ಲಖ್ನೋ: ಉತ್ತರ ಪ್ರದೇಶ ಪೊಲೀಸರು ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಮಾಜಿ ವೈದ್ಯ ಕಫೀಲ್ ಖಾನ್ ಮತ್ತು ಅವರ ಪುಸ್ತಕವನ್ನು ಪ್ರಕಟಿಸಿದ ಐದು ಅಪರಿಚಿತ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪುಸ್ತಕದ ಕೆಲವು ಪಠ್ಯವು ರಾಜ್ಯ ಸರ್ಕಾರದ ವಿರುದ್ಧವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡಾ. ಕಫೀಲ್ ಖಾನ್ ಅವರು ‘ದಿ ಗೋರಖ್‌ಪುರ ಆಸ್ಪತ್ರೆ ದುರಂತ: ಎ ಡಾಕ್ಟರ್ಸ್ ಮೆಮೊಯಿರ್ ಆಫ್ ಎ ಡೆಡ್ಲಿ ಮೆಡಿಕಲ್ ಕ್ರೈಸಿಸ್’ ಎಂಬ ಶೀರ್ಷಿಕೆಯ ಪುಸ್ತಕವನ್ನು 2021 ರಲ್ಲಿ ಪ್ರಕಟಿಸಲಾಯಿತು ಮತ್ತು ಇದನ್ನು ಹಲವಾರು ಭಾರತೀಯ ಭಾಷೆಗಳಿಗೆ ಈಗಾಗಲೆ ಅನುವಾದಿಸಲಾಗಿದೆ.
ಇದನ್ನೂ ಓದಿ: ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ: ಪ್ರಿಯಾಂಕ್ ಖರ್ಗೆ
ಲಕ್ನೋದ ಕೃಷ್ಣನಗರದ ಸ್ಟೇಷನ್ ಹೌಸ್ ಅಧಿಕಾರಿ ಜಿತೇಂದ್ರ ಪ್ರತಾಪ್ ಸಿಂಗ್, ಕೃಷ್ಣನಗರದ ಉದ್ಯಮಿ ಮನೀಶ್ ಶುಕ್ಲಾ ಅವರ ದೂರಿನ ಮೇರೆಗೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಪುಸ್ತಕಗಳ ಮುದ್ರಣ ಮತ್ತು ನೋಂದಣಿ ಕಾಯ್ದೆಯ ಉಲ್ಲಂಘನೆಯ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಡಾ. ಕಫೀಲ್ ಅವರ ಪುಸ್ತಕವನ್ನು ಅವರ ಬೆಂಬಲಿಗರ ನಡುವೆ ವಿತರಿಸಲಾಯಿತು ಮತ್ತು ಮಾರಾಟ ಮಾಡಲಾಯಿತು. “ಹಣವನ್ನು ಸಂಗ್ರಹಿಸುವುದು, ತನ್ನನ್ನು ಅಮಾಯಕನಂತೆ ಬಿಂಬಿಸುವುದು, ರಾಜ್ಯ ಸರ್ಕಾರವನ್ನು ಉರುಳಿಸುವುದು ಮತ್ತು 2024 ರಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸದಂತೆ ತಡೆಯುವುದು” ಈ ಪುಸ್ತಕದ ಉದ್ದೇಶವಾಗಿದೆ ಎಂದು ಆರೋಪಿಸಲಾಗಿದೆ.
ರಹಸ್ಯ ಕಾರ್ಯಾಚರಣೆಗಾಗಿ ಹಣ ಪಡೆಯಲು ಹಾಗೂ ಸಮುದಾಯಗಳ ನಡುವೆ ಸಂಘರ್ಷವನ್ನು ಆಯೋಜಿಸುವ ಬಗ್ಗೆ ದೂರವಾಣಿಯಲ್ಲಿ ನಾಲ್ಕೈದು ವ್ಯಕ್ತಿಗಳು ಚರ್ಚಿಸುವುದನ್ನು ಅವರು ಕೇಳಿಸಿಕೊಂಡಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Chiatra and Gang| ಬಿಜೆಪಿ ಟಿಕೆಟ್ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ | ಚೈತ್ರಾ, ಶ್ರೀಕಾಂತ್‌ಗೆ ಜಾಮೀನು
ವಿವಿಧ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ದುರುದ್ದೇಶಪೂರಿತ ಕೃತ್ಯ ಎಸಗಿರುವ ಬಗ್ಗೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕಫೀಲ್ ಖಾನ್ ವಿರುದ್ಧ 10 ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ. 1867 ರ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್‌ನ ಸೆಕ್ಷನ್ 3 ಮತ್ತು 12 ರ ಅಡಿಯಲ್ಲಿ ಅವರು ಮೇಲೆ ಆರೋಪ ಹೊರಿಸಲಾಗಿದೆ.
ಕಫೀಲ್ ಖಾನ್ ಅವರನ್ನು 2017 ರಲ್ಲಿ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುವಾಗ ಸೇವೆಯಿಂದ ಅಮಾನತುಗೊಳಿಸಲಾಯಿತು. ಈ ವೇಳೆ ಅಲ್ಲಿನ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಆ ಸಂದರ್ಭ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಅವರನ್ನು ಸಂರಕ್ಷಕ ಎಂದು ಪ್ರಶಂಸಿಸಲಾಗಿತ್ತು. ಆದರೆ ಕರ್ತವ್ಯ ಲೋಪಕ್ಕಾಗಿ ಇತರ ಸಿಬ್ಬಂದಿಗಳೊಂದಿಗೆ ಅವರು ಕ್ರಮವನ್ನು ಎದುರಿಸಬೇಕಾಯಿತು ಹಾಗೂ ಆರು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು.
ಅದಾಗ್ಯೂ, ಅಲಹಾಬಾದ್ ಹೈಕೋರ್ಟ್ 2020 ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಅವರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿತ್ತು.
ವಿಡಿಯೊ ನೋಡಿ: ಬಿಗ್ ಡಿಬೇಟ್ : ಐದು ರಾಜ್ಯಗಳ ಚುನಾವಣಾ ಫಲಿತಾಂಶ 2023| Assembly Election Results 2023