ರೈತರಿಂದ ಭಾರೀ ಪ್ರತಿಭಟನೆ: ಪಂಜಾಬ್‌-ಯುಪಿಯಲ್ಲಿ ರೈಲು ತಡೆದು ಆಕ್ರೋಶ

ನವದೆಹಲಿ: ಕಬ್ಬಿನ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ರೈತರು ಪಂಜಾಬ್‌ ಮತ್ತು ಉತ್ತರ ಪ್ರದೇಶಗಳಲ್ಲಿ ರೈಲು ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಚಂಡೀಗಢದ ಜಲಾಂದರ್‌ ರಸ್ತೆ ಬಳಿ ರೈಲು ತಡೆ ನಡೆಸಿ ರೈತರು ರೈಲ್ವೆ ಹಳಿಗಳ ಮೇಲೆ ಕೂತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ರೈಲು ಸಂಚಾರ ಹಾಗೂ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾದವು ಎಂದು ಮಾಧ್ಯಮಗಳು ಮಾಧ್ಯಮಗಳು ವರದಿ ಮಾಡಿದೆ. ಫಿರಾಜ್‌ಪುರ ವಲಯದ ರೈಲ್ವೇ ಅಧಿಕಾರಿಗಳ ಮಾಹಿತಿ ಪ್ರಕಾರ, ರೈತರು ಜಲಾಂದರ್‌ ರಸ್ತೆ ಬಳಿ ನಡೆಸಿದ ರೈಲು ತಡೆಯಿಂದಾಗಿ ಸುಮಾರು 50 ರೈಲುಗಳು ರದ್ದಾಗಿವೆ. 54 ರೈಲುಗಳ ಹಳಿ ಬದಲಿಸಿ ಪರ್ಯಾಯ ಮಾರ್ಗಕ್ಕೆ ಅನುವುಮಾಡಿಕೊಡಲಾಗಿದೆ ಅಥವಾ ಕೆಲವು ರೈಲಯಗಳನ್ನು ಅರ್ಧದಲ್ಲೇ ಸ್ಥಗಿತವಾಗಿದೆ ಎಂದು ತಿಳಿಸಿದ್ದಾರೆ.

ರೈತರು ಕಬ್ಬಿನ ಬಾಕಿ ಮತ್ತು ಕಬ್ಬಿನ ಬೆಲೆ ಏರಿಕೆಗೆ ಸಂಬಂಧಿಸಿದ ಮನವಿಯನ್ನು ಸ್ವೀಕರಿಸಿ ಎಂದು ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನೆನ್ನೆಯಿಂದ ಅನಿರ್ದಿಷ್ಟ ಅವಧಿಗೆ ಆಂದೋಲನ ಆರಂಭಿಸಿದ ರೈತರು ಇಂದು ರೈಲು ತಡೆ ನಡೆಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ ಹಾಗೂ ಬೇಡಿಕೆ ಈಡೇರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದಿದ್ದಾರೆ. ಇನ್ನು ರೈಲು ತಡೆ ನಡೆಸುವುದಾಗಿ ಹೇಳಿಕೆ ನೀಡಿದ್ದ ರೈತರು ತಾವು ಅಗತ್ಯ ತುರ್ತು ವಾಹನಗಳಿಗೆ ಸಂಚಾರಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ರೈತರು ತುರ್ತು ವಾಹನಗಳಿಗೆ ಸಂಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವರದಿಗಳಾಗಿವೆ.

ಪ್ರತಿಭಟನಾನಿರತ ರೈತರು ಜಲಂಧರ್ ಜಿಲ್ಲೆಯ ಧನೋವಲಿ ಗ್ರಾಮದ ಬಳಿಯ ಜಲಾಂದರ್‌- ಫಗ್ವಾರಾ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದಿದ್ದಾರೆ. ಪ್ರತಿಭಟನೆಯ ತೀವ್ರತೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಸಂಚಾರದಟ್ಟಣೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಜಲಂಧರ್, ಅಮೃತಸರ ಮತ್ತು ಪಠಾಣ್‌ಕೋಟ್‌ನಲ್ಲಿ ಪ್ರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಯ ತೀವ್ರತೆಯಿಂದಾಗಿ ಸ್ಥಳೀಯ ಆಡಳಿತವು ಕೆಲವು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಲು ಸೂಚನೆಗಳನ್ನು ನೀಡಿವೆ.

ಈ ರೈತರುಗಳು ಕಬ್ಬಿನ ರಾಜ್ಯ ಖಾತರಿ ಬೆಲೆಯನ್ನು (ಎಸ್‌ಎಪಿ) ಅಧಿಕ ಮಾಡುವಂತೆ ಪಂಜಾಬ್‌ ಸರ್ಕಾರವವನ್ನು ಆಗ್ರಹಿಸಿದ್ದಾರೆ. ಹಾಗೆಯೇ 200-250 ಕೋಟಿ ರೂಪಾಯಿ ಬಾಕಿ ಪಾವತಿಯನ್ನು ನೀಡುವಂತೆ ಪಂಜಾಬ್‌ ಸರ್ಕಾರವನ್ನು ರೈತರು ಒತ್ತಾಯಿಸಿದ್ದಾರೆ. ಈ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆಯಿಂದ ಹಿಂಜರಿಯಲಾರೆವು ಎಂದು ದೃಢವಾಗಿ ರೈತರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆ

ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆಯಿಂದಾಗಿ ನಾಲ್ಕು ರೈಲುಗಳು ರದ್ದಾಗಿದೆ. ಇದರಿಂದಾಗಿ ರೈಲ್ವೇ ಅಧಿಕಾರಿಗಳು ಮೊರದಬಾದ್‌ನಲ್ಲಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿದೆ. ಈ ಕೌಂಟರ್‌ಗಳಲ್ಲಿ ಪ್ರಯಾಣಿಕರಿಗೆ ರೈಲು ಟಿಕೆಟ್‌ ದರವನ್ನು ಮರು ಪಾವತಿ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೊರದಬಾದ್‌ ರೈಲ್ವೇ ನಿಲ್ದಾಣದ ಅಧಿಕಾರಿ ಜೆ ಕೆ ಠಾಕೂರ್ ಮಾತನಾಡಿ, “ಮೊರದಬಾದ್‌ನಲ್ಲಿ ಎರಡು ರೈಲುಗಳು ಹಾಗೂ ಬರೇಲಿಯಲ್ಲಿ ಎರಡು ರೈಲುಗಳು ರೈತರ ಪ್ರತಿಭಟನೆಯಿಂದಾಗಿ ರದ್ದಾಗಿದೆ. ನಾವು ಪ್ರಯಾಣಿಕರಿಗೆ ರೈಲು ಟಿಕೆಟ್‌ ದರವನ್ನು ಮರು ಪಾವತಿ ಮಾಡಲು ಕೌಂಟರ್‍ ತೆರೆದಿದ್ದೇವೆ,” ಎಂದು ಮಾಹಿತಿ ನೀಡಿದ್ದಾರೆ.

ಕಳೆದ ನವೆಂಬರ್‌ 26 ರಿಂದ ದೇಶಾದಾದ್ಯಂತ ರೈತರು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಬೇಡಿಕೆಗಳಿಗೆ ಸ್ಪಂದಿಸದ ಕೇಂದ್ರ ಸರಕಾರವು ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಲು ಮುಂದಾಗುತ್ತಿಲ್ಲ. ಸರ್ಕಾರ ಕೆಲವು ತಿದ್ದು ಪಡಿ ಮಾಡಲು ಒಪ್ಪಿದೆಯಾದರೂ ಆ ಕಾನೂನನ್ನೇ ರದ್ದು ಮಾಡಲು ಒಪ್ಪುತ್ತಿಲ್ಲ. ಆದರೆ ರೈತರು ಮಾತ್ರ ಕಾನೂನು ಸಂಪೂರ್ಣವಾಗಿ ರೈತರಿಗೆ ಮಾರಕ. ಆ ಮೂರು ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಪಟ್ಟುಹಿಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *