ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಕುರಿತು ಸಿಎಂ ಪರವಾಗಿ ಕಾನೂನು ಮಾನವ ಹಕ್ಕು ಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಸಂಘಟನಾ ಕಾರ್ಯದರ್ಶಿ ಹರೀಶ್ ನಾಗರಾಜು ದೂರು ನೀಡಿದ ಹಿನ್ನಲೆ ಎಫ್‌ಐಆರ್ ದಾಖಲಾಗಿದೆ.
ಆರೋಪಿಗಳಾದ ಪ್ರಭಾಕರ ರೆಡ್ಡಿ,ವಸಂತ್‌ಗಿಳಿಯಾರ್,ವಿಜಯ್ ಹೆರಾಗು, ಪಾಂಡು ಮೋದಿಕಾ ಪರಿವಾರ್, ಬಿಎಸ್‌ವೈ ಸಪೋರ್ಟರ್ಸ್, ದಾವಣಗೆರೆ,ಬಿಜೆಪಿ, ದತ್ತಾತ್ರಿ ಗೋಶಾಲೆ ಇವರುಗಳ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರನ್ವಯ ಈ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನು ಓದಿ : ಲೋಕಸಭಾ ಚುನಾವಣೆ: ಮೊದಲ ಹಂತದಲ್ಲಿ 252 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು
” ಹಿಂದುಗಳ ಅಗತ್ಯ ನಮಗೆ ಬೇಡ ಮುಸ್ಲಿಂಮರ ವೋಟು ಸಾಕು ಮುಂದಿನ ಜನ್ಮದಲ್ಲಿ, ಮುಸ್ಲಿಂರಾಗಿ ಹುಟ್ಟುತ್ತೇನೆ ಮುಸ್ಲಿಮರ ಓಲೈಕೆಯ ಕುರಿತು ಬಿಜೆಪಿಯರ ಟೀಕೆಯ ಬಗ್ಗೆ, ತಲೆ ಕೆಡಿಸಿಕೊಳ್ಳಬೇಡಿ” ಎಂದು ಸುಳ್ಳು ಸುದ್ದಿ ಮಾಡಲಾಗಿತ್ತು.
ಇದನ್ನು ನೋಡಿ : ಮೈ ತುಂಬಾ ದ್ವೇಷ ತುಂಬಿಕೊಂಡಿರುವ ತೇಜಸ್ವಿ ಸೂರ್ಯನನ್ನು ಸೋಲಿಸುವುದೆ ಕೆಆರ್‌ಎಸ್ ಪಕ್ಷದ ಗುರಿ Janashakthi Media