ಕೋಲಾರ: ಸವರ್ಣೀಯ ಮಹಿಳೆಯೊಬ್ಬರು ಪೊರಕೆಯಿಂದ ಹಲ್ಲೆ ನಡೆಸಿದರೆಂಬ ಕಾರಣಕ್ಕೆ ಮನನೊಂದ ದಲಿತ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಸಿದ್ದ ಘಟನೆ ಮಾಸುವ ಮುನ್ನವೆ ಮಾಲೂರಿನಲ್ಲಿ ಮತ್ತೊಂದು ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದೆ.
ಮಾಲೂರಿನ ಅಗ್ರಹಾರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಟಪ್ಪ (ಮದು ಕುಮಾರ್) ಹಲ್ಲೆಗೊಳಗಾದವ್ಯಕ್ತಿ. ದಲಿತ ಸಮುದಾಯಕ್ಕೆ ಸೇರಿದ ಮಾಟಪ್ಪನನ್ನು ಜಾತಿ ಹೆಸರಲ್ಲಿ ನಿಂದಿಸಿ ದೌರ್ಜನ್ಯ ನಡೆಸಿದ್ದಾರೆ. ದಲಿತ ಮಹಿಳೆಯರು ಸ್ತ್ರೀ ಶಕ್ತಿ ಸಂಘ ನಡೆಸುತ್ತಿರುವಾಗ, ಗೌಡ ಸಮುದಾಯಕ್ಕೆ ಸೇರಿದ ಹಲವು ವ್ಯಕ್ತಿಗಳು ದಲಿತ ಮಹಿಳೆಯರನ್ನು ನಿಂದಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಮನಸ್ಸೊ ಇಚ್ಚೆ ಬೈದಿದ್ದಲ್ಲದೆ, ಇದನ್ನು ಪ್ರಶ್ನಿಸಿದ ಮಾಟಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವಕೀಲೆ ವೀಣಾ ಮತ್ತು ರಾಧಾ ತಿಳಿಸಿದ್ದಾರೆ.
ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 03
ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಚೌಡಪ್ಪ ಎಂದು ಗುರುತಿಸಲಾಗಿದೆ. ಚೌಡಪ್ಪ ಮತ್ತು ಕುಟುಂಬದವರು ಹಾಗೂ ಅಲ್ಲಿನ ಸ್ಥಳೀಯರು ಸೇರಿಕೊಂಡು ದಾಳಿ ಮಾಡಿ ದೊಣ್ಣೆಗಳಿಂದ ರಕ್ತ ಬರುವ ಹಾಗೆ ಮನಬಂದತೆ ಹೊಡೆದಿದ್ದಾರೆ. ಎಡಬಾಗದ ಎದೆಗೆ ಜೋರಾಗಿ ಗುದ್ದಿರುವ ಕಾರಣ ಅವರಿಗೆ ಎದೆ ನೋವು ಆರಂಭವಾಗಿದೆ ಎಂದು ವೀಣಾ ತಿಳಿಸಿದ್ದಾರೆ. ಮಾಟಪ್ಪನ್ನು ಕೋಲಾರದ SNR ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ನೀಡಲಾಗಿದೆ. ದೂರು ದಾಖಲಿಸುತ್ತೇವೆ ಎಂದು ವೀಣಾ ಜನಶಕ್ತಿ ಮೀಡಿಯಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಇದನ್ನೂ ಓದಿ:ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ದಲಿತ ವ್ಯಕ್ತಿಯ ಮೇಲೆ ಹಲ್ಲೆ
ಕೋಲಾರ ಜಿಲ್ಲೆಯ ದಲಿತ ಬಾಲಕನೊಬ್ಬ ಸೆ.29ರಂದು ಗ್ರಾಮ ದೇವತೆ ಹಬ್ಬದ ವೇಳೆ ದೇವರ ಗುಜ್ಜುಗೋಲು ಮುಟ್ಟಿದನೆಂದು ಆರೋಪಿಸಿ ಜಾತಿ ದೌರ್ಜನ್ಯ ನಡೆಸಲಾಗಿತ್ತು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಕ್ಕೆ ಅರವತ್ತು ಸಾವಿರ ರೂ. ದಂಡ ವಿಧಿಸಲಾಗಿತ್ತು. ಇಲ್ಲವಾದರೆ ಊರು ತೊರೆಯುವಂತೆ ದಲಿತ ಕುಟುಂಬಕ್ಕೆ ಬೆದರಿಕೆ ಹಾಕಲಾಗಿತ್ತು. ಮತ್ತೊಂದು ಘಟನೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 2ರಂದು ನಡೆದಿತ್ತು. 14 ವರ್ಷದ ದಲಿತ ಬಾಲಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ್ದರು. ಕೋಲಾರ ಜಿಲ್ಲೆಯಲ್ಲಿ ಪ್ರತಿನಿತ್ಯ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸರ್ಕಾರ ಹಾಗೂ ಜಿಲ್ಲಾಡಳಿತ ಸೂಕ್ತ ರಕ್ಷಣೆಯನ್ನು ನೀಡಬೇಕಿದೆ.
ವಿಡಿಯೋ ನೋಡಿ:ಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್. ವಿಮಲಾ ಜೊತೆ ಮಾತುಕತೆ #womensreservationbill