಿಂಸಾಚಾರ ಪೀಡಿತ ಸಂಭಾಲ್‌ ಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ

ವಯೋಸಹಜವಾಗಿ ಗಾಲಿಕುರ್ಚಿ ಅವಲಂಬಿಸಿರುವ, ಎಸ್‌ಡಿಯ ಮತ್ತೊಬ್ಬ ಹಿರಿಯ ನಾಯಕ ಸುಬ್‌ದೇವ್ ಸಿಂಗ್ ಡೀಂಡನಾ ಅವರೂ, ಸೇವಾದಾರನಾಗಿ ಶಿಕ್ಷೆ ಅನುಭವಿಸಿದ್ದರು. ಇಬ್ಬರ ಕೊರಳಲ್ಲೂ ಪಶ್ಚಾತ್ತಾಪದ ಫಲಕ ನೇತಾಡುತ್ತಿತ್ತು. ಮಾಜಿ ಸಚಿವ ವಿಕ್ರಂ ಸಿಂಗ್ ಮಜೀರಿಯಾ ಅವರು ಸಮುದಾಯ ಭವನದಲ್ಲಿ ಪಾತ್ರೆಗಳನ್ನು ತೊಳೆದಿದ್ದರು.

ಪಂಜಾಬ್‌ನಲ್ಲಿ 2007-2017ರ ನಡುವೆ ‘ಎಸ್‌ಡಿ ಸರ್ಕಾರ’ದ ಅವಧಿಯಲ್ಲಿ ಪ್ರಮಾದಗಳನ್ನು ಎಸಗಿದ್ದಕ್ಕಾಗಿ, ಸುಖ್‌ಬೀರ್ ಹಾಗೂ ಇತರ ನಾಯಕರಿಗೆ ಅಕಾಲ್ ತಖ್‌ನ ಜಾಥದಾರರು (ಸಿಖ್ ಧರ್ಮದ ಪರಮೋಚ್ಚ ಗುರು) ಸೋಮವಾರ ತನ್ನಾ (ಧಾರ್ಮಿಕ ಶಿಕ್ಷೆ) ಪ್ರಕಟಿಸಿದ್ದರು.

ಶಿಕ್ಷೆ ಅನುಸಾರ, ಸುಖ್‌ಬೀರ್ ಹಾಗೂ ಎಸ್‌ಐಡಿಯ ಇತರ ನಾಯಕರು ಸ್ವರ್ಣಮಂದಿರದಲ್ಲಿ ಸೇವಾದಾರನಾಗಿ ಕೆಲಸ ಮಾಡಬೇಕು. ಒಂದು ಗಂಟೆ ಕೀರ್ತನೆಗಳನ್ನು ಆಲಿಸಬೇಕು, ಪಾತ್ರೆಗಳು ಹಾಗೂ ಭಕ್ತರ ಬೂಟುಗಳನ್ನು ಸ್ವಚ್ಛಗೊಳಿಸಬೇಕೆಂದು ಅಕಾಲ್ ತಖ್‌ನ ಜಾಥದಾರ ಜಾನಿ ರಘಬೀ‌ ಸಿಂಗ್‌ ಅವರು ಸೋಮವಾರ ಸೂಚಿಸಿದ್ದರು.

ಇದನ್ನೂ ನೋಡಿ : Every crisis brings an opportunity and makes you brave – Shailaja teacher Janashakthi Media

Donate Janashakthi Media

Leave a Reply

Your email address will not be published. Required fields are marked *