ಮದ್ಯಪಾನ ಮಾಡದಂತೆ ಬುದ್ದಿ ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ, ನಾಲ್ವರ ಬಂಧನ

ರಾಯಚೂರು: ಮದ್ಯಪಾನ ಮಾಡಬೇಡ ಅಂತ ಬುದ್ದಿ ಹೇಳಿದ್ದಕ್ಕೆ ಹಾಡಹಗಲೇ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ರಾಯಚೂರು ನಗರದ ಮಾವಿನ ಕೆರೆ ರಸ್ತೆಯ ತರಕಾರಿ ಮಾರುಕಟ್ಟೆ ಬಳಿ ನಡೆದಿದೆ.

ತರಕಾರಿ ವ್ಯಾಪಾರಿಗಳು ಹಾಗೂ ಕೆಲಸಗಾರರ ನಡುವೆ ಹೊಡೆದಾಟವಾಗಿದೆ.

ಇದನ್ನೂ ಓದಿ:ಗಂಡ ಸತ್ತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; 1 ತಿಂಗಳ ಕಾಲ ಕೇಸು ದಾಖಲಿಸದೆ ವಿಳಂಬ

ತರಕಾರಿ ವ್ಯಾಪಾರಿಗಳಾದ ಅಬ್ದುಲ್ ಮಜರ್ ,ಅಬ್ದುಲ್ ಅಜರ್ ಎಂಬುವವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ತರಕಾರಿ ವ್ಯಾಪಾರ ಹಾಗೂ ಇತರ ಕೆಲಸ ಮಾಡುತ್ತಿದ್ದ ಸಲೀಂ, ಶೇಖ್, ರಾಜಾ ,ಬಾಬು ಎಂಬುವವರಿಂದ ಹಲ್ಲೆ ನಡೆದಿದೆ. ಅಬ್ದುಲ್ ಮಜರ್ ಸಲೀಂ ಎಂಬುವವನಿಗೆ ಮದ್ಯಪಾನ ಮಾಡಬೇಡ ಅಂತ ಬುದ್ದಿವಾದ ಹೇಳಿದ್ದ ಇದಕ್ಕೆ ಆಕ್ರೋಶಗೊಂಡು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಲಾಗಿದೆ ಅಂತ ಆರೋಪಿಸಲಾಗಿದೆ.

ಚಾಕು ಇರಿತದ ಜೊತೆಗೆ ಕಲ್ಲು, ಇಟ್ಟಿಗೆಗಳಿಂದ ತಲೆಗೆ ಹೊಡೆದು ಹಲ್ಲೆಮಾಡಲಾಗಿದರೆ. ಹಲ್ಲೆಗೊಳಗಾದ ಇಬ್ಬರನ್ನ ರಾಯಚೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದರಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌.

ಇದನ್ನೂ ಓದಿ:ಮಂಗಳೂರು| ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಅಂಗನವಾಡಿ ಮಕ್ಕಳು

Donate Janashakthi Media

Leave a Reply

Your email address will not be published. Required fields are marked *