ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಹಣ ನೀಡಿದ ಆರೋಪ | ತೆಲಂಗಾಣ ಸಚಿವರ ವಿರುದ್ಧ ಎಫ್‌ಐಆರ್

ಹೈದರಾಬಾದ್: ತೆಲಂಗಾಣದ ಬುಡಕಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಅವರು ಮತದಾರರಿಗೆ ಹಣ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ನವೆಂಬರ್ 17 ರ ಶುಕ್ರವಾರದಂದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೊವನ್ನು ಆಧರಿಸಿ ಮಹಬೂಬಾಬಾದ್ ಜಿಲ್ಲೆಯ ಗುಡೂರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಫ್ಲೈಯಿಂಗ್ ಸ್ಕ್ವಾಡ್ ತಂಡ (ಎಫ್‌ಎಸ್‌ಟಿ) ಸ್ವೀಕರಿಸಿದ ದೂರಿನ ಪ್ರಕಾರ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಯ ಚುನಾವಣಾ ಪ್ರಚಾರದ ವೇಳೆ ಕೊಂಗರಗಿಡ್ಡಾ ಗ್ರಾಮದಲ್ಲಿ ಘಟನೆ ನಡೆದಿದೆ. ಮಹಿಳೆಯರು ಸಚಿವರನ್ನು ಸಾಂಪ್ರದಾಯಿಕವಾಗಿ ಸ್ವಾಗತ ಮಾಡಿದ,  ಸತ್ಯವತಿ ರಾಥೋಡ್ ಅವರು ಆರತಿ ತಟ್ಟೆಗೆ ಕರೆನ್ಸಿ ನೋಟುಗಳನ್ನು ಹಾಕಿದ್ದರು. ತೆಲಂಗಾಣ

ಇದನ್ನೂ ಓದಿ: ರಾಜ್ಯಪಾಲ ಹಿಂದಿರುಗಿಸಿದ ಎಲ್ಲಾ 10 ಮಸೂದೆಯನ್ನು ಪುನಃ ಅಂಗೀಕರಿಸಿದ ತಮಿಳುನಾಡು ಸರ್ಕಾರ

ಸತ್ಯವತಿ ರಾಥೋಡ್ ಅವರು ಬಿಆರ್‌ಎಸ್ ಅಭ್ಯರ್ಥಿ ಶಂಕರ್ ನಾಯ್ಕ್ ಪರ ಪ್ರಚಾರ ಮಾಡಲು ಕೊಂಗರಗಿಡ್ಡಕ್ಕೆ ತೆರಳಿದ್ದರು. ಗ್ರಾಮದ ಮಹಿಳೆಯರು ಸಾಂಪ್ರದಾಯಿಕ ಆರತಿಯೊಂದಿಗೆ ಸಚಿವರನ್ನು ಸ್ವಾಗತಿಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರು ಆರತಿ ತಟ್ಟೆಗೆ 4 ಸಾವಿರ ರೂ. ಹಾಕಿದ್ದರು. ತೆಲಂಗಾಣ

ಮುರಳಿ ಮೋಹನ್ ಎಂಬ ಎಫ್‌ಎಸ್‌ಟಿ ತಂಡದ ಸದಸ್ಯರೊಬ್ಬರು ಈ ಬಗ್ಗೆ ತನಿಖೆ ನಡೆಸಿದ್ದು, ಮತದಾರರಿಗೆ ಹಣ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸಚಿವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಎಫ್‌ಎಸ್‌ಟಿ ಅಧಿಕಾರಿ ಆರೋಪಿಸಿದ್ದಾರೆ. ನವೆಂಬರ್ 30 ರಂದು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ.

ಸತ್ಯವತಿ ರಾಥೋಡ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಲಂಚ ಮತ್ತು ಚುನಾವಣಾ ಸಮಯದಲ್ಲಿ ಕಾನೂನು ನಿಬಂಧನೆಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಜನತಾ ಪ್ರಾತಿನಿಧ್ಯ (ಆರ್‌ಪಿ) ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿದೆ.

ಅಕ್ಟೋಬರ್‌ನಲ್ಲಿ, ಮತದಾರರ ಮೇಲೆ ಪ್ರಭಾವ ಬೀರಲು ಸಿಕಂದರಾಬಾದ್‌ನ ತಾಡ್‌ಬಂಡ್ ಹನುಮಾನ್ ದೇವಸ್ಥಾನದಲ್ಲಿ ಹಣ ಹಂಚುತ್ತಿದ್ದ ಆರೋಪದ ಮೇಲೆ ಬಿಆರ್‌ಎಸ್ ಕಾರ್ಯಕರ್ತನ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿಯಿಂದ 55,900 ರೂ.ಗಳನ್ನು ವಶಪಡಿಸಿಕೊಂಡಿದ್ದು, ಬೋವನಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲ ಹಿಂದಿರುಗಿಸಿದ ಎಲ್ಲಾ 10 ಮಸೂದೆಯನ್ನು ಪುನಃ ಅಂಗೀಕರಿಸಿದ ತಮಿಳುನಾಡು ಸರ್ಕಾರ

ರಾಜ್ಯಪಾಲ ಹಿಂದಿರುಗಿಸಿದ ಎಲ್ಲಾ 10 ಮಸೂದೆಯನ್ನು ಪುನಃ ಅಂಗೀಕರಿಸಿದ ತಮಿಳುನಾಡು ಸರ್ಕಾರ

ವಿಡಿಯೊ ನೋಡಿ:  ದಲಿತರ ಶೃಂಗಸಭೆ : ಸನಾತನಿ ಸರ್ಕಾರದಿಂದ ದಲಿತರ ಮೇಲೆ ನಿರಂತರ ದರ್ಜನ್ಯ – ಜನಾಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *