ಬೆಂಗಳೂರು: ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ಶ್ರೀರಾಮ್ ವುಡ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ. ಕೋಟ್ಯಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ
ಕಾರ್ಖಾನೆಯು ಬೆಂಕಿ ಕೆನ್ನಾಲಿಗೆ ಆವರಿಸಿದ ಪರಿಣಾಮ ಹೊತ್ತಿ ಉರಿಯಿತು. ಕಾರ್ಖಾನೆಯಲ್ಲಿದ್ದವರಲ್ಲಿ 25 ಕಾರ್ಮಿಕರು ನಾಪತ್ತೆಯಾಗಿದ್ದರು. ಅವರಲ್ಲಿ ಓರ್ವ ಕಾರ್ಮಿಕ ಹೊರಗೆ ಬರಲಾಗದ ಸಜೀವ ದಹನವಾಗಿದ್ದು, ಸಧ್ಯ ಆತನ ಮೃತದೇಹವನ್ನು ಅಗ್ನಿಶಾಮಕದಳ ತಂಡ ಹೊರತೆಗೆದಿದ್ದಾರೆ. ಫ್ಯಾಕ್ಟರಿಯಲ್ಲಿ
ಉತ್ತರ ಪ್ರದೇಶ ಮೂಲದ ಗೋವಿಂದ್ (24) ಅಕರಿಯಲ್ಲಿ ಸಜೀವ ದಹನವಾಗಿರುವ ಕಾರ್ಮಿಕ, ಈತ ಕಾರ್ಖಾನೆಯಲ್ಲಿಯೇ ಮಲಗುತ್ತಿದ್ದನು. ನಸುಕಿನ ವೇಳೆ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡಿರುವುದರಿಂದ ಎದ್ದು ಮಂಪರಿನಲ್ಲಿ ಹೊರಬರಲಾಗದೇ ಸಾವಿಗೀಡಾಗಿದ್ದಾನೆ.
ಇದನ್ನೂ ಓದಿ: ಪೂರ್ವಿಕರ ಕೃಷಿ ಭೂಮಿ ಮಾರಾಟ ʼಕುಟುಂಬದ ಸದಸ್ಯರಿಗೆ ʼ ಮೊದಲ ಆದ್ಯತೆ – ಸುಪ್ರೀಂ ಕೋರ್ಟ್
ಹರ್ಷದ್ ಪಟೇಲ್ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದೆ. ಮೇಲ್ನೋಟಕ್ಕೆ ಸುಮಾರು 5 ಕೋಟಿಗೂ ಹೆಚ್ಚು ಬೆಲೆಬಾಳುವ ವುಡ್ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ಹೆದ್ದಾರಿಯಲ್ಲಿ ಕಾರ್ಖಾನೆ ಇರುವುದರಿಂದ ಸಹಜವಾಗಿ ಆತಂಕ ಎದುರಾಗಿತ್ತು. ಆಶಿರ್ವಾದ್ ಫುಡ್ ಕಂಪನಿಗೆ ಹೊಂದಿಕೊಂಡಿರುವ ವುಡ್ ಕಾರ್ಖಾನೆಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದ ಕೋಟ್ಯಾಂತರ ರೂ. ಬೆಲೆ ವುಡ್ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ತಂಡ ವಾಹನಗಳ ದೌಡಾಯಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಕರೆಗಟ್ಟಲೆ ಪ್ರದೇಶದಲ್ಲಿ ಈ ಕಾರ್ಖಾನೆ ಇದೆ. ಬೆಂಗಳೂರು-ಹೊಸೂರು ಹೆದ್ವಾರಿಗೆ ಹೊಂದಿಕೊಂಡಿರುವ ಹಿನ್ನೆಲೆ ಆತಂಕ ಹೆಚ್ಚಾಗಿತ್ತು. ಬಾರಿ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಬೆಂಕಿಯನ್ನ ನಂದಿಸಲು ಅಗ್ನಿ ಶಾಮಕ ತಂಡ ಹರಸಾಹಸಪಟ್ಟಿತು.
ಇದನ್ನೂ ನೋಡಿ: ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್‌ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media