ಬಳ್ಳಾರಿ | ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ; ಕೆಪಿಆರ್‌ಎಸ್‌

ಬಳ್ಳಾರಿ :  ಜಿಲ್ಲೆಯ ಸಂಡೂರು ತಾಲೂಕಿನ ರಣಜಿತ್ ಪುರ ಗ್ರಾಮದ ರೈತರ ಹೊಲಗಳಿಗೆ ಬಿಎಮ್ಎಂ ಕಾರ್ಖಾನೆಯು, ಜೆಸಿಬಿ ಮೂಲಕ ಅಕ್ರಮವಾಗಿ ನುಗ್ಗಿ ಬೆಳೆದ ಬೆಳೆಗಳನ್ನು ನಾಶ ಮಾಡಿಲಾಗಿದೆ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಬಳ್ಳಾರಿ ಜಿಲ್ಲಾ ಸಮಿತಿ ತಿಳಿಸಿದೆ. ನ್ಯಾಯ 

ರೈತರು ಬೆಳೆದಂತಹ  ಬೆಳೆ ಕೃಷಿ ಭೂಮಿಗಳನ್ನು ಸರ್ವನಾಶ ಮಾಡಿ ಬಂಜರು ಭೂಮಿಗಳೆಂದು ಕನ್ವರ್ಶನ್ ಮಾಡಿ ಕಾರ್ಖಾನೆ ನಿರ್ಮಿಸಲಾಗಿದೆ. ಇದರಿಂದ ಅಲ್ಲಿನ  ರೈತರಿಗೆ ಮೋಸ ತೊಂದರೆ ನೀಡುವ ಕೆಲಸವನ್ನು ಬಿಎಮ್‌ಎಂ ಕಾರ್ಖಾನೆಯವರು ಮಾಡುತ್ತಿದ್ದಾರೆ. ಅಲ್ಲದೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಪಟ್ಟಾ ಜಮೀನುಗಳನ್ನು ರೈತರು ಮಾರಾಟ ಮಾಡದಿದ್ದರೂ ಪಹಣಿಯಲ್ಲಿ KIADB ಎಂದು ನಮೂದಿಸಲಾಗಿದೆ, ಇದನ್ನು ಪ್ರಶ್ನಿಸಿದ ರೈತರ ವಿರುದ್ಧ ಸ್ಥಳೀಯ ಕಾರ್ಖಾನೆಯ ಗುಲಾಮರನ್ನು ಬಳಸಿಕೊಂಡು ಪೋಲಿಸ್ ಠಾಣೆ ಯಲ್ಲಿ ದೂರು ನೀಡಲಾಗಿದೆ ಎಂದರು.

ಇದನ್ನೂ ಓದಿ:ಸರ್ಕಾರಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಎಂ.ಆರ್ ಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕೆಪಿಆರ್‌ಎಸ್‌ಪ್ರತಿಭಟನೆ

ಈ ಘಟನೆ ಸಂಬಂಧ ಭೇಟಿ ನೀಡಲು ಹೋದ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌ ) , ರಾಜ್ಯ ರೈತ ಸಂಘ- ಹಸಿರು ಸೇನೆ , ಡಿವೈಎಫ್ ಐ ನಾಯಕರ ವಾಹನಗಳನ್ನು ತಡೆದು ನಿಲ್ಲಿಸಿದ್ದರೂ ಲೆಕ್ಕಿಸದೇ ವಾಹನಗಳನ್ನು ಅಲ್ಲಿಗೆ ಬಿಟ್ಟು ನೇರವಾಗಿ ದೌರ್ಜನ್ಯಕ್ಕೊಳಗಾದ ರೈತರ ಹೊಲಗಳನ್ನು ವೀಕ್ಷಿಸಲಾಯಿತು ಎಂದರು.

ಆ ಜಮೀನುಗಳಲ್ಲಿನ ಗುಡಿಸಲನ್ನು ಹಾಗೂ ಕುಡಿಯುವ ನೀರಿನ ತೊಟ್ಟಿಗಳನ್ನು ಕೆಡವಿ ,ಬೆಳೆದಿದ್ದ ಈರುಳ್ಳಿ ಬೆಳೆಗಳನ್ನು ಜೆಸಿಬಿ ಮೂಲಕ ನಾಶಪಡಿಸಲಾಗಿದೆ ಎಂದು ಆರೋಪಿಸಿದರು.

ಈ ಘಟನೆ ವಿರುದ್ಧ ಅಲ್ಲಿಯೇ ರೈತರ ಜೊತೆಗೆ ನಡೆದ ಸಭೆಯಲ್ಲಿ , ಕೆಪಿಆರ್‌ಎಸ್‌ ನ ಜಿಲ್ಲಾ ಅಧ್ಯಕ್ಷರಾದ ವಿ ಎಸ್ ಶಿವಶಂಕರ್ ಅವರು ಮಾತನಾಡಿ , ಡಿಸೆಂಬರ್ 9, 2023 ರಂದು ಪತ್ರಿಕಾ ಗೋಷ್ಠಿ ನಡೆಸುವುದು ಹಾಗೂ ರಸ್ತೆ ತಡೆ ಚಳವಳಿ ನಡೆಸುವ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ರೈತರಿಗೆ ಅಭಯ ನೀಡಿದರು‌.

ಈ ಸಂದರ್ಭದಲ್ಲಿ ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ದುರುಗಮ್ಮ ಕರ್ನಾಟಕ ಪ್ರಾಂತ ರೈತ ಸಂಘದ ಸಂಡೂರು ತಾಲೂಕು ಕಾರ್ಯದರ್ಶಿ ಖಲಂದರ್, ಎಸ್,ಕಾಲುಬಾ, ಇತರರು ಜೊತೆಗಿದ್ದರು. ನ್ಯಾಯ 

ವಿಡಿಯೋ ನೋಡಿ:ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media

Donate Janashakthi Media

Leave a Reply

Your email address will not be published. Required fields are marked *