ಚಲಿಸುತ್ತಿರುವ ರೈಲಿನಲ್ಲಿ ಗುಂಡಿನ ದಾಳಿ 4 ಜನರ ಸಾವು

ಮುಂಬೈ: ಜೈಪರ್‌ನಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿರು ಘಟನೆ ನಡೆದಿದೆ.ಮಹಾರಾಷ್ಟ್ರದ ಪಾಲ್ಘರ್‌ ರೈಲು ನಿಲ್ದಾಣದ ಬಳಿ ರೈಲು ರಕ್ಷಣಾ ಪಡೆ (ಆರ್‌ಪಿಎಫ್‌) ಕಾನ್‌ಸ್ಟೆಬಲ್‌ ಸೋಮವಾರ ರೈಲಿನಲ್ಲಿದ್ದ 4 ಜನರನ್ನು ಗುಂಡಿಕ್ಕಿ ಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ರೈಲ್ವೆಯ ಮೀರಾ ರೋಡ್‌ ಮತ್ತು ಭಾಯಂದರ್‌ ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದ್ದಾಗ ಬೆಳಿಗ್ಗೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾನ್‌ಸ್ಟೆಬಲ್‌ ತಮ್ಮ ಸ್ವಯಂಚಾಲಿತ ಬಂದೂಕಿನಿಂದ ಗುಂಡು ಹಾರಿಸಿದ್ದು, ಮೃತರಲ್ಲಿ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಮತು ಮೂವರು ಪ್ರಯಾಣಿಕರು ಸೇರಿದ್ದಾರೆ. ಆರೋಪಿಯನ್ನು ಚೇತನ್‌ ಎಂದು ಗುರುತಿಸಲಾಗಿದೆ.ಗುಂಡು ಹಾರಿಸಿದ ಕಾನ್‌ಸ್ಟೆಬಲ್‌ ಭಾಯಂದರ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಮಣಿಪುರ ಬೆತ್ತಲೆ ಪ್ರಕರಣ ಸುಪ್ರೀಂ ಕೋರ್ಟ್‌ ಕದ ತಟ್ಟಿದ ಸಂತ್ರಸ್ತೆಯರು

ಬೋರಿವಲ್ಲಿ ನಿಲ್ದಾಣದಲ್ಲಿ ಎಲ್ಲಾ 4 ಮೃತದೆಹಗಳನ್ನು ರೈಲಿನಿಂದ ಹೊರತೆಗೆಯಲಾಗಿದ್ದು ಕಾಂದಿವಲಿಯ ಬಾಬಾಸಾಹೇಬ್‌ ಅಂಬೇಡ್ಕರ್‌ ಆಸ್ಪತ್ರೆಗೆ ರವಾನಿಸಸಲಾಗಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಕರ್ತವ್ಯದಲ್ಲಿದ್ದ ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಗುಂಡು ಹಾರಿಸಿದ್ದಾರೆ ಎಂದು ನಮಗೆ ತಿಳಿದುಬಂದಿದೆ.ಗುಂಡಿನ ದಾಳಿಯಿಂದ 4 ಜನರು ಸಾವನ್ನಪ್ಪಿದ್ದಾರೆ.ನಮ್ಮ ರೈಲ್ವೆ ಅಧಿಕಾರಿ ಸ್ಥಳಕ್ಕೆ ತಲುಪಿದ್ದಾರೆ. ಮೃತರ ಕುಟುಂಬಗಳನ್ನು ಸಂಪರ್ಕಿಸಲಾಗಿದ್ದು ಪರಿಹಾರ ನೀಡಲಾಗುವುದು ಎಂದು ಡಿಆರ್‌ಎಂ ನೀರಜ್‌ ಕುಮಾರ್‌ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *