ಚಂಡೀಗಢ: ಚಂಡೀಗಢ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೈತ ಸಂಘಗಳ ಮಾತೃ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪಂಜಾಬ್‌ನಾದ್ಯಂತ ಎಲ್ಲ ಗ್ರಾಮಗಳಲ್ಲಿ ಪ್ರಶ್ನಾವಳಿಗಳೊಂದಿಗೆ ಪೋಸ್ಟರ್‌ಗಳು ಮತ್ತು ಕರಪತ್ರಗಳನ್ನು ವಿನ್ಯಾಸಗೊಳಿಸಿ ಜನರ ನಡುವೆ ಹಂಚುತ್ತಿದ್ದಾರೆ.
ಪೋಸ್ಟರ್‌ಗಳಲ್ಲಿ ಬಿಜೆಪಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ರಾಜ್ಯದ ಎಲ್ಲ ಹಳ್ಳಿಗಳಾದ್ಯಂತ ಕಠಿಣ ಪರಿಸ್ಥಿತಿಯನ್ನು ಬಿಜೆಪಿ ಎದುರಿಸುತ್ತಿದೆ. “ದೆಹಲಿ ದಾರಿ ರೈತರಿಗೆ ಮುಚ್ಚಿದಿರಿ ನಮ್ಮೂರ ದಾರಿ ಬಿಜೆಪಿಗೆ ಮುಚ್ಚಿದೆ” ಎಂದು ಪೋಸ್ಟರ್ ಹಿಡಿದು ಪ್ರತಿ ಹಳ್ಳಿಯ ಮನೆಮನೆಗೂ ಭೇಟಿ ನೀಡಿ, ಬಿಜೆಪಿ ನಡೆಯನ್ನು ಬಯಲಿಗೆಳೆಯಿರಿ, ಬಿಜೆಪಿಯನ್ನು ವಿರೋಧಿಸಿ ಮತ್ತು ಬಿಜೆಪಿಯನ್ನು ಶಿಕ್ಷಿಸಿ ಎಂದು ಹೇಳಲಾಗುತ್ತಿದೆ.
ಅಖಿಲ ಭಾರತ ಕಿಸಾನ್ ಫೆಡರೇಶನ್‌ನ ಅಧ್ಯಕ್ಷ ಪ್ರೇಮ್ ಸಿಂಗ್ ಭಂಗು ಮತ್ತು ಬಿಕೆಯು (ಲಖೋವಾಲ್) ನ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯ ಎಸ್‌ಕೆಎಂ ನಾಯಕ ಹರಿಂದರ್ ಸಿಂಗ್ ಲಖೋವಾಲ್ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಹಿರಿಯ ನಾಯಕರು, ಮೇ 21 ರಂದು ಜಾಗರಾನ್‌ನಲ್ಲಿ ನಡೆಯಲಿರುವ ಬಿಜೆಪಿ ವಿರೋಧಿ ರ್ಯಾಲಿಯನ್ನು ಯಶಸ್ವಿಗೊಳಿಸಲು ನಿರ್ಧರಿಸಿದ್ದಾರೆ. ರೈತರನ್ನು ಒಗ್ಗೂಡಿಸಲು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಾಗುವುದು. ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಶ್ನಾವಳಿ ಸಿದ್ಧಪಡಿಸಿ ಕರಪತ್ರಗಳನ್ನು ಮುದ್ರಿಸಿ ಜನರಲ್ಲಿ ಹಂಚಲು ತೀರ್ಮಾನಿಸಲಾಗಿದೆ.
ಕರ್ನಾಟಕದಲ್ಲೂ ಪೋಸ್ಟರ್ ಅಭಿಯಾನ ನಡೆಯುತ್ತಿದೆ. ಹಲವು ಯುವ ರೈತರು ಪಕೋಡಾ ಪಂಚ್ ಎಂಬ ಹೆಸರಿನ ಪೋಸ್ಟರ್ ಮೂಲಕ ಹಂಚುತ್ತಿದ್ದಾರೆ.