ಬೆಂಗಳೂರು: ಕಾಂಗ್ರೆಸ್ ಮುಖಂಡ ಧನಂಜಯ್ ವಿರುದ್ಧ ಫೋಟೊ ಹಾಗೂ ಮೊಬೈಲ್ ಸಂದೇಶಗಳನ್ನು ಇಟ್ಟುಕೊಂಡು ₹3 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಅಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮುಖಂಡ
ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿ ಯಶೋಧಾ ಸಿದ್ದೇಗೌಡ ಎಂಬುವವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಮತ್ತೆ ಮಲೈ ಮಹದೇಶ್ವರ ಬೆಟ್ಟದಲ್ಲಿ ಬೇಟೆ; ಸತ್ತ ಹುಲಿಯ ಅರ್ಧ ದೇಹ ಪತ್ತೆ
‘ನಿಮ್ಮ ಮನೆಯವರ ವಿಡಿಯೊಗಳು ನನ್ನ ಬಳಿ ಇವೆ. ಅವರು ಬೇರೆ ಮಹಿಳೆಯವರಿಗೆ ಸಂದೇಶ ಕಳುಹಿಸಿರುವ ಸ್ಕ್ರೀನ್‌ಶಾಟ್‌ಗಳು ಇವೆ. ನಿಮ್ಮ ಯಜಮಾನರು ಚುನಾವಣೆಗೆ ನಿಂತರೆ ವಿಡಿಯೊಗಳನ್ನು ಬಿಡುಗಡೆ ಮಾಡುತ್ತೇನೆಂದು ಹಲವು ಬಾರಿ ಹೇಳಿದ್ದಾರೆ. ಬೆದರಿಸಿ ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನ ಮೊಬೈಲ್‌ಗೆ ಕೆಲ ಮೆಸೇಜ್‌ಗಳನ್ನು ಕಳುಹಿಸಿ ಡಿಲಿಟ್ ಮಾಡಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೃಷ್ಣ ಭವನಕ್ಕೆ ಸಾಗುವ ರಸ್ತೆಯಲ್ಲಿ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಕ್ಕಳನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ನೋಡಿ: ನಿಮ್ಮ ಶ್ವಾನಕ್ಕೆ ನೀವೇ ತರಬೇತಿ ನೀಡಿ . ಡಾ : ಶ್ರೀಧರ Janashakthi Media
