ತಮಿಳುನಾಡು: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಆರು ಮಂದಿ ಸಾವು

ತಮಿಳುನಾಡು: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ಸಾಯಿನಾಥ್‌ನಲ್ಲಿ ಸಂಭವಿಸಿದೆ. ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪಟಾಕಿ ಸಿಡಿತದ ರಭಸಕ್ಕೆ ಕಾರ್ಮಿಕರು ಕೆಲ ಮೀಟರ್ ದೂರಕ್ಕೆ ಎಸೆಯಲ್ಪಟ್ಟರು. ಇದಲ್ಲದೆ, ಸ್ಫೋಟದಿಂದ ನಾಲ್ಕು ಕಟ್ಟಡಗಳು ನಾಶವಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು| ಇಡಿ ಹೆಸರಿನಲ್ಲಿ ದಾಳಿ; 30 ಲಕ್ಷ ರೂ. ಕದ್ದು ಪರಾರಿ

ಅವಶೇಷಗಳಡಿ ಸಿಲುಕಿರುವ ಯಾರನ್ನಾದರೂ ರಕ್ಷಿಸಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕಾರ್ಖಾನೆಯ ಕಚ್ಚಾ ವಸ್ತುಗಳ ಸಂಗ್ರಹ ಕೊಠಡಿಯಲ್ಲಿ ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣ ಪೂರ್ಣಗೊಂಡ ನಂತರ ಅಪಘಾತಕ್ಕೆ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ತಿರುವುರು ಜಿಲ್ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅವರಲ್ಲಿ 9 ತಿಂಗಳ ಮಗುವೂ ಸೇರಿದೆ. ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದಿಂದಾಗಿ 10ಕ್ಕೂ ಹೆಚ್ಚುಮನೆಗಳು ಧ್ವಂಸಗೊಂಡಿವೆ. ಸ್ಫೋಟದ ಸದ್ದಿಗೆ ಜನರು ಭಯಭೀತರಾಗಿ ಓಡಿದರು.

ಇದನ್ನೂ ನೋಡಿ : ಎಡ-ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಧಾರ Janashakthi Media

Donate Janashakthi Media

Leave a Reply

Your email address will not be published. Required fields are marked *