ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ;ಬಸವರಾಜ ರಾಯರೆಡ್ಡಿ

ಕೊಪ್ಪಳ :ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ. 6.90 ಕೋಟಿ ಜನರಿಗೆ ₹1 ಲಕ್ಷ ಕೋಟಿ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು ₹96 ಲಕ್ಷ ಕೋಟಿ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಬಸವರಾಜ ರಾಯರೆಡ್ಡಿ  ಹೇಳಿದ್ದಾರೆ. ಆರ್ಥಿಕ ಸ್ಥಿತಿ 

ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆರ್ಥಿಕ ಹೊಡೆತವಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ. 6.90 ಕೋಟಿ ಜನರಿಗೆ ₹1 ಲಕ್ಷ ಕೋಟಿ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು ₹96 ಲಕ್ಷ ಕೋಟಿ  ನೀಡಲಾಗುತ್ತದೆ .  ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ  ನೀಡುವುದರಲ್ಲಿ  ಯಾವುದೇ ತಪ್ಪಿಲ್ಲ.  ಗ್ಯಾರಂಟಿ ಯೋಜನೆಗಳನ್ನು  ನಿಲ್ಲಿಸುವುದಿಲ್ಲ; ಮುಂದುವರಿಸುತ್ತೇವೆ ಎಂದರು.

ಇದನ್ನು ಓದಿ : ನಿಯಾಮವಳಿ ಉಲ್ಲಂಘನೆ; ಯತ್ನಾಳ್ ಮಾಲೀಕತ್ವದ ಕಾರ್ಖಾನೆ ಮುಚ್ಚುವಂತೆ ನೋಟಿಸ್

ನಾವು ಗ್ಯಾರಂಟಿ ಬಂದ್ ಮಾಡಿದರೆ ಜನ ಸುಮ್ಮನಿರುತ್ತಾರಾ? ಕೊಟ್ಟಿದ್ದನ್ನು ನಿಲ್ಲಿಸಲು ಆಗುವುದಿಲ್ಲ, ಮುಂದೆಯೂತೆಗೆಯಬಾರದು. ಗ್ಯಾರಂಟಿಯಿಂದ ಹಣದ ಭಾರವಿದೆ, ಆದರೆ ಅದಕ್ಕೆ ಪರಿಹಾರ ಹುಡುಕಿಕೊಂಡಿದ್ದೇವೆ ಎಂದರು. ಗ್ಯಾರಂಟಿ

ಜಗದೀಶ್‌ ಶೆಟ್ಟರ್‌ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ ಟಿಕೆಟ್ ನೀಡದೇ ಇದ್ದಾಗ ಜಗದೀಶ್ ಶೆಟ್ಟರ್‌ನಮ್ಮ ಪಕ್ಷಕ್ಕೆ ಬರಬಾರದಿತ್ತು. ಬಂದ ಮೇಲೆ ಮರಳಿ ಹೋಗಬಾರದಿತ್ತು. ಶೆಟ್ಟರ್‌ಒಂದು ಸ್ಟ್ಯಾಂಡರ್ಡ್ ಇನ್ನೊಬೇಕಿತ್ತು ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಕಾಂಗ್ರೆಸ್ ಗೆ ಬಂದಿದ್ದು ಆತುರದ ನಿರ್ಧಾರ, ಹೋಗಿದ್ದು ಕೂಡ ಆತುರದ ನಿರ್ಧಾರವಾಗಿದೆ. ಸೋತ ಮೇಲೆಯೂ ಎಂಎಲ್‌ಸಿ ಮಾಡಿದ್ದರು. ಶೆಟ್ಟರ್‌ಹೀಗೆ ಮಾಡಬಾರದಿತ್ತು. ರಾಜಕಾರಣ ಕೆಳಮಟ್ಟದಲ್ಲಿದೆ. ಯಾವ ಪಕ್ಷದಲ್ಲಿ ಕೂಡ ನೈತಿಕತೆ ಮೌಲ್ಯ ಉಳಿದಿಲ್ಲ. ಬಿಜೆಪಿಯಲ್ಲಿ ಇಲ್ಲವೇ ಇಲ್ಲ ಎಂದರು. ಇವತ್ತಿನ ನಮ್ಮ ಸಂಖ್ಯಾ ಬಲದಲ್ಲಿ ನಮ್ಮನ್ನು ಯಾರೂ ಅಲುಗಾಡಿಸಲು ಆಗಲ್ಲ ಎಂದರು.

ಇದನ್ನು ನೋಡಿ : ಕವಿತೆ : ನೊಂದವರ ಧ್ವನಿಯಾಗದ ಮೌನ ಮಹಾಪಾಪ Janashakthi Media

Donate Janashakthi Media

Leave a Reply

Your email address will not be published. Required fields are marked *