ವಿಶ್ವದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫುಟ್ಬಾಲ್ ಆಟದ ವಿಶ್ವಕಪ್ ಪಂದ್ಯಾವಳಿ ʻಫಿಫಾ ವಿಶ್ವಕಪ್ 2022ರʼ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಫುಟ್ಬಾಲ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಕತಾರ್ ನಲ್ಲಿ ನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ನಡೆಯಲಿದೆ. ಇದು ಮೊದಲ ಬಾರಿಗೆ ಮಧ್ಯಪ್ರಾಚ್ಯದ ದೇಶವು ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಪಂದ್ಯವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ನಗರದ ತುಂಬೆಲ್ಲಾ ಬೀದಿಬೀದಿಗಳಲ್ಲಿ ಅಲಂಕರಿಸಲಾಗಿದೆ.
ದೋಹಾ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುವ 32 ತಂಡಗಳ ಪಂದ್ಯಾವಳಿ ನಡೆಯಲಿದೆ. ನವೆಂಬರ್ 20ರ ಭಾನುವಾರ ದಂದು ಪಂದ್ಯದಲ್ಲಿ ಆತಿಥೇಯರು ದಕ್ಷಿಣ ಅಮೆರಿಕಾದ ಈಕ್ವೆಡಾರ್ ಅನ್ನು ಅಲ್ ಬೇಟ್ ಸ್ಟೇಡಿಯಂನಲ್ಲಿ ಎದುರಿಸುತ್ತಾರೆ. 60,000 ಮಂದಿ ವೀಕ್ಷಣೆ ಮಾಡಬಹುದಾದ ಅಲ್ ಬೇಟ್ ಕ್ರೀಡಾಂಗಣವು ವಿಶಿಷ್ಟವಾದ ‘ಟೆಂಟ್’ ಶೈಲಿ”ಗೆ ಹೆಸರಾಗಿದೆ.
ಆತಿಥೇಯ ಕತಾರ್ ಈಕ್ವೆಡಾರ್, ಆಫ್ರಿಕನ್ ಚಾಂಪಿಯನ್ ಸೆನೆಗಲ್ ಮತ್ತು ನೆದರ್ಲ್ಯಾಂಡ್ಸ್ ಜೊತೆಗೆ ಎ ಗುಂಪಿನಲ್ಲಿ ಡ್ರಾ ಸಾಧಿಸಿದೆ. ಒಟ್ಟು ಎಂಟು ಗುಂಪುಗಳನ್ನು ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿರುತ್ತವೆ. ಪಂದ್ಯಾವಳಿಯು ಐದು ಪ್ರಮುಖ ನಗರದಲ್ಲಿರುವ ಎಂಟು ಸ್ಥಳಗಳಲ್ಲಿ ಆಡಲಾಗುತ್ತದೆ.
ಅಂತಿಮ ಫೈನಲ್ ಪಂದ್ಯ ಡಿಸೆಂಬರ್ 18 ರಂದು ಲುಸೇಲ್ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ಫೈನಲ್ ಪಂದ್ಯವು 80,000 ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ ಬೇಟ್‌ನಂತೆಯೇ ಅದ್ಭುತ ಮನರಂಜನೆ ನೀಡುವ ಕ್ರೀಡಾಂಗಣವಾಗಿದೆ.
ಫಿಫಾ ವಿಶ್ವಕಪ್ 2022ರ ಅಭಿಮಾನಿಗಳಿಗೆ ವೀಕ್ಷಣೆಯನ್ನು ಅತ್ಯಂತ ಯಶಸ್ವಿ ಮಟ್ಟದಲ್ಲಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನೀಡಿದ ಹೇಳಿಕೆಯ ಪ್ರಕಾರ, ಬಹು-ಪ್ರವೇಶ ಕೀಡಾ ಪ್ರವಾಸಿ ಪರವಾನಗಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಸಿಟಿಜನ್ ಶಿಪ್, ಕಸ್ಟಮ್ಸ್ ಮತ್ತು ಪೋರ್ಟ್ಸ್ ಸೆಕ್ಯುರಿಟಿ (ಐಸಿಪಿ) ಅದರಂತೆಯೇ ಯುಎಇ ‘ಹಯ್ಯ’ ಕಾರ್ಡ್‌ನೊಂದಿಗೆ ಪ್ರಯಾಣಿಕರನ್ನು ಸ್ವಾಗತಿಸುತ್ತಿದೆ.
ಯುಎಇಯ ‘ಹಯ್ಯ’ ಕಾರ್ಡ್ ಹೊಂದಿರುವವರಿಗೆ ಬಹು ಪ್ರವೇಶ ಪ್ರವಾಸಿ ವೀಸಾಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಫಿಫಾ ವಿಶ್ವಕಪ್ ವೀಕ್ಷಣೆಗೆ ತೆರಳಲು ಬಯಸುವವರು ವೀಸಾಕ್ಕಾಗೊ $27 ಶುಲ್ಕ ಪಾವತಿಸಿ, 90 ದಿನಗಳ ಅವಧಿಯಲ್ಲಿ ಅನೇಕ ಬಾರಿ ಪಕ್ಕದ ಯುಎಇಗೆ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರಸ್ತುತ ಶಾಸನದ ಪ್ರಕಾರ, ವೀಸಾ-ವಿನಾಯಿತಿ ರಾಷ್ಟ್ರಗಳ ಸಂದರ್ಶಕರು ಯುಎಇಗೆ ಪ್ರಯಾಣಿಸಬಹುದು ಮತ್ತು ಯುಎಇನಲ್ಲಿ ಉಳಿಯಬಹುದು. ವೀಸಾ ನೀಡಿದ ದಿನಾಂಕದಿಂದ 90 ದಿನಗಳ ಕಾಲ ವೀಸಾ ಮಿತಿ ಪ್ರಾರಂಭವಾಗುತ್ತದೆ.
ಫೈನಲ್ ನಲ್ಲಿ ಭಾರತ ಪ್ರತಿನಿಧಿಸಿ ನಟ ರಣವೀರ್ ಸಿಂಗ್ ಮುಖ್ಯ ಅತಿಥಿ
ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾದ ರಣವೀರ್ ಸಿಂಗ್ ಅವರು ಡಿಸೆಂಬರ್ 18ರಂದು ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾಗವಹಿಸಲು ಮತ್ತು ಭಾರತವನ್ನು ಪ್ರತಿನಿಧಿಸಲು ಆಹ್ವಾನಿತರಾಗಿದ್ದಾರೆ. ಇಲ್ಲಿ ಅವರು ವಿಶ್ವಕಪ್ ಫುಟ್‌ಬಾಲ್‌ನ ಎರಡು ಅತ್ಯುತ್ತಮ ರಾಷ್ಟ್ರಗಳು ಸೆಣಸಾಡಿ ಒಂದು ರಾಷ್ಟ್ರ ವಿಶ್ವಕಪ್ ಅನ್ನು ಗೆಲ್ಲುವುದನ್ನು ವೀಕ್ಷಿಸಲು ಸಾಕ್ಷಿಯಾಗಲಿದ್ದಾರೆ.
ರಷ್ಯಾ ಪ್ರತಿನಿಧಿಸಿದ 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.