ಪ್ರತಿ ಟನ್‌ ಕಬ್ಬಿಗೆ ₹3500 ಘೋಷಿಸಿ: ರಸ್ತೆಯಲ್ಲೇ ಮಲಗಿ ರೈತರು ಪ್ರತಿಭಟನೆ

ಅಥಣಿ: ರೈತರು ಕಷ್ಟಪಟ್ಟು ಬೆಳೆದ ಪ್ರತಿ ಟನ್‌ ಕಬ್ಬಿಗೆ ₹3500 ಘೋಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹೆಸರು ಸೇನೆ ವತಿಯಿಂದ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಆಶ್ರಯದಲ್ಲಿ ಪಟ್ಟಣದ ಎಲ್ಲ ಪ್ರಮುಖ ವೃತ್ತಗಳಲ್ಲಿ ನೂರಾರು ರೈತರು ಧರಣಿ ಹಮ್ಮಿಕೊಂಡು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದರ ಜೊತೆಗೆ ರಸ್ತೆಯಲ್ಲೇ ಮಲಗಿ ಆಗ್ರಹಿಸಿದರು. ಕಬ್ಬಿಗೆ

ಅಥಣಿ ಸಂಪೂರ್ಣ ಸ್ಥಬ್ದಗೊಂಡು ರೈತರಿಗೆ ಬೆಂಬಲ ನೀಡಿತು. ಪಟ್ಟಣದ ಶಿವಯೋಗಿ ವೃತ್ತದಲ್ಲಿ ನವೆಂಬರ್‌ 3ರ ತಡರಾತ್ರಿ ಒಂದು ಗಂಟೆಯಿಂದ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು. ಕಬ್ಬಿಗೆ

ದರೂರ ಸೇತುವೆ ಮೇಲೆ ಸ್ಥಳೀಯ ರೈತರು, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜು ಜಂಬಗಿ ನೇತೃತ್ವದಲ್ಲಿ,ಅಂಬೇಡ್ಕರ್ ವೃತ್ತದಲ್ಲಿ ಶಿವಾನಂದ ಖೋತ ನೇತೃತ್ವದಲ್ಲಿ, ಶಿವಯೋಗಿ ವೃತ್ತದಲ್ಲಿ ಮಹಾದೇವ ಮಡಿವಾಳ ನೇತೃತ್ವದಲ್ಲಿ, ಬಸವೇಶ್ವರ ವೃತ್ತದಲ್ಲಿ ಪ್ರಕಾಶ ಪೂಜಾರಿ ನೇತೃತ್ವದಲ್ಲಿ ಹೀಗೆ ವಿವಿಧ ರೈತ ಮುಖಂಡರ ನೇತೃತ್ವದಲ್ಲಿ ಮುಖಂಡರು ರಸ್ತೆ ತಡೆ ನಡೆಸಿದರು.

ಇದನ್ನೂ ಓದಿ: ನವೆಂಬರ್‌ 4ರಿಂದ 3 ಕೇಂದ್ರಾಡಳಿತ ಪ್ರದೇಶ, 9 ರಾಜ್ಯಗಳಲ್ಲಿ ಎಸ್‌ಐಆರ್‌ ಆರಂಭ

ರೈತ ಮುಖಂಡ ಮಹಾದೇವ ಮಡಿವಾಳ, ಸ್ವಾಮಿನಾಥನ್‌ ವರದಿ ಜಾರಿ ಮಾಡಬೇಕು. ಇಲ್ಲವಾದರೆ ಎಸ್‌ಎಪಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

‘ಗುರ್ಲಾಪುರ ಕ್ರಾಸ್‌ದಲ್ಲಿ ಅಹೋರಾತ್ರಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ಜೊತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ನಮ್ಮ ಸಂಘಟನೆ ವತಿಯಿಂದ ರಸ್ತೆ ತಡೆ ಚಳವಳಿಯೂ ಮುಂದುವರೆದಿದೆ. ಅನಿವಾರ್ಯವಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಅದಕ್ಕಾಗಿ ಮಂಗಳವಾರ ಅಥಣಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿತ್ತು’ ಎಂದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ನೇತೃತ್ವದಲ್ಲಿ ಬಿಜೆಪಿಯ ನಾಯಕರು, ಕನ್ನಡ ಪರ ಸಂಘಟನೆಗಳು, ಅಥಣಿ ನ್ಯಾಯವಾದಿಗಳ ಸಂಘ, ಅಥಣಿ ಜಿಲ್ಲಾ ಹೋರಾಟ ಸಮಿತಿ, ವಿವಿಧ ಕನ್ನಡ ಪರ ಸಂಘಟನೆ ಗಳು ಹಾಗೂ ಸಾಹಿತಿಗಳು, ನಾಗರಿಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹತ್ತಾರು ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದರು.

ಮಹಾದೇವ ಮಡಿವಾಳ, ರಾಜು ಜಂಬಗಿ, ಸಂಗಪ್ಪ ಕರಿಗಾರ, ಶಿವಾನಂದ ಖೋತ, ಮಹಾದೇವ ಕುಚನೂರ,ಪ್ರಕಾಶ ಪೂಜಾರಿ, ಮಹಮ್ಮದ ಜಮಾದಾರ, ಹಣಮಂತ ನಾಯಿಕ, ಮುಖಂಡರು ಹೋರಾಟಗಾರರು ಇದ್ದರು.

ಇದನ್ನೂ ನೋಡಿ: ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಅಸಾಧ್ಯ: ಕಿರಣ್ ಗಾಜನೂರು Janashakthi Media

Donate Janashakthi Media

Leave a Reply

Your email address will not be published. Required fields are marked *