454 ಮರಗಳನ್ನು ಕಡಿದ ವ್ಯಕ್ತಿಗೆ 4.54 ಕೋಟಿ ದಂಡ: ಸುಪ್ರೀಂ ಕೋರ್ಟ್

ವದೆಹಲಿ: ಮರಗಳ ಮಾರಣಹೋಮ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದೂ, ಹವಾಮಾನ ವೈಪರೀತ್ಯಗಳಿಗೂ ಇದೇ ವಿಚಾರ ಸಾಕ್ಷಿಯಾಗುತ್ತಿದೆ. ಈ ಕುರಿತು ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿ ಎಲ್ಲರ ಗಮನ ಸೆಳೆದಿದೆ. ವ್ಯಕ್ತಿಗೆ

454 ಮರಗಳನ್ನು ಕಡಿದು ಕೋರ್ಟ್ ನಲ್ಲಿ ದ್ಯಾವೆ ಎದುರಿಸುತ್ತಿದ್ದ ವ್ಯಕ್ತಿಯ ವಾದ ಆಲಿಸಿದ ಸುಪ್ರೀಂ ಕೋರ್ಟ್, ಭಾರಿ ಮೊತ್ತದ ದಂಡ ವಿಧಿಸಿದೆ. 1 ಮರಕ್ಕೆ ಬರೋಬ್ಬರಿ 1 ಲಕ್ಷ ಹಣ ಫೈನ್ ಹಾಕಿ ಒಟ್ಟು 4.54 ಕೋಟಿ ದಂಡ ಹಾಕಿ ಆದೇಶ ನೀಡಿದೆ.

ಇದನ್ನೂ ಓದಿ: ನವದೆಹಲಿ| ಹನಿಟ್ರ್ಯಾಪ್‌ ಪ್ರಕರಣ: ಸಿಬಿಐ ತನಿಖೆಗೆ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ವಜಾ

ವ್ಯಕ್ತಿಯೊಬ್ಬ ತಾಜ್ ಟ್ರಾಪೇಸಿಯಂ ನಲ್ಲಿ ಸಂರಕ್ಷಿಸಲ್ಪಟ್ಟಿದ್ದ ಮರಗಳನ್ನು ಕಡಿದು ಹಾಕಿದ್ದನು. ಈ ಸಂಬಂಧ ಕೇಸ್ ಕೂಡ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತಲೂ ಘೋರ ಅಪರಾಧ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೆ ವಾದ ಪ್ರತಿವಾದ ಆಲಿಸಿ ವ್ಯಕ್ತಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media

Donate Janashakthi Media

Leave a Reply

Your email address will not be published. Required fields are marked *