ಸಚಿವರ ಜೊತೆಗೆ ಕೆಲವು ಚುನಾವಣಾಧಿಕಾರಿಗಳ ವಿರುದ್ಧವು ಪ್ರಕರಣ ದಾಖಲಿಸಲಾಗಿದೆ ತೆಲಂಗಾಣ
ತೆಲಂಗಾಣ: ಚುನಾವಣಾ ಅಫಿಡವಿಟ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಪ್ರವಾಸೋದ್ಯಮ ಮತ್ತು ಅಬಕಾರಿ ಸಚಿವ ವಿ. ಶ್ರೀನಿವಾಸ್ ಗೌಡ್ ಮತ್ತು ಇತರ 10 ಜನರ ವಿರುದ್ಧ ರಾಜ್ಯದ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ. ಹೈದರಾಬಾದ್‌ನ ‘ಸಂಸದ ಮತ್ತು ಶಾಸಕರ ವಿಶೇಷ ನ್ಯಾಯಾಲಯ’ದ ನಿರ್ದೇಶನದ ಮೇರೆಗೆ ಮಹಬೂಬ್‌ನಗರ 2ನೇ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಚಿವರ ಜೊತೆಗೆ ಕೆಲವು ಚುನಾವಣಾಧಿಕಾರಿಗಳ ವಿರುದ್ಧವು ಪ್ರಕರಣ ದಾಖಲಿಸಿದ್ದಾರೆ.
ಶ್ರೀನಿವಾಸ್ ಗೌಡ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸುವಂತೆ ನಾಂಪಲ್ಲಿ ವಿಶೇಷ ನ್ಯಾಯಾಲಯ ಮಹಬೂಬ್‌ನಗರ ಪೊಲೀಸರಿಗೆ ಸೂಚಿಸಿತ್ತು. ರಾಘವೇಂದ್ರ ರಾಜು ಎಂಬವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ನಿರ್ದೇಶನ ನೀಡಲಾಗಿತ್ತು. ನ್ಯಾಯಾಲಯದ ಆದೇಶವಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ತೆಲಂಗಾಣ
ಇದನ್ನೂ ಓದಿ: ವಸಾಹತುಶಾಹಿ ‘ದೇಶದ್ರೋಹ ಕಾನೂನು’ ರದ್ದು; ಕಠಿಣ ಶಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಪರಿಚಯ?
ತಕ್ಷಣವೇ ಪ್ರಕರಣದ ವಿವರಗಳನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ, ಪ್ರಕರಣವನ್ನು ದಾಖಲಿಸಲಾಗಿದೆಯೇ ಎಂದು ಕೇಳಿದೆ. ಪ್ರಕರಣ ದಾಖಲಾದರೆ ಸಂಜೆಯೊಳಗೆ ಎಫ್‌ಐಆರ್ ಹಾಗೂ ಇತರೆ ವಿವರಗಳನ್ನು ಸಲ್ಲಿಸಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. ಮಹಬೂಬ್‌ನಗರ ಪೊಲೀಸರು ಪ್ರಕರಣ ದಾಖಲಿಸಲು ವಿಫಲರಾದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿತ್ತು. ತೆಲಂಗಾಣ
ಶ್ರೀನಿವಾಸಗೌಡ ಅವರು 2018ರ ವಿಧಾನಸಭಾ ಚುನಾವಣೆ ವೇಳೆ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು, ಮಹಬೂಬ್‌ನಗರದಲ್ಲಿ ಚುನಾವಣಾಧಿಕಾರಿಯ ಮುಂದೆ ಚುನಾವಣಾ ಅಫಿಡವಿಟ್‌ನಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ದೂರಲಾಗಿದೆ. ಜೊತೆಗೆ ಅವರ ಪತ್ನಿ ಖರೀದಿಸಿದ ಜಮೀನು ಮತ್ತು ಬ್ಯಾಂಕ್‌ಗಳಿಂದ ಪಡೆದ ಸಾಲಕ್ಕೆ ಸಂಬಂಧಿಸಿದ ಅಫಿಡವಿಟ್‌ನಲ್ಲಿರುವ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಶ್ರೀನಿವಾಸ ಗೌಡ್ ಅವರು ಮಹಬೂಬ್‌ನಗರ ವಿಧಾನಸಭಾ ಕ್ಷೇತ್ರದಿಂದ ಆಡಳಿತರೂಢ ಬಿಆರ್‌ಎಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದೂರುದಾರರ ಅರ್ಜಿಯಲ್ಲಿ, ಸಚಿವರು ಮೂರು ಅಫಿಡವಿಟ್‌ಗಳನ್ನು ಸಲ್ಲಿಸಿದ್ದು, ಈ ಅಫಿಡವಿಟ್ ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿ ಚುನಾವಣಾಧಿಕಾರಿಯ ಮೇಲೆ ಪ್ರಭಾವ ಬೀರಿ ಬದಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಸಚಿವರು ಈ ಆರೋಪವನ್ನು ನಿರಾಕರಿಸಿದ್ದಾರೆ.
ವಿಡಿಯೊ ನೋಡಿ: ಧರ್ಮಸ್ಥಳ, ಉಜಿರೆಯಲ್ಲಿ 463 ಅಸಹಜ ಸಾವು – ಖಾವಂದರಿಂದ ಮಾನವ ಹಕ್ಕುಗಳ ಉಲ್ಲಂಘನೆ – ನರೇಂದ್ರ ನಾಯಕ್ ನೇರ ಆರೋಪ