ಕೋಲಾರ: ಕ್ರಸ್ನಾ ಸಂಸ್ಥೆಗೆ ಬಾಕಿ ಇರುವ 140 ಕೋಟಿ ಹಣವನ್ನು ಬಿಡುಗಡೆ ಮಾಡಿ ಸ್ಥಗಿತವಾಗಿರುವ ಎಂ.ಆರ್.ಐ. ಸಿಟಿ ಸ್ಕ್ಯಾನಿಂಗ್ ಪ್ರಾರಂಭ ಮಾಡಿ ಬಡ ರೈತ ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂದು ನಗರದ ಶ್ರೀ ನರಸಿಂಹರಾಜ ಜಿಲ್ಲಾಸ್ಪತ್ರೆಯಲ್ಲಿರುವ ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್ಗೆ ಭೇಟಿ ನೀಡಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮುಖಾಂತರ ಮಾನ್ಯ ಆರೋಗ್ಯ ಸಚಿವರನ್ನು ಒತ್ತಾಯಿಸಿದರು.
ಸ್ಕ್ಯಾನಿಂಗ್ ಇಲ್ಲದೆ ಹಣ ಪಾವತಿಸಲಾಗದೆ ಪರದಾಡುತ್ತಿದ್ದ ಬಡ ರೈತ ಕೂಲಿ ಕಾರ್ಮಿಕ ರೋಗಿಗಳ ಪರದಾಟ ಮತ್ತು ವ್ಯವಸ್ಥೆಯನ್ನು ನೋಡಿ, ಕ್ರಾಪ್ಟರ್ ಕೈಗಾರಿಕಾ ಪ್ರಾರಂಭಕ್ಕೆ ಆಹ್ವಾನ ನೀಡಿಲ್ಲ ಎಂದು ಸ್ಥಳೀಯ ಶಾಸಕರು ತಮ್ಮ ಆಕ್ರೋಶವನ್ನು ಕೈಗಾರಿಕೆ ವಿರುದ್ಧ ತೋರಿಸಿರುವವರು ಬಡವರ ಬದುಕಿನ ಜೊತೆ ಜಲ್ಲಾಟವಾಡುತ್ತಿರುವ ಆರೋಗ್ಯ ಸಚಿವರ ಮೇಲೆ ಏಕೆ ತಮ್ಮ ಪ್ರತಾಪವನ್ನು ತೋರಿಸಿಲ್ಲವೆಂದು ಸ್ಥಳೀಯ ಶಾಸಕರ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸದಸ್ಯ ತನ್ನ ಗೌರವ ಧನ ಹಣದಿಂದ ಬಸ್ ತಂಗುದಾಣ ನಿರ್ಮಾಣ
ರಾಜ್ಯ ಸರ್ಕಾರ ಮತ್ತು ಮುಂಬೈ ಮೂಲದ ಕ್ರಸ್ಟ್ರಾ ಸಂಸ್ಥೆ ನಡುವಿನ ಹಗ್ಗ ಜಗ್ಗಾಟಕ್ಕೆ ಬಡವರ ಬದುಕು ಬೀದಿಗೆ ಬೀಳುತ್ತಿದೆ. ೧೪೦ ಕೋಟಿ ಬಾಕಿ ಹಣವನ್ನು ನೀಡದ ರಾಜ್ಯ ಸರ್ಕಾರದ ವಿರುದ್ಧ ಪ್ರೀ ಸ್ಕ್ಯಾನಿಂಗ್ ನೀಡುತ್ತಿದ್ದ ಸಂಸ್ಥೆ ಏಕಾಏಕಿ ಸ್ಕ್ಯಾನಿಂಗ್ ಬಂದ್ ಮಾಡಿರುವುದರಿಂದ ದುಬಾರಿ ಶುಲ್ಕ ಭರಿಸಲಾಗದೆ ತುರ್ತು ಪರಿಸ್ಥಿತಿಗಳಾದ ಅಪಘಾತ, ತಲೆನೋವು, ಮೂಳೆ, ಎದೆ ಮತ್ತಿತರ ಭೀಕರ ಪರಿಸ್ಥಿತಿ ಬಡವರಿಗೆ ವರದಾನವಾಗಬೇಕಾದ ಸರ್ಕಾರದ ಯೋಜನೆ ಶಾಪವಾಗಿ ಪರಿಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ರಸ್ನಾ
ನೀನು ಕೊಡೆ ನಾನು ಬಿಡೆ ಎಂಬ ಗಾದೆಯಂತೆ ಸಂಸ್ಥೆ ಸರ್ಕಾರವನ್ನು ಸ್ಕ್ಯಾನಿಂಗ್ ಹೆಸರಿನಲ್ಲಿ ವಂಚನೆ ಮಾಡಿದೆ ದೇಹದ ಎಲ್ಲಾ ಭಾಗಗಳನ್ನು ಸ್ಕ್ಯಾನಿಂಗ್ ಮಾಡಬೇಕಾದ ಸಂಸ್ಥೆ ಹಣಕ್ಕಾಗಿ ತಪ್ಪು ಸ್ಕ್ಯಾನ್ಗಳನ್ನು ಮಾಡಿರುವುದರಿಂದ ಸಂಸ್ಥೆಗೆ ಹಣವನ್ನು ಬಿಡುಗಡೆ ಮಾಡಲು ದಾಖಲೆಗಳನ್ನು ಕೇಳಿದ್ದೇವೆ ದಾಖಲೆಗಳು ಒದಗಿಸಿದರೆ ಹಣ ಬಿಡುಗಡೆ ಮಾಡುತ್ತೇವೆ ಎಂಬ ಉತ್ತರ ಹೇಳುವ ಆರೋಗ್ಯ ಸಚಿವರೇ ದೊಡ್ಡ ಮೊತ್ತದ ಹಣ ಏರಿಕೆ ಆಗುವ ತನಕ ಏಕೆ ಮೌನವಾಗಿದ್ದು, ಈಗ ದಾಖಲೆ ಕೊಡಿ ಎಂದರೆ ಯಾವ ನ್ಯಾಯ ಹಣ ಬಿಡುಗಡೆ ಮಾಡಿ ಸ್ಕ್ಯಾನಿಂಗ್ ಪ್ರಾರಂಭ ಮಾಡಿ ಇಲ್ಲವೇ ಸರ್ಕಾರದಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ಯಾನ್ ಮಾಡಲು ಉಚಿತ ಸೇವೆ ಆರಂಬಿಸಿ ಎಂದು ಸಲಹೆ ನೀಡಿದರು. ಕ್ರಸ್ನಾ
ಪತ್ರಿಕಾ ಹೇಳಿಕೆ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ರಾಜು, ಗಿರೀಶ್, ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಗೋವಿಂದಪ್ಪ, ಮುಂತಾದವರಿದ್ದರು.
ಇದನ್ನೂ ನೋಡಿ: “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್ | ಯು.ಎಸ್. ಸಾಮ್ರಾಜ್ಯಶಾಹಿ Janashakthi Media
