ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ಮರುಪಾವತಿ ಮಾಡದ ಕಾರಣಕ್ಕಾಗಿ ವ್ಯಕ್ತಿಗೆ ಕಿರುಕುಳ ನೀಡಿದ್ದು, ಗರ್ಭಿಣಿಯನ್ನು ಮನೆಯಿಂದ ಹೊರಹಾಕಿರುವಂತಹ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೈಕ್ರೋ
ಹುಬಳ್ಳಿ ತಾಲೂಕಿನ ಬ್ಯಾಹಟ್ಟಿಯಲ್ಲಿ, ಎಕ್ನಾಟಿಸ್ ಸ್ಮಾಲ್ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದ ಮಕ್ತುಂಸಾಬ್ ಅವರ ಮನೆಯಿಂದ ಗರ್ಭಿಣಿ ಮಹಿಳೆ ರೇಷ್ಮಾ ಜಮಾದಾರರನ್ನು ಸೇರಿದಂತೆ ಎಲ್ಲರನ್ನು ಸಿಬ್ಬಂದಿ ಹೊರಹಾಕಿದ್ದಾರೆ. 40,000 ರೂಪಾಯಿ ಸಾಲಕ್ಕೆ 1.50 ಲಕ್ಷ ರೂಪಾಯಿ ಬಡ್ತಿ ಸೇರಿ ಕಟ್ಟಬೇಕೆಂದು ಒತ್ತಾಯಿಸಿ ಈ ಕೃತ್ಯ ಎಸಗಿದ್ದಾರೆ. ಊಟ, ಮಾತ್ರೆ ಇಲ್ಲದೆ ಗರ್ಭಿಣಿ ಕುಸಿದು ಬಿದಿದ್ದಾರೆ. ಸದ್ಯ ಸಂಬಂಧಿಕರು ಗರ್ಭಿಣಿಯನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಕ್ಟಾಟಿಸ್ ಸ್ಮಾಲ್ ಫೈನಾನ್ಸ್‌ನಿಂದ ಮಕ್ತುಂಸಾಬ್ ಎನ್ನುವವರು 40 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಅದು ಬಡ್ತಿ ಸೇರಿ ಇದೀಗ 1.50 ಲಕ್ಷ ರೂ. ಕಟ್ಟಬೇಕು ಎಂದು ಫೈನಾನ್ಸ್ ಸಿಬ್ಬಂದಿ ಹೇಳುತ್ತಿದ್ದಾರೆ.
ಇದನ್ನೂ ಓದಿ: ಧಾರವಾಡ | ಢಾಬಾದಲ್ಲಿ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿರುವ ಆರೋಪ
ಇಂದು ಸಾಲ ವಸೂಲಾತಿಗೆ ಬಂದ ಸಿಬ್ಬಂದಿ ಮನೆಯಲ್ಲಿದ್ದವರನ್ನು ಹೊರಹಾಕಿದ್ದಾರೆ. ಈ ವೇಳೆ ಗರ್ಭಿಣಿ ರೇಷ್ಮಾ ಜಮಾದಾರ ಸೇರಿ ಎಲ್ಲರನ್ನೂ ಹೊರಹಾಕಿದ್ದಾರೆ. ರೇಷ್ಮಾ ಜಮಾದಾರ ಅವರ ಮಾತ್ರೆ ಕೂಡ ಕೊಡದೆ ಅಮಾನವೀಯವಾಗಿ ಫೈನಾನ್ಸ್ ಸಿಬ್ಬಂದಿಗಳು ನಡೆದುಕೊಂಡಿದ್ದಾರೆ. ಬೆಳಗ್ಗೆ ಇಂದ ಊಟ, ಮಾತ್ರೆ ಕೊಡದೆ ಗರ್ಭಿಣಿ ಮಹಿಳೆ ರೇಷ್ಮಾ ಜಮಾದಾರಗೆ ಕಿರುಕುಳ ನೀಡಿದ್ದಾರೆ. ಸದ್ಯ ಸಿಬ್ಬಂದಿ ಪೊಲೀಸರೊಂದಿಗೆ ಬಂದು ಮನೆ ಸೀಜ್ ಮಾಡಿದ್ದಾರೆ.
ರಾಜ್ಯಾದ್ಯಂತ ಮೈಕ್ರೋಫೈನಾನ್ಸ್ ಹಾಗೂ ಮಹಿಳಾ ಕಿರುಸಾಲದ ಹೆಸರಲ್ಲಿ ಹುಟ್ಟಿಕೊಂಡಿರುವ ಸಂಘಗಳು ಮಹಿಳೆಯರ ಮಾನ ಹರಾಜಿಗಿಟ್ಟಿವೆ. ಇದಕ್ಕೆ ಸಾಕ್ಷಿ ಎಂಬಂತೆ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಮಹಿಳೆಯರು ಪ್ರತಿಭಟನೆ ಮಾಡಿದ್ದರು. ಹಳ್ಳಿಗಳಲ್ಲಿ ಬಂದು ಹತ್ತು ಜನರ ಗುಂಪು ಕಟ್ಟಿ ಫೈನಾನ್ಸ್ ಸಿಬ್ಬಂದಿ ಅವರೇ ಸ್ವತ ಸಾಲ ನೀಡಿ ಬದುಕು ಕಟ್ಟಿಕೊಳ್ಳಿ ಅಂತ ಒತ್ತಡ ಹೇರಿ ಸಾಲ ನೀಡುತ್ತಾರೆ. ಬಳಿಕ ಸಾಲ ವಸೂಲಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡ್ತಿರುವ ಆರೋಪ ಕೇಳಿ ಬಂದಿತ್ತು.
ಸೂರ್ಯ ಉದಯಿಸುವ ಮೊದಲೇ ಮನೆ ಬಾಗಿಲಿಗೆ ಬಂದು ನಿಲ್ಲುವ ಫೈನಾನ್ಸ್ ಸಿಬ್ಬಂದಿ ಸಾಲ ಕಟ್ಟದಿದ್ದರೆ ಬಾಗಿಲಲ್ಲೇ ನಿಂತು ಅವಾಚ್ಯವಾಗಿ ನಿಂದಿಸಿದ್ದಾರೆಂದು ಮಹಿಳೆಯರು ದೂರಿದ್ದರು. ಅಲ್ಲದೆ ಕೆಲ ಮಹಿಳೆಯರಿಗೆ ಶೌಚಾಲಯಕ್ಕೂ ಬಿಡದೇ ಕಾಟ ಕೊಟ್ಟಿದ್ದರು. ಮಹಿಳೆಯೊಬ್ಬರು ಮೂತ್ರ ವಿಸರ್ಜನೆಗೆ ಹೋದಾಗಲೂ ಹಿಂದೆ ಬಂದು ನಿಲ್ತಾರೆ ಅಂತ ಮಹಿಳೆಯರು ಕಿರುಸಾಲ ಸಂಘದ ವಸೂಲಿದಾರರ ವಿರುದ್ಧ ಆರೋಪ ಮಾಡಿ, ಆಕ್ರೋಶ ಹೊರ ಹಾಕಿದ್ದರು.
ಇದನ್ನೂ ನೋಡಿ : ಮಂಗಳೂರು | ನಗರ ಪೊಲೀಸ್ ಕಮೀಷನರ್ ಹಟಾವೋ ಎಂದ ಯುವಜನ ಕಾರ್ಯಕರ್ತರುJanashakthi Media