ಸಂಸತ್ತಿನ ಒಳಗೆ ಮತ್ತು ಹೊರಗೆ ಹಿಂದುತ್ವ ನಿರಂಕುಶಾಧಿಕಾರದ ವಿರುದ್ಧ ಹೋರಾಟ – ಸಿಪಿಐ(ಎಂ) ಕರೆ

ಭಾರತದ ಜನತೆ ತಮ್ಮ ಸಂವಿಧಾನದ ರಕ್ಷಣೆ ಮತ್ತು ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಪ್ರತಿಪಾದಿಸುತ್ತಾ, ಹಿಂದಿನ 2014 ಮತ್ತು 2019 ರ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ್ದ ಬಹುಮತ ಸಿಗದಂತೆ ಮಾಡಿದ್ದಾರೆ. ಈ ಚುನಾವಣೆಗಳು ವಿರೋಧ ಪಕ್ಷಗಳ ಮೇಲೆ ವ್ಯಾಪಕ ದಾಳಿಗಳು, ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಹಣಬಲದ ಬೃಹತ್ ಬಳಕೆಯ ನಡುವೆ ನಡೆದವು ಮತ್ತು ಚುನಾವಣಾ ಆಯೋಗ ಸಮಾನ ಅವಕಾಶವಿರುವಂತೆ ಮಾಡಿದ್ದರೆ ಬಿಜೆಪಿ ಮತ್ತು ಎನ್‌ಡಿಎಗೆ ಫಲಿತಾಂಶ ಇನ್ನಷ್ಟು ಪ್ರತಿಕೂಲವಾಗುತ್ತಿತ್ತು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ. ಹಿಂದುತ್ವ

ಬಿಜೆಪಿಗೆ ಸಂಪೂರ್ಣ ಬಹುಮತ ಸಿಗದಿದ್ದರೂ, ಮೋದಿಯವರ ಪ್ರಾಬಲ್ಯವನ್ನು ಮರುಸ್ಥಾಪಿಸುವ ಪ್ರಯತ್ನಗಳು ಬಲಗೊಳ್ಳುತ್ತಲೇ ಇರುತ್ತವೆ, ಇಂಡಿಯಾ  ಮೈತ್ರಿಕೂಟದ ಪಕ್ಷಗಳು ಜಾಗರೂಕರಾಗಿರಬೇಕು. ಫ್ಯಾಸಿಸ್ಟ್ ಮಾದರಿ ವಿಧಾನಗಳನ್ನು ಬಳಸಿಕೊಳ್ಳುವ ಹಿಂದುತ್ವದ ನಿರಂಕುಶಾಧಿಕಾರದ ವಿರುದ್ಧ ಹೋರಾಟವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಪಡಿಸಬೇಕಾಗಿದೆ. ಇದನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಮಾಡಬೇಕು ಎಂದು ಅದು ಹೇಳಿದೆ.

ಇದನ್ನೂ ಓದಿ: ಬಿಜೆಪಿಗೆ ಗ್ರಾಮೀಣ ಮತ್ತು ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಕಡಿಮೆ ಮತಗಳು

ಶಿಕ್ಷಣವನ್ನು ಸಮವರ್ತಿ ಪಟ್ಟಿಯಲ್ಲಿ ಇರಿಸುವ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತಂದ ನೀಟ್ ಪರೀಕ್ಷೆಯ ನಿರ್ವಹಣೆಯಲ್ಲಿ ಬಯಲಿಗೆ ಬಂದ ವಿವಿಧ ಅಕ್ರಮಗಳು ಮತ್ತು ದೂರುಗಳು , ಈ ಪರೀಕ್ಷೆಗಳನ್ನು ನಡೆಸುವಲ್ಲಿ ಎನ್‌ಟಿಎ ಯ ಗಂಭೀರ ಕೊರತೆಗಳನ್ನು ತೋರಿಸಿಕೊಟ್ಟಿದೆ. ಇದನ್ನು ಕುರಿತಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. ಹಿಂದುತ್ವ

ಜೂನ್‍ 9ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸಭೆಯ ನಂತರ ನೀಡಿರುವ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

18ನೇ ಲೋಕಸಭೆಗೆ ಚುನಾವಣೆ

18ನೇ ಲೋಕಸಭೆಗೆ ನಡೆದ ಚುನಾವಣೆಯ ಫಲಿತಾಂಶ ಬಿಜೆಪಿಗೆ ಒಂದು ಗಮನಾರ್ಹ ಹಿನ್ನಡೆಯಾಗಿದೆ. ಭಾರತದ ಜನತೆ ತಮ್ಮ ಸಂವಿಧಾನದ ರಕ್ಷಣೆ ಮತ್ತು ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಪ್ರತಿಪಾದಿಸುತ್ತಾ, ಹಿಂದಿನ 2014 ಮತ್ತು 2019 ರ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ್ದ ಬಹುಮತ ಸಿಗದಂತೆ ಮಾಡಿದ್ದಾರೆ. 400 ಕಿಂತಲೂ ಹೆಚ್ಚಿನ ಅಂಕೆಯನ್ನು ತಲುಪುತ್ತೇವೆ ಎಂದು ಪ್ರಚಾರ ಮಾಡಿದ್ದ  ಬಿಜೆಪಿಯ ಸಂಖ್ಯೆ ಈಗ 240 ಸ್ಥಾನಗಳಾಗಿದ್ದು, 17ನೇ ಲೋಕಸಭೆಯಲ್ಲಿ ಅದು ಹೊಂದಿದ್ದ 303 ಸ್ಥಾನಗಳಿಗಿಂತ 63 ಕಡಿಮೆಯಾಗಿದೆ. ಇದು 20ಶೇ.ಕ್ಕಿಂತಲೂ ಹೆಚ್ಚಿನ  ಕಡಿತವಾಗಿದೆ. ಬಿಜೆಪಿಗೆ ಈಗ ಸ್ವಂತ ಬಹುಮತಕ್ಕೆ 32 ಸ್ಥಾನಗಳ ಕೊರತೆಯಿದೆ. ಆದಾಗ್ಯೂ, ಅದರ ಮಿತ್ರಪಕ್ಷಗಳು ಇನ್ನೂ 52 ಸ್ಥಾನಗಳನ್ನು ಗೆಲ್ಲುವುದರೊಂದಿಗೆ, ಎನ್‍ಡಿಎ 292 ಸ್ಥಾನಗಳನ್ನು ಹೊಂದಿದೆ, ಇದು ಅಗತ್ಯವಿರುವ ಬಹುಮತಕ್ಕಿಂತ 20 ಹೆಚ್ಚು. ಹಿಂದುತ್ವ

ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ 234 ಸ್ಥಾನಗಳನ್ನು ಗೆದ್ದಿವೆ, ಬಹುಮತಕ್ಕೆ 38 ಸ್ಥಾನಗಳ ಕೊರತೆಯಿದೆ. ಎನ್‌ಡಿಎಯ ಎಲ್ಲಾ ಕ್ಷೇತ್ರಗಳು ಒಟ್ಟಾಗಿ 43.31 ಶೇಕಡಾ ಮತಗಳನ್ನು ಪಡೆದಿವೆ ಎಂದು ಚುನಾವಣಾ ಆಯೋಗದ ಮಾಹಿತಿ ತೋರಿಸುತ್ತದೆ. ಇಂಡಿಯಾ ಮೈತ್ರಿಕೂಟದ ಘಟಕಗಳು ಶೇಕಡಾ 41.69 ರಷ್ಟು ಪಡೆದಿವೆ. ಎರಡು ಸಂಯೋಜನೆಗಳ ನಡುವಿನ ಮತ ಹಂಚಿಕೆಯ ವ್ಯತ್ಯಾಸ ಶೇ. 2 ಕ್ಕಿಂತ ಕಡಿಮೆಯಿದೆ.

ಈ ಚುನಾವಣೆಗಳು ವಿರೋಧ ಪಕ್ಷಗಳ ಮೇಲೆ ವ್ಯಾಪಕ ದಾಳಿಗಳು, ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಹಣಬಲದ ಬೃಹತ್ ಬಳಕೆಯ ನಡುವೆ ನಡೆದವು. ಚುನಾವಣೆಗಳು ಆರಂಭವಾಗುವ ಮೊದಲು ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಲಾಯಿತು ಮತ್ತು ಕಾಂಗ್ರೆಸ್ ಮತ್ತು ಸಿಪಿಐ(ಎಂ) (ಕೇರಳದ ಒಂದು ಜಿಲ್ಲೆಯಲ್ಲಿ) ನಂತಹ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು. ಎನ್‌ಸಿಪಿ ಮತ್ತು ಶಿವಸೇನೆಯಂತಹ ವಿರೋಧ ಪಕ್ಷಗಳನ್ನು ಹಣಬಲದ ಬಳಕೆ ಮತ್ತು ಕೇಂದ್ರ ಏಜೆನ್ಸಿಗಳ ಬೆದರಿಕೆಗಳಿಗೆ ಗುರಿಯಾಗಿಸಿ ವಿಭಜನೆಗೊಳೀಸಲಾಯಿತು. ಪ್ರತಿಪಕ್ಷಗಳನ್ನು ವಿಭಜಿಸಲು ಬಿಜೆಪಿ ಎಲ್ಲಾ ರೀತಿಯ ರಾಜಕೀಯ ತಂತ್ರಗಳನ್ನು ಆಶ್ರಯಿಸಿದೆ ಮತ್ತು ಜೆಡಿ(ಯು) ಅನ್ನು ಮತ್ತೆ ಎನ್‌ಡಿಎ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಚುನಾವಣಾ ಆಯೋಗ ಸಮಾನ ಅವಕಾಶವಿರುವಂತೆ ಮಾಡಿದ್ದರೆ ಬಿಜೆಪಿ ಮತ್ತು ಎನ್‌ಡಿಎಗೆ ಫಲಿತಾಂಶ ಇನ್ನಷ್ಟು ಪ್ರತಿಕೂಲವಾಗುತ್ತಿತ್ತು. ಬಿಜೆಪಿಯ ಕಾರ್ಯಸೂಚಿಯನ್ನು ಮುಂದೊತ್ತುವಲ್ಲಿ ಚುನಾವಣಾ ಆಯೋಗವೂ ಶಾಮೀಲಾಯಿತು. ಮೋದಿ ಮತ್ತು ಹಲವು ಬಿಜೆಪಿ ನಾಯಕರ ಪ್ರಚೋದನಕಾರಿ ಕೋಮುವಾದಿ ಅಬ್ಬರಗಳನ್ನು  ನಿಗ್ರಹಿಸುವಲ್ಲಿ ಅದರ ಹೀನಾಯ ವಿಫಲತೆ, ಮಾದರಿ ನೀತಿ ಸಂಹಿತೆಯನ್ನು ನಿರುಪಯುಕ್ತಗೊಳಿಸಿದೆ. ಮತದಾನದ ದತ್ತಾಂಶವನ್ನು ಬಹಿರಂಗಪಡಿಸಲು ಅದರ ಆರಂಭಿಕ ಹಿಂಜರಿಕೆಯು ಕೈಚಳಕ ನಡೆಸಲಾಗಿದೆ ಎಂಬ ಅನುಮಾನಗಳನ್ನು ಹುಟ್ಟುಹಾಕಿತು, ಇದು ಈ ಸಾಂವಿಧಾನಿಕ ಸಂಸ್ಥೆಯ ಪ್ರತಿಷ್ಠೆಯನ್ನು ತೀವ್ರವಾಗಿ ದುರ್ಬಲಗೊಳಿಸಿದೆ.

ತನ್ನ ದೃಷ್ಟಿಕೋನವನ್ನು ಮಾತ್ರ ಪ್ರಚಾರ ಮಾಡುವಂತೆ  ದೊಡ್ಡ ವಿಭಾಗಗಳ ಮೇಲೆ ಬಿಜೆಪಿ ಸಂಪೂರ್ಣ ಹಿಡಿತ ಸಾಧಿಸಿದೆ. ಇದು ಅತ್ಯಂತ ಉತ್ಪ್ರೇಕ್ಷಿತ ಎಕ್ಸಿಟ್ ಪೋಲ್‌ಗಳಲ್ಲಿ ಪ್ರತಿಫಲಿಸಿದೆ. ಶಾಮೀಲಾಗಿರುವ ಕಾರ್ಪೊರೇಟ್ ಮಾಧ್ಯಮದೊಂದಿಗೆ, ಬಿಜೆಪಿ ತನ್ನ ಕಥನ ಮತ್ತು ತಪ್ಪು ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಹರಡಲು ಅಪಾರ ಪ್ರಮಾಣದ ಸಂಪನ್ಮೂಲಗಳನ್ನು ಖರ್ಚು ಮಾಡಿತು. ಅದು ತನ್ನ ಬೃಹತ್ ಹಣಬಲವನ್ನು ಬಳಸಿಕೊಂಡು ಮತದಾನದ ಸ್ವರೂಪಗಳ ಮೇಲೆ ಪ್ರಭಾವ ಬೀರಿತು ಮತ್ತು ಅನೇಕ ಸ್ಥಳಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಮತದಾರರಿಗೆ ಹಂಚಿತು.

ಇಂಡಿಯಾ  ಮೈತ್ರಿಕೂಟದ ಪಕ್ಷಗಳು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳಿಗೆ ಬೆದರಿಕೆಗಳನ್ನು ಎತ್ತಿ ತೋರಿಸುವುದಲ್ಲದೆ ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ ಇತ್ಯಾದಿಗಳಂತಹ ಜನರ ಜೀವನೋಪಾಯದ ಪ್ರಶ್ನೆಗಳ ಮೇಲೆ ಗಮನ ಸೆಳೆದವು. ನಮ್ಮ ಎಲ್ಲಾ ವರ್ಗಗಳ ಜನರು ತಮ್ಮ ಜೀವನೋಪಾಯದ ಸಮಸ್ಯೆಗಳ ಮೇಲೆ ನಡೆಸಿದ ಬೃಹತ್ ಹೋರಾಟಗಳು, ವಿಶೇಷವಾಗಿ ರೈತ ಹೋರಾಟಗಳು ಫಲಿತಾಂಶಗಳಿಗೆ ಗಣನೀಯ ಕೊಡುಗೆ ನೀಡಿವೆ. ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶ ಈ ಐದು ರಾಜ್ಯಗಳ ಕೃಷಿ ವಲಯಗಳಲ್ಲಿ ಬಿಜೆಪಿ ತನ್ನ ಹಾಲಿ 38 ಸ್ಥಾನಗಳನ್ನು ಕಳೆದುಕೊಂಡಿದೆ. ಗ್ರಾಮೀಣ ಭಾರತವು ಮೋದಿ ದಶಕದುದ್ದಕ್ಕೂ ಗ್ರಾಮೀಣ ನೈಜ ವೇತನಗಳು ಸ್ಥಗಿತಗೊಂಡಿರುವುದರಲ್ಲಿ ಕಂಡು ಬಂದಂತೆ ಮೋದಿ ಸರ್ಕಾರ ತಮ್ಮ ಜೀವನೋಪಾಯವನ್ನು ನಾಶಪಡಿಸುವುದರ ವಿರುದ್ಧ ಪ್ರತಿಕ್ರಿಯಿಸಿತು,.159 ಗ್ರಾಮೀಣ ಕ್ಷೇತ್ರಗಳಲ್ಲಿ ಜನರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಸ್ವಂತ ಬಲದಿಂದ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗದಿದ್ದರೂ, ಮೋದಿಯವರ ಪ್ರಾಬಲ್ಯವನ್ನು ಮರುಸ್ಥಾಪಿಸುವ ಪ್ರಯತ್ನಗಳು ಬಲಗೊಳ್ಳುತ್ತಲೇ ಇರುತ್ತವೆ. ಹಿಂದುತ್ವದ ಸರ್ವಾಧಿಕಾರಿ ಧೋರಣೆಗಳು ಮತ್ತು ಹಿಂದುತ್ವ-ಕಾರ್ಪೊರೇಟ್ ನಂಟು ಬಲಪಡಿಸಲು ಮತ್ತು ಜಾತ್ಯತೀತ ಪ್ರಜಾಪ್ರಭುತ್ವ, ಜನರ ಜೀವನೋಪಾಯ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟತತ್ವವನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳನ್ನು ದೃಢವಾಗಿ ವಿರೋಧಿಸಲು ಮತ್ತು ಸೋಲಿಸಲು ಇಂಡಿಯಾ  ಮೈತ್ರಿಕೂಟದ ಪಕ್ಷಗಳು ಜಾಗರೂಕರಾಗಿರಬೇಕು. ಫ್ಯಾಸಿಸ್ಟ್ ಮಾದರಿ ವಿಧಾನಗಳನ್ನು ಬಳಸಿಕೊಳ್ಳುವ ಹಿಂದುತ್ವದ ನಿರಂಕುಶಾಧಿಕಾರದ ವಿರುದ್ಧ ಹೋರಾಟವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಪಡಿಸಬೇಕಾಗಿದೆ. ಇದನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಮಾಡಬೇಕು.

ಎಡ ಶಕ್ತಿಗಳ ಬಲ

ಎಡಪಕ್ಷಗಳು 8 ಸಂಸದರೊಂದಿಗೆ ಲೋಕಸಭೆಯಲ್ಲಿ ತಮ್ಮ ಅಸ್ತಿತ್ವವನ್ನು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿವೆ [ಸಿಪಿಐ(ಎಂ) 4, ಸಿಪಿಐ 2, ಸಿಪಿಐ (ಎಂಎಲ್) 2].

ವಿಶೇಷವಾಗಿ ಕೇರಳದಲ್ಲಿ ಸಿಪಿಐ(ಎಂ) ಫಲಿತಾಂಶದ ಬಗ್ಗೆ ಪೊಲಿಟ್ ಬ್ಯೂರೋ ನಿರಾಶೆ ವ್ಯಕ್ತಪಡಿಸಿದೆ. ಪಕ್ಷದ ಘಟಕಗಳು ಆಯಾ ರಾಜ್ಯ ನಡೆಸಿದ ವಿಮರ್ಶೆಗಳ ಆಧಾರದ ಮೇಲೆ ಪಕ್ಷವು ಆಳವಾದ ಆತ್ಮಾವಲೋಕನವನ್ನು ಕೈಗೊಳ್ಳುತ್ತದೆ.

ನೀಟ್(NEET)ಪರೀಕ್ಷೆ

ನೀಟ್ ಪರೀಕ್ಷೆಯ ನಿರ್ವಹಣೆಯಲ್ಲಿ ವಿವಿಧ ಅಕ್ರಮಗಳು ಮತ್ತು ದೂರುಗಳು ಹೊರಬಿದ್ದಿವೆ. ಈ ಪರೀಕ್ಷೆಗಳನ್ನು ನಡೆಸುವಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್‌ಟಿಎ)ಯ ಗಂಭೀರ ಕೊರತೆಗಳನ್ನು ಇದು ತೋರಿಸಿಕೊಟ್ಟಿದೆ. ಶಿಕ್ಷಣದ ಇಂತಹ ಕೇಂದ್ರೀಕರಣವು ಶಿಕ್ಷಣವನ್ನು ಸಮವರ್ತಿ ಪಟ್ಟಿಯಲ್ಲಿ ಇರಿಸುವ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ರಾಜ್ಯ ಸರ್ಕಾರಗಳನ್ನು ಸಂಪೂರ್ಣವಾಗಿ ಬದಿಗೊತ್ತುವುದನ್ನು ಒಪ್ಪಲು ಸಾಧ್ಯವಿಲ್ಲ.

ಇತ್ತೀಚಿನ ನೀಟ್ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ.

ಇದನ್ನೂ ನೋಡಿ: ‘ಮೋದಿಸರ್ಕಾರ’ ಬೇಡ, ಎನ್‌ಡಿಎ ಸರ್ಕಾರ ಬೇಕಾದರೆ ಇರಲಿ- ಭಾರತದ ಮತದಾರರ ತೀರ್ಪು Janashakthi Media

Donate Janashakthi Media

Leave a Reply

Your email address will not be published. Required fields are marked *