ಸೋಲಾಪುರ : ರೈತನೊಬ್ಬ 5 ಕ್ವಿಂಟಲ್ ಈರುಳ್ಳಿ ಮಾರಾಟ ಮಾಡಿ ಕೇವಲ 2 ರೂಪಾಯಿ ಚೆಕ್ನೊಂದಿಗೆ ಅತೀವ ನಿರಾಶೆಯಿಂದ ಮನೆಗೆ ಮರಳಿದ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.
ಸೊಲ್ಲಾಪುರದ ಬಾರ್ಶಿ ತಹಸಿಲ್‌ನಲ್ಲಿ ವಾಸವಾಗಿರುವ 63 ವರ್ಷದ ರಾಜೇಂದ್ರ ಚವ್ಹಾಣ ಎಂಬ ರೈತ ಸೊಲ್ಲಾಪುರ ಮಾರುಕಟ್ಟೆ ಎಪಿಎಂಸಿ ಯಾರ್ಡ್‌ನಲ್ಲಿ ಈರುಳ್ಳಿಯನ್ನು ಪ್ರತಿ ಕೆಜಿಗೆ 1 ರೂಪಾಯಿಗೆ ಮಾರಾಟ ಮಾಡಿದ್ದು, ಒಟ್ಟು 512 ಕೆಜಿಗೆ 512 ರೂಪಾಯಿ ಸಿಕ್ಕಿದೆ.
58 ವರ್ಷದ ರೈತ ರಾಜೇಂದ್ರ ತುಕಾರಾಂ ಚವ್ಹಾಣ ಅವರು ತಮ್ಮ ತೋಟದಲ್ಲಿ ಬೆಳೆದ ಐದು ಕ್ವಿಂಟಲ್ ಈರುಳ್ಳಿಯನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಲು ತಂದಿದ್ದರು. ಮಾರುಕಟ್ಟೆಯ ಸೂರ್ಯ ಟ್ರೇಡರ್ಸ್ನ ವ್ಯಾಪಾರಿ ಈರುಳ್ಳಿಯನ್ನು ತೂಕಕ್ಕೆ ಹಾಕಿದ್ದು, ಬೆಲೆ ಕುಸಿತದ ಕಾರಣಕ್ಕೆ ಕೆಜಿಗೆ 1 ರೂ.ನಂತೆ ಲೆಕ್ಕ ಹಾಕಿದ್ದಾನೆ. ಈರುಳ್ಳಿ ತಂದ ವಾಹನ ಬಾಡಿಗೆ, ಸಾಗಾಣಿಕೆ ಖರ್ಚು, ಸುಂಕದ ಹಣ ಕಡಿತಗೊಳಿಸಿ ಕೊನೆಗೆ ರೈತನಿಗೆ ಕೊಟ್ಟಿದ್ದು 2 ರೂಪಾಯಿ. ಈ ಹಣದ ಸ್ಲಿಪ್ ಬರೆದು 2 ರೂಪಾಯಿ ಚೆಕ್ ನೀಡಿದ್ದಾನೆ. ಆ ಚೆಕ್ನಲ್ಲಿ ಮಾರ್ಚ್ 8, 2023 ಎಂದು ದಿನಾಂಕ ನಮೂದಾಗಿದೆ. ರೈತ ತೀವ್ರ ಹತಾಶೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ते बघा निर्लज्ज व्यापार्याला दोन रूपयांचा चेक देताना लाज कशी वाटली नाही. व्यापारी शेतकर्यांना सांगतो १५ दिवसाने हा चेक वटेल. pic.twitter.com/415yjz98O7
— Raju Shetti (@rajushetti) February 22, 2023
“ಲೋಡಿಂಗ್, ಕೂಲಿ, ಸಾಗಣೆ ಮತ್ತು ಇತರ ಶುಲ್ಕವಾಗಿ 509.51 ರೂಪಾಯಿ ಕಡಿತಗೊಳಿಸಿ ನನಗೆ 2.49 ಬಂದಿದೆ. ಇದು ನನಗೆ ಮತ್ತು ರಾಜ್ಯದ ಇತರ ಈರುಳ್ಳಿ ಬೆಳೆಗಾರರಿಗೆ ಮಾಡಿದ ಅವಮಾನ. ಅಂತಹ ಆದಾಯ ಬಂದರೆ ನಾವು ಹೇಗೆ ಬದುಕುತ್ತೇವೆ?” ರೈತರ ಈರುಳ್ಳಿಗೆ ಉತ್ತಮ ಬೆಲೆ ಸಿಗಬೇಕು ಮತ್ತು ಹಾನಿಗೊಳಗಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರ ಚವ್ಹಾಣ್ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಇತರ ಎಲ್ಲಾ ಈರುಳ್ಳಿ ಉತ್ಪಾದಿಸುವ ರಾಜ್ಯಗಳು ಈರುಳ್ಳಿಯ ಬಂಪರ್ ಬೆಳೆಯನ್ನು ಕಂಡಿವೆ, ಇದರ ಪರಿಣಾಮವಾಗಿ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಅನೇಕ ರೈತರು ರಾಜ್ಯಾದ್ಯಂತ ಈರುಳ್ಳಿ ಮಾರಾಟದಿಂದ ತಮ್ಮ ಉತ್ಪಾದನಾ ವೆಚ್ಚವನ್ನು ಸಹ ಪಡೆಯುತ್ತಿಲ್ಲ. ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್‌ನ ಲಾಸಲ್‌ಗಾಂವ್ ಎಪಿಎಂಸಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಗಟು ಈರುಳ್ಳಿ ಬೆಲೆ ಸುಮಾರು ಶೇ.70ರಷ್ಟು ಕುಸಿದಿದೆ.
ಕರ್ನಾಟಕದಲ್ಲೂ ಇಂತಹದ್ದೆ ಘಟನೆ ನಡೆದಿತ್ತು. ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ ಗದಗದ ರೈತರೊಬ್ಬರೊಬ್ಬರ ಕೈಗೆ ಸಿಕ್ಕ ಹಣ ಕೇವ 8.36 ರೂಪಾಯಿ. ಯಶವಂತಪುರ ಮಾರುಕಟ್ಟೆಯಲ್ಲಿಈರುಳ್ಳಿ ಮಾರಾಟ ಮಾಡಲು ಸುಮಾರು 50 ರೈತರು 415 ಕಿಮೀ ನಿಂದ ಬರುತ್ತಾರೆ, ಕ್ವಿಂಟಾಲ್ ಈರುಳ್ಳಿಗೆ 500 ರು ಇದ್ದ ಬೆಲೆ ಏಕಾ ಏಕಿ 200 ರುಪಾಯಿಗೆ ಕುಸಿದಿತ್ತು. ಅಷ್ಟು ದೂರದಿಂದ ಬಂದು ಮತ್ತೆ ವಾಪಸ್ಸ ಊರಿಗೆ ಈರುಳ್ಳಿ ತೆಗೆದುಕೊಂಡು ಹೋಗವುದು ಕಷ್ಟ ಎಂದು ಮಾರಾಟ ಮಾಡಿದ್ದರು. ಬಿಲ್ ವಿತರಿಸಿದ ಸಗಟು ವ್ಯಾಪಾರಿ ಈರುಳ್ಳಿಯನ್ನು ಕ್ವಿಂಟಾಲ್ಗೆ 200 ರೂ. ಎಂದು ಮೌಲ್ಯೀಕರಿಸಿದ್ದ ಆದರೆ ಪೋರ್ಟರ್ ಶುಲ್ಕವಾಗಿ 24 ರೂ., ಸರಕು ಸಾಗಣೆಗೆ 377.64 ರೂ.ಗಳನ್ನು ಕಡಿತಗೊಳಿಸಿದ ನಂತರ ಪಾವಡೆಪ್ಪ ಹಳ್ಳಿಕೇರಿ ಅವರಿಗೆ 8.36 ರೂ.ಗಳನ್ನು ನೀಡಿದ್ದರು.
ಇದನ್ನೂ ಓದಿ : 205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ!