ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ – ಜಾಗೃತಿ ಮೂಡಿಸಲು ಸರಕಾರಕ್ಕೆ ರೈತರಿಂದ ಮನವಿ

ಹುಬ್ಬಳ್ಳಿ : ನಮ್ಗೆ ಯಾರೂ ಹೆಣ್ಣು ಕೊಡ್ತಿಲ್ಲ ಸ್ವಾಮಿ ಎಂದು, ಕುಂದಗೋಳ ತಾಲೂಕಿನ ಮನನೊಂದ ಯುವರೈತರು ನೇರವಾಗಿ ತಹಶೀಲ್ದಾರರ ಕಚೇರಿಗೆ ತೆರಳಿ ಈ ಸಮಸ್ಯೆ ಪರಿಹಾರಕ್ಕೆ ಜನಜಾಗೃತಿ ಮೂಡಿಸುವಂತೆ ಮನವಿ ಸಲ್ಲಿಸಿದ್ದಾರೆ.

ರೈತ ಎನ್ನುವ ಕಾರಣಕ್ಕೆ ಯಾರು ಹೆಣ್ಣು ಕೊಡುತ್ತಿಲ್ಲ ಎಂದು ಅಸಮಾಧಾನಗೊಂಡ ಯುವ ರೈತರ ತಂಡವೊಂದು ತಹಸೀಲ್ದಾರರ ಬಳಿ ಹೋಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೊಸಳ್ಳಿ ಗ್ರಾಮದಲ್ಲಿ ತಹಸೀಲ್ದಾರ್ ಅಶೋಕ್ ಶಿಗ್ಗಾಂವಿ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ಮಧ್ಯ ಬಂದ ಯುವ ರೈತರ ತಂಡವೊಂದು ದೌಡಾಯಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ತಹಶಿಲ್ದಾರರಿಗೆ ಪತ್ರವೊಂದನ್ನು ಕೊಟ್ಟಿದ್ದು, ಆ ಪತ್ರದಲ್ಲಿ, ‘ನಾವು ರೈತ ಕುಟುಂಬದ ಮಕ್ಕಳಾಗಿದ್ದು, ನಾವು ನಮ್ಮ ಬಳವಣಿಗೆಗೆ ಕೃಷಿಯನ್ನೇ ಅವಲಂಬಿಸಿದ್ದೇವೆ. ಏಕೆಂದರೆ ರೈತರನ್ನು ದೇಶದ ಬೆನ್ನೆಲುಬು ಅಂತಾರೆ. ದೇಶ ಕಾಯಲು ಸೈನಿಕ ಬೇಕು. ಅನ್ನ ನೀಡಲು ರೈತ ಬೇಕು. ಆದರೆ ರೈತರ ಮಕ್ಕಳಿಗಾಗಿ ನಾವು ಸಹ ಕೃಷಿಯನ್ನು ಅವಲಂಬಿಸುತ್ತೇವೆ. ಇವತ್ತೀನ ದಿನದಲ್ಲಿ ರೈತರ ಮಕ್ಕಳಿಗೆ ಕನ್ಯೆಯನ್ನು ನೀಡಲು ನಿರಾಕರಿಸುತ್ತಿದ್ದಾರೆ. ಏಕೆಂದರೆ ನೌಕರಿ ಇದ್ದರೆ ಮಾತ್ರ ಹೆಣ್ಣನ್ನು ಕೋಡುತ್ತಾರೆ. ಈ ಕುರಿತು ಸರಕಾರ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಜಾಗೃತಿ ಮೂಡಿಸಬೇಕು.

‘ದೇಶಕ್ಕೆ ಅನ್ನ ನೀಡಲು ರೈತಬೇಕು. ಆದರೆ ಆತನಿಗೆ ಕನ್ಯೆ ನೀಡಲು ಜನ ಹಿಂದೇಟು ಹಾಕುತ್ತಿದ್ದಾರೆ. ರೈತರ ಮಕ್ಕಳು ರೈತರು ಆಗಬಾರದೇ? ಈ ಬಗ್ಗೆ ಸರ್ಕಾರ ಗಮನ ಹರಿಸಿ ರೈತರಿಗೆ ಕನ್ಯೆ ನೀಡುವಂತೆ ಜನಜಾಗೃತಿ ಕಾರ್ಯಕ್ರಮ ಮಾಡಿ ಅರಿವು ಮೂಡಿಸಬೇಕು’ ಎಂದು ಕುಂದಗೋಳ ತಹಸೀಲ್ದಾರ್ ಅಶೋಕ್ ಶಿಗ್ಗಾಂವಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಸರಕಾರಿ ಶಿಕ್ಷಕರಾದ ಲಿಂಗತ್ವ ಅಲ್ಪಸಂಖ್ಯಾತರು

Donate Janashakthi Media

Leave a Reply

Your email address will not be published. Required fields are marked *