ಅಂತಿಮ ಏಕದಿನ ಪಂದ್ಯ: ಭಾರತ ತಂಡಕ್ಕೆ ಜಯ

ಸಿಡ್ನಿ: ಎಸ್ಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡವು ಭಾರತಕ್ಕೆ 237 ರನ್‌ ಗಳ ಗುರಿ ನೀಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 237 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 38.3 ಓವರ್‌ಗಳಲ್ಲಿ ಗೆಲುವು ಖಚಿತಪಡಿಸಿಕೊಂಡಿತು.

ಇದನ್ನೂ ಓದಿ: ನವದೆಹಲಿ | ಎಲ್ಲಾ ಶಾಲೆಗಳಿಗೂ ಏಕರೂಪ ನಿಯಮ : ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ

ಆರಂಭಿಕ ಬ್ಯಾಟರ್​ ರೋಹಿತ್ ಶರ್ಮಾ (121*) ಅದ್ಭುತ ಪ್ರದರ್ಶನ ನೀಡಿ 33ನೇ ಏಕದಿನ ಶತಕ ಸಿಡಿಸಿದರು. ತಮ್ಮ ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿ ಮಿಂಚಿದರು. ನಾಯಕ ಶುಭ್‌ಮನ್ ಗಿಲ್ (24) ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಮತ್ತೊಂದೆಡೆ ಆರಂಭಿಕ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ವಿರಾಟ್ ಕೊಹ್ಲಿ (74*) ಈ ಪಂದ್ಯದಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದರು. ರೋಹಿತ್ ಜೊತೆ ಸೇರಿ 168 ರನ್​ಗಳ ಜೊತೆಯಾಟವಾಡಿದರು. ಇದರೊಂದಿಗೆ, ಕೇವಲ ಒಂದು ವಿಕೆಟ್ ನಷ್ಟದೊಂದಿಗೆ ಭಾರತ ಗುರಿಯನ್ನು ತಲುಪವಲ್ಲಿ ಸಹಾಯಕವಾದರು. ಆಸೀಸ್ ಪರ ಹ್ಯಾಜಲ್‌ವುಡ್ ಮಾತ್ರ ಒಂದು ವಿಕೆಟ್ ಪಡೆದರು.

ಇದನ್ನೂ ನೋಡಿ: ದ್ವೇಷ ಬಿತ್ತುವ ಪಥಸಂಚಲನ ಬೇಡ – ಸಂವಿಧಾನ ದೀವಿಗೆ ಬೆಳಗುವ ಸೌಹಾರ್ದ ನಡಿಗೆ ಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *