ನವದೆಹಲಿ : ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ‘ದೆಹಲಿ ಚಲೋ’ ಆರಂಭಿಸಿದ್ದು, ಡಿಸೆಂಬರ್ 6 ರವರೆಗೆ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಪ್ರತಿಭಟನಾ ನಿರತ ರೈತರು ಸೋಮವಾರ ನೋಯ್ಡಾದ ದಲಿತ ಪ್ರೇರಣಾ ಸ್ಥಳದ ಬಳಿ ಪೊಲೀಸ್ ತಡೆಗೋಡೆಗಳನ್ನು ಮುರಿದು ಕಡೆಗೆ ದೆಹಲಿಯತ್ತ ಸಾಗಿದರು.
ಭಾರತೀಯ ಕಿಸಾನ್ ಪರಿಷತ್, ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜ್ದೂರ್ ಮೋರ್ಚಾ ಹಾಗೂ ಇತರ ರೈತ ಸಂಘಟನೆಗಳು ದೆಹಲಿ ಚಲೋ ನಡೆಸುತ್ತಿವೆ. ಪರಿಣಾಮ ನೊಯ್ಡಾದ ಚಿಲ್ಲಾ ಗಡಿಯಲ್ಲಿ ಇಂದು ಭಾರಿ ವಾಹನ ದಟ್ಟಣೆ ಉಂಟಾಯಿತು. ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಪ್ರತಿಭಟನಾ ನಿರತ ರೈತರನ್ನು ತಡೆಯಲು ಉದ್ದೇಶದಿಂದ ಪೊಲೀಸರು ವಿವಿಧ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಇದನ್ನೂ ಓದಿ: ಕೌನ್ ಬನೇಗಾ ಮಹಾರಾಷ್ಟ್ರ ಸಿಎಂ!? | ಬಿಜೆಪಿಗೆ ಬಿಸಿ ತುಪ್ಪ
ರೈತರು ಕಳೆದ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ಎಸ್‌ಕೆಎಂ ಮತ್ತು ಕೆಎಂಎಂ ನೇತೃತ್ವದಲ್ಲಿ ಸಂಸತ್ ಸಂಕೀರ್ಣದ ಕಡೆಗೆ ರೈತರು ‘ದೆಹಲಿ ಚಲೋ’ ನಡೆಸುತ್ತಿರುವುದು ರೈತ ಹೋರಾಟ ತೀವ್ರಗೊಳ್ಳುವ ಮುನ್ಸೂಚನೆ ಇದೆ.
ರೈತರು, ಐದು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಹಳೆ ಸ್ವಾಧೀನ ಕಾನೂನಿನಡಿಯಲ್ಲಿ ಶೇ, 10 ರಷ್ಟು ನಿವೇಶನ ಹಂಚಿಕೆ ಮತ್ತು
ಶೇ. 64.7 ರಷ್ಟು ಪರಿಹಾರ, ಮಾರುಕಟ್ಟೆ ದರದ ನಾಲ್ಕು ಪಟ್ಟು ಪರಿಹಾರ ಮತ್ತು 2014 ರ ಜನವರಿ 1, 2014 ರ ನಂತರ ಭೂರಹಿತರ ಮಕ್ಕಳಿಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ 20 ರಷ್ಟು ನಿವೇಶನಗಳನ್ನು ನೀಡಬೇಕು. ರೈತರಿಗೆ ಉದ್ಯೋಗ ಮತ್ತು ಪುನರ್ವಸತಿ ಪ್ರಯೋಜನಗಳನ್ನು ನೀಡಬೇಕು, ಹೈಪವರ್ ಸಮಿತಿಯು ಅಂಗೀಕರಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರಿ ಆದೇಶಗಳನ್ನು ನೀಡಬೇಕು ಮತ್ತು ಜನವಸತಿ ಪ್ರದೇಶಗಳ ಸರಿಯಾದ ಇತ್ಯರ್ಥವನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನೋಯ್ಡಾ-ದೆಹಲಿಯ ಭಾಗಗಳಲ್ಲಿ ಮೂರು ಹಂತದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸುಮಾರು 5,000 ಪೊಲೀಸ್ ಅಧಿಕಾರಿಗಳು 1,000 ಪಿಎಸ್‌ಸಿ ಕಾರ್ಯಕರ್ತರು ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ತುರ್ತುಪರಿಸ್ಥಿತಿ ನಿಯಂತ್ರಣಕ್ಕಾಗಿ ಜಲಫಿರಂಗಿ, ಟಿಜಿಎಸ್ ಸ್ಕ್ವಾಡ್, ಅಗ್ನಿಶಾಮಕ ದಳ ಆಯಕಟ್ಟಿನ ಸ್ಥಳದಲ್ಲಿವೆ.
ಇದನ್ನೂ ನೋಡಿ: ವಚನಾನುಭವ 21| ಆವ ವಿದ್ಯೆಯ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು – ಅಕ್ಕಮಹಾದೇವಿ ವಚನ Janashakthi Media