ನಾಯಕ – ಕಬ್ಬಲಿಗ ಸಮುದಾಯದ ಜನರ ನಡುವೆ ಜಗಳ; ಎಫ್‌ಐಆರ್ ದಾಖಲು

ಹಾಪುರ: ಜುಲೈ 1 ಮಂಗಳವಾರದಂದು ನಗರದ ಹಳಿಸಗರದ ಸೈದರ ಓಣಿಯಲ್ಲಿ ಅಲಾಯಿ ದೇವರು ಕೂಡಿಸುವ ವಿಚಾರದಲ್ಲಿ ನಾಯಕ ಹಾಗೂ ಕಬ್ಬಲಿಗ ಸಮುದಾಯದ ಕೆಲವು ಜನರು ಸಣ್ಣಪುಟ್ಟ ಜಗಳ ಮಾಡಿಕೊಂಡ ಬಗ್ಗೆ ಜುಲೈ 4 ಶುಕ್ರವಾರದಂದು ರಾಘವೇಂದ್ರ ಎಂಬುವವರು ಸೇರಿದಂತೆ 34 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೊಹರಂ ಹಬ್ಬದ ನಿಮಿತ್ಯ ಅಲಾಯಿ ದೇವರು (ಪೀರಾಗಳು) ಕೂಡಿಸುವ ಸಮಯದಲ್ಲಿ ಎಸ್.ಟಿ ಜನಾಂಗ(ನಾಯಕ) ಹಾಗೂ ಕಬ್ಬಲಿಗ ಜನಾಂಗದ ಕೆಲವರು ಸ್ವಪ್ರತಿಷ್ಠೆಗಾಗಿ ಒಬ್ಬರಿಗೊಬ್ಬರು ಸಣ್ಣಪುಟ್ಟ ಜಗಳ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿರುತ್ತದೆ ಎಂದು ಸರ್ಕಾರದ ಪರವಾಗಿ ಶಹಾಪುರ ಠಾಣೆಯ ಪಿಎಸ್‌ಐ ಡಿ.ವಿ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:  ಗದಗ| ಮುಸುಕುದಾರಿ ಕಳ್ಳರ ಗ್ಯಾಂಗ್ ಹಾವಳಿ: ಬಂಧಿಸುವಂತೆ ಜನರು ಒತ್ತಾಯ

ಶಹಾಪುರ ಠಾಣೆಯಲ್ಲಿ ಕಲಂ 194(2) ಬಿ.ಎನ್ ಎಸ್ -2023 ಅಡಿಯಲ್ಲಿ (ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡುವುದು) ದೂರು ದಾಖಲಾಗಿದೆ.

ಇದನ್ನೂ ನೋಡಿ: ರೈತರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡ್ತೀರಾ.. ಸಿದ್ರಾಮಯ್ಯನವರೇ? ಎಸ್‌ ವರಲಕ್ಷ್ಮೀ ಪ್ರಶ್ನೆ Janashakthi

Donate Janashakthi Media

Leave a Reply

Your email address will not be published. Required fields are marked *