ತೆಲಂಗಾಣ| ರಾಸಾಯನಿಕ ಉದ್ಯಮದಲ್ಲಿ ಬೆಂಕಿ; 5 ಜನರು ಸಾವು

ತೆಲಂಗಾಣ: ಜೂನ್‌ 30 ಸೋಮವಾರದಂದು ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಪಶಮೈಲರಾಮ್‌ನಲ್ಲಿರುವ ಸಿಚಾರ್ ರಾಸಾಯನಿಕ ಉದ್ಯಮದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಎಂದು  ವರದಿ ಯಾಗಿದೆ. ವರದಿಯ ಪ್ರಕಾರ, ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ತೆಲಂಗಾಣ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳುವಂತೆ, ಸ್ಫೋಟದಿಂದಾಗಿ ಸುಮಾರು 15 ರಿಂದ 20 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡುವುದನ್ನು ನೋಡುತ್ತಾ ನಿಂತಿದ್ದರು’: ದೂರಿನಲ್ಲಿ ಕಾನೂನು ವಿದ್ಯಾರ್ಥಿನಿ ನೋವು

ವರದಿಗಳ ಪ್ರಕಾರ, ಸ್ಥಳದಲ್ಲಿ 11 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಅಗ್ನಿಶಾಮಕ ಕಾರ್ಯಾಚರಣೆ ನಡೆಯುತ್ತಿದೆ. ಸಿಲುಕಿರುವ ಕಾರ್ಮಿಕರನ್ನು ಹುಡುಕಲು ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ತಂಡಗಳನ್ನು ನಿಯೋಜಿಸಲಾಗಿದೆ.

ಇದನ್ನೂ ನೋಡಿ: ಅಶ್ರಫ್ ಗುಂಪು ಹತ್ಯೆ : PUCL, APCR, AILAJ ಸತ್ಯಶೋಧನಾ ವರದಿಯಲ್ಲಿ ಆಘಾತಕಾರಿ ಅಂಶಗಳು Janashakthi Media

Donate Janashakthi Media

Leave a Reply

Your email address will not be published. Required fields are marked *