ಕಲಬುರ್ಗಿ: ಕೆಪಿಎಸ್‌ಸಿ ಗ್ರೂಪ್ ಸಿ ಹುದ್ದೆ ನೇಮಕಾತಿ ಪರೀಕ್ಷೆ ((KPSC Exam) ) ವೇಳೆ ಜಿಲ್ಲಾಡಳಿತ ಎಡವಟ್ಟು ಮಾಡಿಕೊಂಡಿದೆ. ಪರೀಕ್ಷಾ ಅಕ್ರಮ ತಡೆಯಲು ಬಿಗಿ ತಪಾಸಣೆ ಮಾಡುವ ವೇಳೆ ಮಹಿಳೆಯರ ತಾಳಿ, ಕಾಲುಂಗುರ ತೆಗೆಸಿದ್ದಾರೆ. ಇದರಿಂದ ಸಿಬ್ಬಂದಿ ವಿರುದ್ಧ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ. ಅಭ್ಯರ್ಥಿಗಳ
ರಾಯಚೂರು ಮೂಲದ ಇಬ್ಬರು ಮಹಿಳೆಯರ ಕತ್ತಲ್ಲಿದ್ದ ತಾಳಿಯನ್ನು ಪರೀಕ್ಷಾ ಸಿಬ್ಬಂದಿ ತೆಗೆಸಿದ್ದಾರೆ. ಕಲಬುರ್ಗಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಭಾನುವಾರ ಘಟನೆ ನಡೆಯಿತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಒಳಬಿಡಲಾಗುತ್ತಿತ್ತು. ಈ ವೇಳೆ ಇಬ್ಬರು ಮಹಿಳೆಯರ ಕತ್ತಲ್ಲಿದ್ದ ತಾಳಿ, ಕಾಲುಂಗುರಗಳನ್ನು ತೆಗೆಸಲಾಗಿದೆ.
ಇದನ್ನೂ ಓದಿ:ಪರೀಕ್ಷೆ ಫಲಿತಾಂಶದಲ್ಲಿ ವಿಳಂಬ, ಕೆಪಿಎಸ್‌ಸಿ ಗೇಟ್ ಮುಂದೆ ಪ್ರತಿಭಟನೆ- ಎಸ್ ಸುರೇಶ್ ಕುಮಾರ್
ಒಬ್ಬ ಮಹಿಳೆ ತಾಳಿ ತೆಗೆಯಲು ಹಿಂದೇಟು ಹಾಕಿದರು. ಆದರೆ, ಎಕ್ಸಾಮ್ ಸೆಂಟರ್‌ನೊಳಗೆ ಹೋಗಲು ಸಿಬ್ಬಂದಿ ಬಿಡಲಿಲ್ಲ. ಹೀಗಾಗಿ ಸಾಕಷ್ಟು ವಾಗ್ವಾದದ ಬಳಿಕ ಅನಿವಾರ್ಯವಾಗಿ ಕತ್ತಲ್ಲಿದ್ದ ತಾಳಿ ತೆಗೆದ ಮಹಿಳೆ, ಗೇಟ್ ಹೊರಗಿದ್ದ ಸಂಬಂಧಿಕರ ಕೈಗೆ ಕೊಟ್ಟು, ಅಳುತ್ತಲೇ ಪರೀಕ್ಷೆ ಬರೆಯಲು ಹೋದರು.
ಮತ್ತೊಬ್ಬ ಯುವತಿಗೆ ಬಂಗಾರದ ಕಿವಿಯೋಲೆ ತೆಗೆಯಲು ಅಗದಿದ್ದಾಗ ಕಟ್ ಮಾಡುವಂತೆ ಸಿಬ್ಬಂದಿ ಹೇಳಿದ್ದಾರೆ. ಬಳಿಕ ಬಳಿಕ ಅಕ್ಕಸಾಲಿಗರ ಬಳಿ ಹೋಗಿ ಓಲೆ ತೆಗೆಸಿ ಯುವತಿ ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದಾಳೆ.
ತಾಳಿ, ಕಾಲುಂಗುರ ತೆಗೆದರೆ ಮಾತ್ರ ಪರೀಕ್ಷೆಗೆ ಅವಕಾಶ ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಕೆಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರೀಕ್ಷಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ತಾಳಿ, ಕಾಲುಂಗುರ ತೆಗೆದು ಪರೀಕ್ಷೆ ಬರೆಯೋದು ಯಾವ ಕಾನೂನಿನಲ್ಲಿದೆ. ನಮ್ಮ ಹಿಂದು ಸಂಪ್ರದಾಯದಲ್ಲಿ ತಾಳಿ, ಕಾಲುಂಗುರಕ್ಕೆ ಮಹತ್ವ ಇದೆ. ಯಾವ ಪರೀಕ್ಷೆಯಲ್ಲೂ ಹೀಗೆ ಕಾನೂನು, ಸೂಚನೆ ಇಲ್ಲ. ತಾಳಿ, ಕಾಲುಂಗುರ ತೆಗೆಯೋದು ಅಂದ್ರೆ ಏನು ಅರ್ಥ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ವೇಳೆ ಕೆಲವರು ಬ್ಲೂಟೂತ್ ಬಳಸಿದ್ದರಿಂದ ಕಲಬುರಗಿ, ಯಾದಗಿರಿಯಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿತ್ತು. ಹೀಗಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬಿಗಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂಬುದಾಗಿ ತಿಳಿದು ಬಂದಿದೆ.