ನವದೆಹಲಿ: ಮೇ 15 ಗುರುವಾರ ಬೆಳಿಗ್ಗೆ 8:55 ರ ಸುಮಾರಿಗೆ ರಾಜ್ಯದ ಪಿತಾಂಪುರದಲ್ಲಿರುವ ಶ್ರೀ ಗುರು ಗೋವಿಂದ್ ಸಿಂಗ್ ವಾಣಿಜ್ಯ ಕಾಲೇಜಿನ ಗ್ರಂಥಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಸಂಭವಿಸಿದೆ.
ಕಾಲೇಜಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ 11 ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ತಂಡ ಯಶಸ್ವಿಯಾಗಿದೆ. ನವದೆಹಲಿ
ಈ ವೇಳೆಗೆ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ಅಗ್ನಿ ಅವಘಡದಿಂದ ಯಾವುದೇ ಸಾವುನೋವು ಸಂಭವಿಸಿದ ವರದಿಯಾಗಿಲ್ಲ.
ಇದನ್ನೂ ಓದಿ: ಬಂಟ್ವಾಳ| ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಖಜಾನೆಯ ಮುಖ್ಯ ಲೆಕ್ಕಿಗ ಬಂಧನ
ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಬೆಳಿಗ್ಗೆ 8.55 ರ ಸುಮಾರಿಗೆ ಕಾಲೇಜು ಗ್ರಂಥಾಲಯದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು. ಇದಾದ ಬಳಿಕ ಬೆಂಕಿ ಕಾಲೇಜಿನ ಮೊದಲ, ಎರಡನೇ ಮತ್ತು ಮೂರನೇ ಮಹಡಿಗಳನ್ನು ಆವರಿಸಿಕೊಂಡಿತ್ತು, ಬೆಂಕಿಯನ್ನು ನಂದಿಸಲು 11 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಳಿಗ್ಗೆ 9.40 ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಡಿಯೊದಲ್ಲಿ ಕಾಲೇಜಿನ ಕಿಟಕಿಗಳಿಂದ ಜ್ವಾಲೆಗಳು ಹೊರಬರುತ್ತಿರುವುದು ಮತ್ತು ಬೆಂಕಿಯಿಂದ ಕಪ್ಪು ಹೊಗೆ ಹೊರಬರುತ್ತಿರುವುದು ಕಾಣಬಹುದು. ಯಾವುದೇ ಸಾವುನೋವುಗಳ ಬಗ್ಗೆ ಇನ್ನೂ ಯಾವುದೇ ಸುದ್ದಿ ಬಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ವಕ್ಪ್ ತಿದ್ದುಪಡಿ ಮಸೂದೆ – 2025 | ಒಂದು ಅವಲೋಕನ Janashakthi Media