ಆನೇಕಲ್: ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿ ಗ್ರಾಮಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿರ್ಮಿಸಲು ಉದ್ದೇಶಿಸಿರುವ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಾದ ಭೂಮಿಯನ್ನು ಸರ್ವೆ ಮಾಡಲು ಬಂದಿದ್ದ ಖಾಸಗಿ ಸಂಸ್ಥೆಯ ಪ್ರತಿನಿಧಿಗಳ ಡ್ರೋನ್ ಮತ್ತು ಲ್ಯಾಪ್‌ಟಾಪ್‌ಗೆ ರೈತರು ಬೆಂಕಿ ಹಚ್ಚಿದ್ದಾರೆ. ಕೈಗಾರಿಕಾ
ಹಂದೇನಹಳ್ಳಿ ಮತ್ತು ಮೇಡಹಳ್ಳಿ ಗ್ರಾಮಗಳ 700 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೈಗಾರಿಕ ಪ್ರದೇಶ ಸ್ಥಾಪನೆಗೆ ಕೆಐಎಡಿಬಿ ಈಚೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಕೃಷಿ ಜಮೀನುಗಳ ಸರ್ವೇಗೆ ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಡ್ರೋನ್ ಮತ್ತು ಲ್ಯಾಪ್‌ಟಾಪ್ ಜೊತೆ ಬಂದಿದ್ದರು. ಗ್ರಾಮ ಪ್ರವೇಶಿಸದಂತೆ ತಡೆಯೊಡ್ಡಿದ ರೈತರು, ಅವರಿಂದ ಡ್ರೈನ್ ಮತ್ತು ಲ್ಯಾಪ್‌ಟ್ರ್ಯಾಪ್ ಕಿತ್ತುಕೊಂಡು ಬೆಂಕಿ ಹಚ್ಚಿದರು. ನಂತರ ಬಡಿಗೆ ಮತ್ತು ದೊಣೆಗಳೊಂದಿಗೆ ಅಡ್ಡಲಾಗಿ ನಿಂತು ಸರ್ವೆ ಕಾರ್ಯ ಮಾಡದಂತೆ ತಡೆದು ವಾಪಸ್ ಕಳಿಸಿದರು.
‘ನಮ್ಮ ಭೂಮಿಯನ್ನು ನಾವೇ ರಕ್ಷಣೆ ಮಾಡಿಕೊಳ್ಳುತ್ತೇವೆ. ಭೂಮಿಯ ಉಳಿವಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ರಾಜಕಾರಣಿಗಳ ಇಲ್ಲವೇ ರಾಜಕೀಯ ಪಕ್ಷಗಳ ಬಳಿ ಹೋಗಲ್ಲ. ರಕ್ತ ಮತ್ತು ಪ್ರಾಣ ನೀಡುತ್ತೇವೆ. ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ. ನಮ್ಮ ಆಯ್ಕೆ ಸ್ಪಷ್ಟವಾಗಿದೆ’ ಎಂದು ರೈತರು ಹೇಳಿದರು.
ಇದನ್ನೂ ಓದಿ : ರೈತರಿಂದ, ರೈತರಿಗಾಗಿ, ರೈತರ ಒಳಿತಿನ ಮೇಳಗಳು ಇಂದಿನ ಅಗತ್ಯ; ಅವರೆ ಮೇಳ ಇದಕ್ಕೆ ಮಾದರಿ: ಡಿಸಿಎಂ ಡಿ. ಕೆ. ಶಿವಕುಮಾರ್
‘ರೈತರ ಕಣ್ಣು ತಪ್ಪಿಸಿ ಸರ್ವೆ ಮಾಡಲು ಕೆಐಎಡಿಬಿ ಸಿದ್ಧತೆ ನಡೆಸಿದೆ. ಸರ್ವೆಗಾಗಿ ಯಾರಾದರೂ ನಮ್ಮ ಭೂಮಿಗಳಿಗೆ ಕಾಲಿಟ್ಟರೆ ಎಲ್ಲದ್ದಕ್ಕೂ ರೈತರು ಸಿದ್ಧರಾಗಿದ್ದೇವೆ. ಬಂಗಾರದಂತಹ ಭೂಮಿಯನ್ನು ಹಾಳು ಮಾಡಲು ಕೆಐಎಡಿಬಿ ಸಿದ್ಧತೆ ನಡೆಸಿದೆ’ ಎಂದು ರೈತ ಮುಖಂಡ ಚಂದ್ರಾರೆಡ್ಡಿ, ಅಸಮಾಧಾನ ವ್ಯಕ್ತಪಡಿಸಿದರು.
ಯಾವೊಬ್ಬ ರಾಜಕಾರಣಿ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ರಾಜಕಾರಣಿಗಳು ರೈತರ ಮುಂದೆ ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ನಾಟಕ ನಿಲ್ಲಿಸಬೇಕು ಎಂದು ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಕೇಶವರೆಡ್ಡಿ, ನಾಗೇಶ್, ಅಂಬರೀಷ್, ಮುನಿಯಲ್ಲಪ್ಪ, ಶ್ರೀನಿವಾಸರೆಡ್ಡಿ, ವೇಣು ಮೊದಲಾದವರು ಭಾಗವಹಿಸಿದ್ದರು. ಜಮೀನು ಸರ್ವೇಗೆ ಬಂದಿದ್ದ ಖಾಸಗಿ ಪ್ರತಿನಿಧಿಗಳ ಡ್ರೋನ್ ಮತ್ತು ಲ್ಯಾಪ್‌ಟಾಪ್ ಸುಟ್ಟು ಹಾಕಿರುವ ರೈತರು -ಚಂದ್ರಾರೆಡ್ಡಿ, ರೈತ ಮುಖಂಡಹತ್ತು ಗುಂಟೆ ಜಮೀನು ಹತ್ತು ಮಕ್ಕಳನ್ನು ಸಾಕಿದೆ. ಹಳ್ಳಿ ಬದುಕು ರೈತರ ಜೀವನ ತಿಳಿಯದ ರಾಜಕಾರಣಿಗಳು ಮತ್ತು ಕೆಐಎಡಿಬಿ ಅಧಿಕಾರಿಗಳು ಸೇರಿಕೊಂಡು ರೈತರ ಜೀವನ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ರೈತರು ಭೂಮಿಯನ್ನು ನಂಬಿ ಜೀವನ ಮಾಡುತ್ತೇವೆ. ಭೂಮಿಯನ್ನೇ ಕಿತ್ತುಕೊಂಡರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಕೆಐಎಡಿಬಿಯು ಹಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರಾಥಮಿಕ ಸೂಚನೆ ಹಿಂಪಡೆಯಬೇಕು.
ಇದನ್ನೂ ನೋಡಿ : ದಮನಿತರ ಪರವಾಗಿ ಕೆಂಬಾವುಟ ಮಾತ್ರವೇ ನಿಲ್ಲಲು ಸಾಧ್ಯ- ಎಂ.ಎ.ಬೇಬಿ